War 2 Box Office Day 2 ; ಕೂಲಿ ಅಬ್ಬರದ ನಡುವೆಯೂ ಹೃತಿಕ್ -ತಾರಕ್ ಭರಾಟೆ, ವಾರ್ 2 ಎರಡನೇ ದಿನ ಗಳಿಸಿದ್ದೆಷ್ಟು ?

ಸಾಮಾನ್ಯವಾಗಿ ಹಬ್ಬ ಹರಿದಿನಗಳಂದು .. ರಜಾದಿನಗಳಂದು .. ಬಿಡುಗಡೆಯಾದ ಚಿತ್ರಕ್ಕೆ ಭಾರೀ ಡಿಮ್ಯಾಂಡ್ ಇರುತ್ತೆ. ಅದರಲ್ಲಿಯೂ ಆ ಚಿತ್ರದಲ್ಲಿ ಸೂಪರ್ ಸ್ಟಾರ್‌ಗಳಿದ್ದರೆ ಮುಗೀತು. ಚಿತ್ರಮಂದಿರದ ಎದುರು ಜನಜಂಗುಳಿ ಕಂಡು ಬರುತ್ತದೆ. ಚಿತ್ರ ಚೆನ್ನಾಗಿದೆಯಾ.. ಚೆನ್ನಾಗಿಲ್ವಾ ? ಯಾವುದನ್ನೂ ಲೆಕ್ಕಿಸದೇ ಮಜಾ ಮಾಡುವ ಉದ್ದೇಶದಿಂದ ರಜಾದಿನದಂದು ಬಂದ ಚಿತ್ರವನ್ನು ಅನೇಕರು ನೋಡುತ್ತಾರೆ. ಈ ಮೂಲಕ ತೀರಾ ಕಳಪೆ ಚಿತ್ರವನ್ನು ಕೂಡ ಗೆಲುವಿನ ದಡದತ್ತ ಕರೆದೊಯ್ಯುತ್ತಾರೆ. ಉದಾಹರಣೆಗೆ ''ವಾರ್ 2''.

ಹೌದು. ''ವಾರ್ 2'' ಈ ಬಾರಿಯ ಸ್ವಾತಂತ್ರೋತ್ಸವದ ಪ್ರಯುಕ್ತ ಬಿಡುಗಡೆಯಾದ ಸಿನಿಮಾ. 2019ರಲ್ಲಿ ಬಂದಿದ್ದ ವಾರ್ ಚಿತ್ರದ ಸಿಕ್ವೆಲ್. ಈ ಹಿನ್ನೆಲೆ ಈ ಚಿತ್ರದ ಮೇಲೆ ಅಪಾರ ನಿರೀಕ್ಷೆಗಳಿದ್ದವು. ಇನ್ನು ಈ ಬಾರಿ ಹೃತಿಕ್ ರೋಷನ್ ಎದುರು ಚಿತ್ರದಲ್ಲಿ ಜ್ಯೂ.ಎನ್.ಟಿ.ಆರ್ ಅಬ್ಬರಿಸಿದ ಹಿನ್ನೆಲೆ ದಕ್ಷಿಣದಲ್ಲಿ ಕೂಡ ಈ ಚಿತ್ರದ ಕುರಿತು ಕುತೂಹಲ ಇತ್ತು. ಆದರೆ ಈ ಚಿತ್ರ ನಿರೀಕ್ಷೆಯನ್ನು ಹುಸಿಯಾಗಿಸಿತು.

War 2 Celebrates Independence Day with a Bang Raking in 108 Crore in Two Days

ಇದಕ್ಕೆ ಪೂರಕವಾಗಿ ಮೊದಲ ದಿನ [ ಆಗಸ್ಟ್ 14 ] ಚಿತ್ರವನ್ನು ನೋಡಿದ ಬಹುತೇಕರು ಚಿತ್ರದ ಕುರಿತು ನೆಗೆಟಿವ್ ಮಾತುಗಳನ್ನಾಡಿದರು. ಇನ್ನೂ ವಿಮರ್ಷಕರು ನಿರ್ದೇಶಕ ಅಯಾನ್ ಮುಖರ್ಜಿ ವಿರುದ್ಧ ಕೆಂಡ ಕಾರಿದ್ದರು. ಸುವರ್ಣ ಅವಕಾಶ ಕೈ ಚೆಲ್ಲಿದ್ದಾರೆ ಎಂದು ಜರಿದಿದ್ದರು.

