Vrusshabha Box Office Day 3;ಮೋಹನ್ ಲಾಲ್ ಕೆರಿಯರ್‌ನಲ್ಲೇ ಅತಿ ದೊಡ್ಡ ಹೊಡೆತ,ಮೂರೇ ದಿನ ವೃಷಭ ಢಮಾರ್

ನಾಲ್ಕು ದಶಕಗಳ ತಮ್ಮ ಸುದೀರ್ಘ ವೃತ್ತಿ ಬದುಕಿನಲ್ಲಿ ಇಲ್ಲಿಯವರೆಗೆ 400ಕ್ಕೂ ಅಧಿಕ ಚಿತ್ರಗಳನ್ನು ಮಾಡಿರುವ ಹೆಗ್ಗಳಿಕೆ ಮೋಹನ್ ಲಾಲ್ ಅವರದ್ದು. ತಮ್ಮ ಅಭಿನಯದಿಂದ ಅಸಂಖ್ಯಾತ.. ಅಗಣಿತ.. ಅಭಿಮಾನಿಗಳ ಹೃದಯವನ್ನು ಗೆದ್ದ ಇವರನ್ನು ಇವರ ಅಭಿಮಾನಿ ಬಳಗ ಮತ್ತು ಭಾರತೀಯ ಚಿತ್ರರಂಗ ''ಲಾಲೆಟ್ಟನ್'' ಎಂಬ ಹೆಸರಿಂದನೇ ಕರೆಯುತ್ತೆ. ಜಯಘೋಷ ಮೊಳಗಿಸುತ್ತೆ. ಇಂಥಾ ಮೋಹನ್ ಲಾಲ್ ಈ ವರ್ಷ..

''ಎಲ್ 2 ಎಂಪುರಾನ್'' .. ''ತುಡರುಂ'' .. ''ಹೃದಯಪೂರ್ವಂ'' .. ಚಿತ್ರಗಳ ಮೂಲಕ ಮನರಂಜನೆಯ ರಸದೌತಣ ಬಡಿಸಿದ್ದರು. ಬಾಕ್ಸಾಫೀಸ್‌ನಲ್ಲಿ ಕೂಡ ಗೆದ್ದಿದ್ದರು. ಈ ಮೂರೇ ಚಿತ್ರಗಳ ಜೊತೆ ಮೋಹನ್ ಲಾಲ್ ಈ ವರ್ಷಕ್ಕೆ ಮಂಗಳ ಹಾಡಿದ್ದರೆ ಬಹುಶಃ ನೆಮ್ಮದಿಯಾಗಿರುತ್ತಿದ್ದರು. ಇವರ ಅಭಿಮಾನಿಗಳು ಕೂಡ ಈ ವರ್ಷ ಸೋಲಿಲ್ಲದ ಸರದಾರನಾದರು ಎಂದು ಖುಷಿಯಾಗಿರುತ್ತಿದ್ದರು.

vrusshabha-box-office-nightmare-mohanlal-s-70-crore-epic-crashes-with-mere-lakhs-on-day-3

ಆದರೆ .. ಇರಲಾರದೆ ಇರುವೆ ಬಿಟ್ಕಂಡಂಗೆ ಮೋಹನ್ ಲಾಲ್ ಮತ್ತೊಂದು ಚಿತ್ರವನ್ನು ಕೂಡ ಮಾಡಿದರು. ಆ ಚಿತ್ರದ ಹೆಸರು ''ವೃಷಭ''. ಕನ್ನಡದ ನಿರ್ದೇಶಕ ನಂದಕಿಶೋರ್ ನಿರ್ದೇಶನದ ಚಿತ್ರ ಇದು. ಸದ್ಯ ಈ ಚಿತ್ರ ಮಾಡಿದ ತಪ್ಪಿಗೆ ಮೋಹನ್ ಲಾಲ್ ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಬಾಕ್ಸಾಫೀಸ್‌ ಮೇಲೆ ಹದ್ದಿನ ಕಣ್ಣಿಡುವ ''ಸ್ಯಾಕ್ನಿಲ್'' ಪ್ರಕಾರ ''ವೃಷಭ'' ಮಕಾಡೆ ಮಲಗಿದೆ.

