War- 2 Day 1 collection: ಮಾನ ಉಳಿಸಿದ ತಾರಕ್; ತಕ್ಕ ಮಟ್ಟಿಗೆ ಕಲೆಕ್ಷನ್ ಮಾಡಿದ 'ವಾರ್-2'
ಹೃತಿಕ್ ರೋಷನ್ ಹಾಗೂ ಜ್ಯೂ. ಎನ್‌ಟಿಆರ್ ನಟನೆಯ 'ವಾರ್- 2' ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಭಾರೀ ಹೈಪ್ ಕ್ರಿಯೇಟ್ ಮಾಡಿದ್ದ ಸಿನಿಮಾ ಪ್ರೇಕ್ಷಕರಿಗೆ ನಿರಾಸೆ ಮೂಡಿಸಿದೆ. ಆದರೂ ಸ್ವಾತಂತ್ರ್ಯ ದಿನಾಚರಣೆ ವೀಕೆಂಡ್‌ನಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಲೆಕ್ಕಾಚಾರ ಶುರುವಾಗಿದೆ. ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭಾರೀ ಪೈಪೋಟಿ ಕೊಡ್ತಿದೆ.
ಚಿತ್ರಕ್ಕೆ ತಕ್ಕಮಟ್ಟಿಗೆ ಅಡ್ವಾನ್ಸ್ ಬುಕ್ಕಿಂಗ್ ಆಗಿರಲಿಲ್ಲ. ಲೋಕೇಶ್ ಕನಕರಾಜ್ ಹಾಗೂ ರಜನಿಕಾಂತ್ ಕಾಂಬಿನೇಷನ್ 'ಕೂಲಿ' ಸಿನಿಮಾ ಕ್ರೇಜ್ ಮುಂದೆ 'ವಾರ್- 2' ಡಲ್ ಎನಿಸಿದ್ದು ಸುಳ್ಳಲ್ಲ. ಹಾಗಾಗಿ ಜನ 'ಕೂಲಿ' ಚಿತ್ರವನ್ನು ಮೊದಲ ಆಯ್ಕೆ ಮಾಡಿಕೊಂಡಿದ್ದರು. ಇನ್ನು 'ವಾರ್- 2' ಸಿನಿಮಾ ಮೊದಲಿನಿಂದಲೂ ಅಷ್ಟೇನು ಹೈಪ್ ಕ್ರಿಯೇಟ್ ಮಾಡಲಿಲ್ಲ. ಟೀಸರ್, ಟ್ರೈಲರ್, ಸಾಂಗ್ಸ್ ಅಷ್ಟಾಗಿ ಸದ್ದು ಮಾಡಲಿಲ್ಲ. ತೆಲುಗು ನಟ ಜ್ಯೂ. ಎನ್‌ಟಿಆರ್ ಚಿತ್ರದಲ್ಲಿ ನಟಿಸಿದ್ದು ಕೂಡ ದೊಡ್ಡದಾಗಿ ಮ್ಯಾಜಿಕ್ ಮಾಡಲಿಲ್ಲ.

ಇದೀಗ 'ಕೂಲಿ' ಹಾಗೂ 'ವಾರ್-2' ಎರಡೂ ಸಿನಿಮಾಗಳು ಬ್ಯುಸಿಯಾಗಿದೆ. ಎರಡಕ್ಕೂ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಮುಂದಿನ ದಿನಗಳಲ್ಲಿ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿರುತ್ತದೆ? ಯಾವ ಸಿನಿಮಾ ಗೆಲ್ಲುತ್ತದೆ ಎಂದು ಕಾದು ನೋಡಬೇಕಿದೆ. ಮೊದಲ ದಿನದ ಕಲೆಕ್ಷನ್ ವಿಚಾರದಲ್ಲಿ 'ಕೂಲಿ' ಕೈ ಮೇಲಾಗಿದೆ. 'ವಾರ್- 2' ಪರವಾಗಿಲ್ಲ ಎನಿಸಿಕೊಂಡಿದೆ.
ವಾರ್-2 ಕಲೆಕ್ಷನ್
ಅಯಾನ್ ಮುಖರ್ಜಿ ನಿರ್ದೇಶನದ ಆಕ್ಷನ್ ಥ್ರಿಲ್ಲರ್ 'ವಾರ್- 2' ಸಿನಿಮಾ ಮೊದಲ ದಿನ 60 ಕೋಟಿ ರೂ. ಕಲೆಕ್ಷನ್ ಮಾಡಿರುವುದಾಗಿ ವರದಿಯಾಗಿದೆ. sacnilk.com ವೆಬ್‌ಸೈಟ್ ವರದಿ ಪ್ರಕಾರ ಹಿಂದಿ ಬೆಲ್ಟ್‌ನಲ್ಲಿ 29 ಕೋಟಿ ರೂ. ಹಾಗೂ ತೆಲುಗು ಬೆಲ್ಟ್‌ನಲ್ಲಿ 23.25 ಕೋಟಿ ರೂ. ಗಳಿಕೆ ಕಂಡಿದೆ. ಜ್ಯೂ. ಎನ್‌ಟಿಆರ್ ನಟಿಸಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಆಂಧ್ರ, ತೆಲಂಗಾಣದಲ್ಲಿ ಚಿತ್ರದ ಗಳಿಕೆ ಚೆನ್ನಾಗಿದೆ. ವಿಶ್ವದಾದ್ಯಂತ ಎಲ್ಲಾ ಭಾಷೆಗಳಿಂದ ಸೇರಿ ಒಟ್ಟು 60 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಲೆಕ್ಕಚಾರ ನಡೀತಿದೆ.