ಆದರೂ ಕೂಡ ಈ ಚಿತ್ರವನ್ನು ನಿನ್ನೆ [ ಆಗಸ್ಟ್ 15 ] ಜನ ಮುಗಿ ಬಿದ್ದು ನೋಡಿದ್ದಾರೆ. ಇದಕ್ಕೆ ಕೈಗನ್ನಡಿ ಎಂಬಂತೆ ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಮೊದಲ ದಿನಕ್ಕಿಂತ ಎರಡನೇ ದಿನ ಪ್ರೇಕ್ಷಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ವರದಿ ಮಾಡಿದ್ದು ಮೊದಲ ದಿನ ₹ 51.5 ಕೋಟಿ ಗಳಿಸಿದ್ದ ''ವಾರ್ 2'' ಸ್ವಾತಂತ್ರೋತ್ಸವದ ದಿನದಂದು ಭಾರತದಲ್ಲಿ ಅಂದಾಜು ₹ 56.50 ಕೋಟಿ ಗಳಿಸಿದೆ ಎಂದು ಹೇಳಿದೆ. ಈ ಮೂಲಕ ಎರಡು ದಿನಗಳಲ್ಲಿ ಚಿತ್ರ ₹ 108 ಕೋಟಿಯನ್ನು ಕೊಳ್ಳೆ ಹೊಡೆದಿದೆ ಎಂದು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಸ್ಯಾಕ್ನಿಲ್ ಪ್ರಕಾರ ಮೊದಲ ಎರಡು ದಿನದ ಗಳಿಕೆ ಈ ಕೆಳಗಿನಂತೆ ಇದೆ

ಮೊದಲ ದಿನ [ ಗುರುವಾರ ] - ₹ 51.5 ಕೋಟಿ

ಎರಡನೇ ದಿನ [ ಶುಕ್ರವಾರ ] - ₹ 56.50 ಕೋಟಿ * ಅಂದಾಜು

ಒಟ್ಟು ಗಳಿಕೆ - ₹ 108 ಕೋಟಿ

ಇನ್ನು '' ವಾರ್ 2'' ನೋಡುವ ಉತ್ಸಾಹ ಉತ್ತರ ಭಾರತದವರಿಗಿಂತ ದಕ್ಷಿಣ ಭಾರತದಲ್ಲಿಯೇ ಹೆಚ್ಚು ಕಂಡು ಬಂದಿದೆ. ''ಸ್ಯಾಕ್ನಿಲ್'' ಪ್ರಕಾರ ಬೆಂಗಳೂರಿನಲ್ಲಿ ''ವಾರ್ 2'' ಚಿತ್ರದ ಹಿಂದಿ ಅವತರಣಿಕೆಗೆ 70.50% ಆಕ್ಯುಪೆನ್ಸಿ ಕಂಡು ಬಂದಿದ್ದು ಹೈದರಾಬಾದ್‌ನಲ್ಲಿ 80.00% ಚೆನ್ನೈನಲ್ಲಿ 94.75% ಆಕ್ಯುಪೆನ್ಸಿ ಕಂಡು ಬಂದಿದೆ.

war-2-celebrates-independence-day-with-a-bang-raking-in-108-crore-in-two-days

ಒಟ್ನಲ್ಲಿ ''ಕೂಲಿ'' ಅಬ್ಬರದ ನಡುವೆಯೂ ಕೂಡ ಸದ್ಯ ''ವಾರ್ 2'' ಚಿತ್ರದ ಗಳಿಕೆಯಲ್ಲಿ ಏರಿಕೆ ಕಂಡು ಬಂದಿದ್ದು ಕೇವಲ ಎರಡೇ ದಿನದಲ್ಲಿ ಚಿತ್ರ ನೂರು ಕೋಟಿಯ ಗಡಿಯನ್ನು ದಾಟಿದೆ. ಇಂದು ಮತ್ತು ನಾಳೆ ಚಿತ್ರಕ್ಕೆ ಮತ್ತು ಚಿತ್ರತಂಡಕ್ಕೆ ಮಹತ್ವವಾಗಿದ್ದು ಈ ಎರಡು ದಿನದಲ್ಲಿ ಚಿತ್ರ ಎಷ್ಟು ಗಳಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

English summary
War 2's box office collection soars past ₹100 crore in just two days. Discover how the Hrithik Roshan and Jr. NTR starrer is dominating the charts with record-breaking numbers.
Read more about: hrithik roshan jr ntr bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X