Vrusshabha Box Office Day 2 ; ಎರಡೇ ದಿನ ಮಕಾಡೆ ಮಲಗಿದ ವೃಷಭ-ನಂದಕಿಶೋರ್ ನಂಬಿ ಕಂಗೆಟ್ರಾ ಮೋಹನ್‌ಲಾಲ್ ?

ಪ್ರತಿಭಾ ಪಲಾಯನ ಅನ್ನುವುದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದ್ಲೂ ಪ್ರತಿಭೆ ಇದ್ದೋರು ಒಂದ್ಕಡೆಯಿಂದ ಮತ್ತೊಂದ್ಕಡೆ ಹೋಗೋದು ನಡೀತಾನೆ ಇದೆ. ಅದರಲ್ಲಿಯೂ ಕನ್ನಡ ಚಿತ್ರರಂಗದಿಂದ ಇಲ್ಲಿಯವರೆಗೆ ಅನೇಕ ನಾಯಕಿಯರು ಪರಭಾಷೆಗೆ ವಲಸೆ ಹೋಗಿದ್ದಾರೆ. ಕೆಲವರು ಅಲ್ಲಿಯೇ ಬದುಕು ಕಟ್ಟಿಕೊಂಡರೆ ಇನ್ನು ಹಲವರು ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಮರಳಿ ಬಂದಿದ್ದಾರೆ. ಇನ್ನೂ ಹೀಗೆ ಗುಳೆ ಹೋಗುವರಲ್ಲಿ...

ಕೆಲವರು ಚಿತ್ರ ಮತ್ತು ಪಾತ್ರ ಚೆನ್ನಾಗಿದೆ ಎಂದು ಹೋದರೆ, ಇನ್ನು ಕೆಲವರು ಇಲ್ಲಿ ಸಿಗುವ ಸಂಭಾವನೆಗಿಂತ ಹೆಚ್ಚು ಅಲ್ಲಿ ಸಿಗುತ್ತೆ ಎಂದು ಹೋಗುತ್ತಾರೆ. ಎಲ್ಲವೂ ಅವರವರ ನಿರ್ಧಾರ ಮತ್ತು ಬದುಕಾದರೂ ಈಗೀಗ ನಾಯಕಿಯರ ಹಿಂದೆ ಹಿಂದೆಯೇ ಕನ್ನಡದ ನಿರ್ದೇಶಕರು ಕೂಡ ಪರಭಾಷೆಯಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆದರೆ. ಪ್ರಶಾಂತ್ ನೀಲ್ ಅವರನ್ನು ಹೊರತು ಪಡಿಸಿದರೆ ಬೇರೆಯವರಿಂದ ಪ್ರೇಕ್ಷಕರ ಹೃದಯ ಗೆಲ್ಲಲು ಸಾಧ್ಯವಾಗಿಲ್ಲ. ತಮ್ಮ ಪ್ರಯತ್ನದಲ್ಲಿ ಕೂಡ ಇವರಿಗೆ ಗೆಲುವು ಸಿಗುತ್ತಿಲ್ಲ. ಉದಾಹರಣೆಗೆ ನಂದಕಿಶೋರ್.

Vrusshabha Box Office Day 2 Mohanlal s Epic Actioner Crashes With 32 Lakh Fails to Cross 1 Cr Mark