ಹೌದು, ಸಾಮಾನ್ಯವಾಗಿ ಹಬ್ಬ ಹರಿದಿನದಂದು ಚಿತ್ರ ಬಿಡುಗಡೆಯಾದರೆ ಆ ಚಿತ್ರ ಹೇಗೆ ಇರಲಿ ಅಭಿಮಾನಿಗಳಿಂದ ಚಿತ್ರಮಂದಿರ ಮೊದಲ ಮೂರು ದಿನ ತುಂಬಿ ತುಳುಕುತ್ತೆ. ಬಾಕ್ಸಾಫೀಸ್‌ನಲ್ಲಿ ಮೊದಲ ಮೂರು ದಿನ ಹಣದ ಸದ್ದು ಕೂಡ ಕೇಳಿ ಬರುತ್ತೆ. ಇನ್ನೂ ಮೋಹನ್ ಲಾಲ್ ಅಂತಹ ಸೂಪರ್ ಸ್ಟಾರ್‌ಗಳ ಚಿತ್ರ ಬಂದರಂತೂ ನೂಕು ನುಗ್ಗಲಿನ ವಾತಾವರಣ ಕಂಡು ಬರುತ್ತೆ. ಆದರೆ, ''ವೃಷಭ'' ವಿಚಾರದಲ್ಲಿ ಎಲ್ಲವೂ ತದ್ವಿರುದ್ದ. ಕ್ರಿಸ್ಮಸ್ ಹಬ್ಬದ ಪ್ರಯುಕ್ತ ತೆರೆಗೆ ಬಂದ ವೃಷಭ ನೋಡಲು ನೂಕು ನುಗ್ಗಲು ಕೂಡ ಆಗಲಿಲ್ಲ. ಬಾಕ್ಸಾಫೀಸ್‌ನಲ್ಲಿ ಹಣದ ಸದ್ದು ಕೂಡ ಕೇಳಿ ಬರುತ್ತಿಲ್ಲ. ಇದಕ್ಕೆ ಪುರಾವೆ ಎನ್ನುವಂತೆ ಈ ಚಿತ್ರ ಮೂರು ದಿನದಲ್ಲಿ ಕೇವಲ ₹ 1.11 ಕೋಟಿಯನ್ನು ಮಾತ್ರ ಗಳಿಸಿದೆ ಎಂದು ''ಸ್ಯಾಕ್ನಿಲ್'' ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

vrusshabha-box-office-nightmare-mohanlal-s-70-crore-epic-crashes-with-mere-lakhs-on-day-3


ಸ್ಯಾಕ್ನಿಲ್ ಪ್ರಕಾರ ವೃಷಭ ಚಿತ್ರದ ಮೂರು ದಿನದ ಗಳಿಕೆ ಈ ಕೆಳಗಿನಂತೆ ಇದೆ.

ಮೊದಲ ದಿನ [ ಗುರುವಾರ ] ₹60 ಲಕ್ಷ
ಎರಡನೇ ದಿನ [ ಶುಕ್ರವಾರ ] ₹32 ಲಕ್ಷ
ಮೂರನೇ ದಿನ [ ಶನಿವಾರ ] ₹19 ಲಕ್ಷ * ಅಂದಾಜು

ಒಟ್ಟು ಗಳಿಕೆ ₹1.11 ಕೋಟಿ

ಸದ್ಯ ''ವೃಷಭ'' ಚಿತ್ರದ ಈ ಗಳಿಕೆ ಮಲಯಾಳಂ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಮೋಹನ್ ಲಾಲ್ ಅವರಂತಹ ಸೂಪರ್ ಸ್ಟಾರ್ ಇದ್ದರೂ ಚಿತ್ರ ಇಂತಹ ದಯನೀಯ ಸ್ಥಿತಿಗೆ ತಲುಪಿದ್ದೇಕೆ ಮತ್ತು ಹೇಗೆ ಎನ್ನುವುದಕ್ಕೆ ಉತ್ತರ ಹುಡುಕುವ ಪ್ರಯತ್ನವನ್ನು ಕೂಡ ಮಾಲಿವುಡ್ ಮಾಡುತ್ತಿದೆ. ಅಂದ್ಹಾಗೇ ಈ ಚಿತ್ರಕ್ಕೆ ಹತ್ತು.. ಇಪ್ಪತ್ತು ಅಲ್ಲ ಬರೋಬ್ಬರಿ 70 ಕೋಟಿಯನ್ನು ನೀರಿನಂತೆ ಸುರಿಯಲಾಗಿದೆ. ಸದ್ಯದ ಪರಿಸ್ಥಿತಿಯನ್ನು ನೋಡಿದರೆ ಈ 70 ಕೋಟಿಯಲ್ಲಿ 5 ಕೋಟಿ ಕೂಡ ಮರಳಿ ಬರುವುದು ಅನುಮಾನ ಎನ್ನುವ ಮಾತು ಕೇಳಿ ಬರುತ್ತಿದೆ. ಈಗಾಗಲೇ ಹಲವಡೆ ''ವೃಷಭ'' ಚಿತ್ರವನ್ನು ಚಿತ್ರಮಂದಿರಗಳಿಂದ ಎತ್ತಂಗಡಿ ಮಾಡಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
A ₹70 crore budget and a legendary lead, yet Vrusshabha is struggling to stay afloat. See the shocking Day 3 numbers that have left the industry stunned.
Read more about: mohanlal mollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X