War 2 Box Office: ತೆವಳುತ್ತಿರುವ ಹೃತಿಕ್-ತಾರಕ್ 'ವಾರ್', ಹಾಕಿದ ಬಂಡವಾಳ ಆದರೂ ಮರಳಿ ಬರುತ್ತಾ?
ಈಗೀಗ ಸುಮಾರು ಸಿನಿಮಾಗಳು ಬರುತ್ತಿವೆ, ಹೋಗುತ್ತಿವೆ. ಆದರೆ ಗೆಲುವು ಮಾತ್ರ ಬಹುತೇಕರ ಕೈಗೆ ಸಿಗುತ್ತಿಲ್ಲ. ಹೇಗಾದರೂ ಮಾಡಿ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಎಳೆದುತರಲು ಚಿತ್ರತಂಡಗಳು ಹರಸಾಹಸ ಮಾಡುತ್ತಿವೆ. ನಾನಾ ಕಸರತ್ತುಗಳನ್ನು ಮಾಡುತ್ತಿವೆ. ಆದರೆ.. ಅಲ್ಲೊಂದು.. ಇಲ್ಲೊಂದು ಸಿನಿಮಾಗಳು ಮಾತ್ರ ಗೆಲ್ಲುತ್ತಾವೆ. ಪವಾಡಗಳನ್ನು ಮಾಡುತ್ತಾವೆ. ಮಿಕ್ಕಂತೆ ಫಲಿತಾಂಶ ಮಾತ್ರ ಶೂನ್ಯ. ಇದು ಕೇವಲ ಕನ್ನಡ ಚಿತ್ರರಂಗದ ಕಥೆ ಮಾತ್ರ ಅಲ್ಲ, ಎಲ್ಲ ಭಾಷೆಯ ಕಥೆ ಕೂಡ ಒಂದೇ ತರ ಇದೆ.
ಇನ್ನು ಮೊದಲಾದರೆ ಹೊಸಬರು ಮಾತ್ರ ಗೆಲ್ಲಲು ಹೆಣಗುತ್ತಿದ್ದರು. ಹೊಸಬರ ಪ್ರಯತ್ನ-ಪ್ರಯೋಗಗಳು ಸ್ಟಾರ್‌ಗಳ ಬಿಗ್ ಬಜೆಟ್ ಕಮರ್ಷಿಯಲ್ ಚಿತ್ರಗಳ ಮುಂದೆ ಕಳೆದು ಹೋಗುತ್ತಿದ್ದವು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಹೊಸಬರ ಮುಂದೆ ಸೂಪರ್ ಸ್ಟಾರ್‌ಗಳು ಮಂಕಾಗುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಹಣ ಗಳಿಸಲು ಪರದಾಡುತ್ತಿದ್ದಾರೆ. ಉದಾಹರಣೆಗೆ ಹೃತಿಕ್ ರೋಷನ್ ಮತ್ತು ಜ್ಯೂ.ಎನ್.ಟಿ.ಆರ್ ಅಭಿನಯದ ''ವಾರ್ 2''.

ಹೌದು, ''ವಾರ್ 2'' ಬಾಕ್ಸಾಫೀಸ್‌ನಲ್ಲಿ ತೆವಳುತ್ತಾ ಸಾಗುತ್ತಿದೆ. ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಪ್ರಕಾರ ಈ ಚಿತ್ರ ಈ ಹತ್ತು ದಿನದಲ್ಲಿ ಭಾರತದಲ್ಲಿ ಕೇವಲ ₹210.4 ಕೋಟಿಯನ್ನು ಮಾತ್ರ ಗಳಿಸಿದೆ. ನಿನ್ನೆ (ಆಗಸ್ಟ್ 22) ಚಿತ್ರ ಗಳಿಸಿದ್ದು ಕೇವಲ ₹2.15 ಕೋಟಿಯನ್ನು ಮಾತ್ರ.