ಹೌದು, ನಂದಕಿಶೋರ್.. ಕನ್ನಡದ ಪ್ರತಿಭಾವಂತ ನಿರ್ದೇಶಕ. ಆದರೆ, ಅದ್ಯಾಕೋ ಆರಂಭದ ನಾಲ್ಕು ಸಿನಿಮಾಗಳಾದ ''ವಿಕ್ಟರಿ''..''ಅಧ್ಯಕ್ಷ''.. ''ರನ್ನ''.. ''ಮುಕುಂದ ಮುರಾರಿ'' ಹೊರತು ಪಡಿಸಿದರೆ ನಂದ ಅವರ ಪಾಲಿಗೆ ಗೆಲುವಿನ ಕದ ತೆರೆಯುತ್ತಲೇ ಇಲ್ಲ. ಹಾಗಂಥ ನಂದಕಿಶೋರ್ ಸುಮ್ಮನೆ ಕೂಡ ಕುಂತಿಲ್ಲ. ಒಂದಾದ ಮೇಲೊಂದು ಪ್ರಯತ್ನ ಮಾಡುತ್ತಲೇ ಇದ್ದಾರೆ. ತಮ್ಮ ಈ ಪ್ರಯತ್ನದಲ್ಲಿ ಮುಗ್ಗರಿಸಿ ಬೀಳುತ್ತಲೇ ಇದ್ದಾರೆ. ಉದಾಹರಣೆಗೆ ''ವೃಷಭ''.

''ವೃಷಭ'' .. ಮಲಯಾಳಂನಲ್ಲಿ ನಂದಕಿಶೋರ್ ಮಾಡಿದ ಮೊದಲ ಪ್ರಯತ್ನ. ತಮ್ಮ ಮೊದಲ ಪ್ರಯತ್ನದಲ್ಲಿಯೇ ಮೋಹನ್ ಲಾಲ್ ಅವರಿಗೆ ಆಕ್ಷನ್ ಕಟ್ ಹೇಳುವ ಸೌಭಾಗ್ಯ ನಂದಕಿಶೋರ್ ಅವರಿಗೆ ಸಿಕ್ಕಿತ್ತು. ಆದರೆ ಸಿಕ್ಕ ಈ ಸುವರ್ಣ ಅವಕಾಶವನ್ನು ನಂದಕಿಶೋರ್ ಸದುಪಯೋಗ ಮಾಡಿಕೊಳ್ಳುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಇದಕ್ಕೆ ಕೈಗನ್ನಡಿಯೇ ಚಿತ್ರದ ಗಳಿಕೆ.

Vrusshabha Box Office Day 2 Mohanlal s Epic Actioner Crashes With 32 Lakh Fails to Cross 1 Cr Mark

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಡಿಸೆಂಬರ್ 25ರಂದು ತೆರೆಗೆ ಬಂದ ''ವೃಷಭ'' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತೆ, ಗೆಲ್ಲುತ್ತೆ ಎಂಬ ಭಾವನೆ ಹಲವರಲ್ಲಿತ್ತು. ಆದರೆ.. ಆಗಿದ್ದೇ ಬೇರೆ. ಮೋಹನ್ ಲಾಲ್ ಅಂತಹ ಸೂಪರ್ ಸ್ಟಾರ್ ಇದ್ದರೂ ಕೂಡ ಮೊದಲ ದಿನ ಕೇವಲ ₹60 ಲಕ್ಷ ಗಳಿಸಿದ್ದ ''ವೃಷಭ'', ಎರಡನೇ ದಿನ ಅಂದರೆ ನಿನ್ನೆ ( ಡಿಸೆಂಬರ್ 26 ) ₹32 ಲಕ್ಷ ಮಾತ್ರ ಗಳಿಸಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ. ಈ ಮೂಲಕ ಎರಡು ದಿನವಾದರೂ ಕೂಡ ಒಂದು ಕೋಟಿಯನ್ನು ಗಳಿಸುವಲ್ಲಿ ಚಿತ್ರ ವಿಫಲವಾಗಿದೆ.