ಮಿಶ್ರ ಪ್ರತಿಕ್ರಿಯೆ
ಇತ್ತೀಚಿನ ವರ್ಷಗಳಲ್ಲಿ ಪ್ರೇಕ್ಷಕರ ನಿರೀಕ್ಷೆ ಹೆಚ್ಚುತ್ತಿದೆ. ಎಲ್ಲರನ್ನು ರಂಜಿಸಿ ಗೆಲ್ಲುವುದು ಕಷ್ಟದ ಕೆಲಸ. ಸ್ಟಾರ್ ನಟರು 2 ವರ್ಷಕ್ಕೆ ಒಂದು ಸಿನಿಮಾ ಮಾಡುವುದು, ಸ್ಟಾರ್ ನಟರನ್ನು ಒಟ್ಟಿಗೆ ಸೇರಿಸಿ ಸಿನಿಮಾ ಕಟ್ಟಿಕೊಡುವುದು ಸಹಜವಾಗಿಯೇ ಕುತೂಹಲ ಮೂಡಿಸುತ್ತದೆ. ನಿರೀಕ್ಷೆ ತಲುಪದೇ ಇದ್ದಾಗ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸುತ್ತದೆ. ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್‌ನಲ್ಲೇ ಇದು ಬಹಳ 'ವಾರ್- 2' ಕೆಟ್ಟ ಸಿನಿಮಾ ಎಂದು ಕೆಲವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ತರಣ್ ಆದರ್ಶ್ ಸೇರಿ ಬಾಲಿವುಡ್ ಸಿನಿ ಪಂಡಿತರೇ ಸಿನಿಮಾ ಚೆನ್ನಾಗಿಲ್ಲ ಎಂದುಬಿಟ್ಟಿದ್ದಾರೆ.
ಡಲ್ ಆದ 'ವಾರ್- 2'
ಯಶ್ ರಾಜ್ ಫಿಲ್ಮ್ಸ್ ಸ್ಪೈ ಯೂನಿವರ್ಸ್ ಸಿನಿಮಾಗಳಿಗೆ ಹೋಲಿಸಿದರೆ 'ವಾರ್- 2' ಕಲೆಕ್ಷನ್ ಕಮ್ಮಿ ಎಂದು ಲೆಕ್ಕ ಹಾಕುತ್ತಿದ್ದಾರೆ. 6 ವರ್ಷಗಳ ಹಿಂದೆ ಬಂದಿದ್ದ 'ವಾರ್' ಸಿನಿಮಾ ಮೊದಲ ದಿನ 53 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಸಲ್ಮಾನ್ ಖಾನ್ ನಟನೆಯ 'ಟೈಗರ್- 3' ಸಿನಿಮಾ 44.5 ಕೋಟಿ ರೂ. ಬಾಚಿತ್ತು. ಆದರೆ ಇವೆರಡು ಹಿಂದಿಯಲ್ಲಿ ಮಾತ್ರ ಬಿಡುಗಡೆ ಆಗಿದ್ದವು. 'ವಾರ್- 2' ಚಿತ್ರಕ್ಕೆ ತಾರಕ್ ಬಲ ಸಿಕ್ಕಿದೆ. ತೆಲುಗಿನಲ್ಲಿ ಸಿನಿಮಾ 23 ಕೋಟಿ ರೂ. ಗಳಿಸಿದೆ. ಇಲ್ಲದೇ ಹೋಗಿದ್ದರೆ 30 ಕೋಟಿ ರೂ.ಗೆ ಕಲೆಕ್ಷನ್ ಇಳಿಯುತ್ತಿತ್ತು.


Click it and Unblock the Notifications