ಮೋಹನ್ ಲಾಲ್ ಅವರ ವರ್ಚಸ್ಸಿಗೆ ಇತ್ತೀಚಿನ ದಿನಗಳಲ್ಲಿ ಇದು ಬಿದ್ದ ಭಾರೀ ಪೆಟ್ಟು ಎನ್ನುವುದು ನಿಮಗೆ ಗೊತ್ತಿರಲಿ. ಕೊರೊನಾದ ನಂತರದ ದಿನಗಳಲ್ಲಿ ಇಂತಹದ್ದೊಂದು ಹಿನ್ನೆಡೆಯನ್ನು ಮೋಹನ್ ಲಾಲ್ ಎರಡನೇ ಬಾರಿ ಅನುಭವಿಸಿದ್ದಾರೆ. 2023ರಲ್ಲಿ ತೆರೆಗೆ ಬಂದಿದ್ದ ''ಅಲೋನ್'' ಎರಡು ದಿನದಲ್ಲಿ ಕೇವಲ ₹53 ಲಕ್ಷವನ್ನು ಮಾತ್ರ ಗಳಿಸಿತ್ತು. ಈಗ ''ವೃಷಭ'' ಎರಡು ದಿನದಲ್ಲಿ ಕೇವಲ ₹92 ಲಕ್ಷವನ್ನಷ್ಟೇ ಗಳಿಸಿದೆ. ಈ ಮೂಲಕ ಮೋಹನ್ ಲಾಲ್ ವೃತ್ತಿ ಬದುಕಿನಲ್ಲಿ ಕಳಪೆ ಗಳಿಕೆ ಕಂಡ ಚಿತ್ರಗಳ ಸಾಲಿನಲ್ಲಿ ಸೇರಿಕೊಂಡಿದೆ.

ಅಚ್ಚರಿ ಅಂದರೆ ''ವೃಷಭ್'' ಪ್ಯಾನ್ ಇಂಡಿಯಾ ಲೆವಲ್‌ನಲ್ಲಿ ತೆರೆಗೆ ಬಂದಿದೆ. ಆದರೆ ನೋಡುವ ಉತ್ಸಾಹ ಮಾತ್ರ ಎಲ್ಲಿಯೂ ಕಂಡು ಬರುತ್ತಿಲ್ಲ. ಬಹುತೇಕರಿಗೆ ಮೋಹನ್ ಲಾಲ್ ''ವೃ‍ಷಭ'' ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ ಮತ್ತು ಆ ಚಿತ್ರ ಬಿಡುಗಡೆಯಾಗಿದೆ ಎಂಬ ವಿಚಾರ ಕೂಡ ಗೊತ್ತಿದ್ದಂತೆ ಇಲ್ಲ. ಇನ್ನು ನೋಡಿದವರು ಕೂಡ ಚಿತ್ರದ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿಲ್ಲ. ಈ ಎಲ್ಲ ವಿಚಾರಗಳು ಚಿತ್ರಕ್ಕೆ ಹಿನ್ನೆಡೆಯಾದಂತೆ ಇವೆ.

ಒಟ್ನಲ್ಲಿ ''ವೃಷಭ'' ಮೊದಲೆರಡು ದಿನದಲ್ಲಿ ಕೇವಲ ₹92 ಲಕ್ಷ ಮಾತ್ರ ಗಳಿಸಿದೆ. ಇಂದು (ಡಿಸೆಂಬರ್ 27 ) ಕೂಡ ಚೇತರಿಕೆಯ ಯಾವ ಲಕ್ಷಣ ಕೂಡ ಕಂಡು ಬರುತ್ತಿಲ್ಲ. ಹೀಗಾಗಿ 10 ಕೋಟಿಯ ಗಡಿಯನ್ನಾದರೂ ಚಿತ್ರ ತಲುಪುತ್ತಾ..? ಎಂಬ ಕುಹುಕದ ಮಾತು ಸದ್ಯ ಕೇರಳದಲ್ಲಿ ಕೇಳಿ ಬರುತ್ತಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
Vrusshabha Box Office Collection Day 2: Mohanlal’s latest actioner registers a sharp decline. See the latest earning reports, theater occupancy, and why Vrusshabha failed to cross ₹1 crore in its first two days.
Read more about: mohan lal nanda kishore mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X