ದಿನದಿಂದ ದಿನಕ್ಕೆ ಈ ಚಿತ್ರದ ಗಳಿಕೆ ಕುಸಿಯುತ್ತಿದೆ ಹೊರತು ಏರಿಕೆಯಂತೂ ಆಗುತ್ತಿಲ್ಲ. ಈ ಹಿನ್ನೆಲೆ ಹಾಕಿದ ಬಂಡವಾಳವಾದರು ಮರಳಿ ಬರುತ್ತಾ ? ಎನ್ನುವ ಪ್ರಶ್ನೆ ಈಗ ಎದ್ದಿದೆ.
ಯಾಕೆಂದರೆ ''ಹಿಂದೂಸ್ತಾನ್ ಟೈಮ್ಸ್'' ವರದಿಯ ಪ್ರಕಾರ ಈ ಚಿತ್ರಕ್ಕೆ ₹400 ಕೋಟಿಯನ್ನು ಯಶ್ ರಾಜ್ ಸಂಸ್ಥೆ ಹೂಡಿದೆ. ಇದರಲ್ಲಿ ನಿರ್ಮಾಣದ ವೆಚ್ಚದ ಜೊತೆ ಪ್ರಚಾರದ ವೆಚ್ಚ ಕೂಡ ಸೇರಿದೆ. ಇನ್ನು ಭಾರತದಲ್ಲಿ ಪರದಾಡುತ್ತಿರುವ ''ವಾರ್ 2'' ಚಿತ್ರವನ್ನು ವಿದೇಶದ ಪ್ರೇಕ್ಷಕರು ಕೂಡ ಕೈ ಬಿಟ್ಟಿದ್ದಾರೆ. ಅಲ್ಲಿಂದ ಕೂಡ ಹೆಚ್ಚಿನ ಹಣ ಬಂದಿಲ್ಲ.
''koimoi'' ವರದಿಯ ಪ್ರಕಾರ ಹೊರ ದೇಶದಿಂದ ಈ ಚಿತ್ರಕ್ಕೆ ಕೇವಲ ₹70.15 ಮಾತ್ರ ಹರಿದು ಬಂದಿದೆ. ಅಲ್ಲಿಗೆ ಭಾರತ ಮತ್ತು ಹೊರದೇಶದ ಗಳಿಕೆಯನ್ನು ಸೇರಿಸಿದರೆ ಚಿತ್ರದ ಗಳಿಕೆ ₹300 ಕೋಟಿಯ ಆಸು ಪಾಸಿದೆ ಅಷ್ಟೇ. ಇನ್ನೂ ಹೆಚ್ಚೆಂದರೆ 20 ರಿಂದ 30 ಕೋಟಿ ಹಣವನ್ನು ಮಾತ್ರ ಈ ಚಿತ್ರ ಗಳಿಸಬಹುದು. ಸ್ಯಾಟ್ ಲೈಟ್ ಮತ್ತು ಇತರೆ ಹಕ್ಕುಗಳನ್ನು ಪರಿಗಣಿಸಿದರೆ ನಿರ್ಮಾಪಕರಿಗೆ ಹಾಕಿದ ಹಣ ಮರಳಿ ಬಂದಂತೆ ಆಗಬಹುದಾದರೂ ಕೂಡ ಈ ಚಿತ್ರವನ್ನು ಈ ವರ್ಷದ ಡಿಸಾಸ್ಟರ್ ಚಿತ್ರಗಳಲ್ಲಿ ಒಂದು ಎಂದೇ ಪರಿಗಣಿಸಲಾಗುತ್ತೆ.

ಯಾಕೆಂದರೆ ಹೃತಿಕ್ ಮತ್ತು ಜ್ಯೂ.ಎನ್.ಟಿ.ಆರ್ ಸಾಮಾನ್ಯ ಹೆಸರಲ್ಲ. ಇಬ್ಬರಿಗೆ ಅವರದ್ದೇ ಆದ ಅಸಂಖ್ಯಾತ ಅಭಿಮಾನಿಗಳಿದ್ದಾರೆ. ಈ ಹಿನ್ನೆಲೆ ನಿರ್ಮಾಣ ಸಂಸ್ಥೆ ಕಡಿಮೆ ಅಂದರೂ ಚಿತ್ರ ₹1000 ಕೋಟಿಯನ್ನು ಗಳಿಸುವ ವಿಶ್ವಾಸವನ್ನು ಹೊಂದಿತ್ತು. ತಮ್ಮ ಈ ಹಿಂದಿನ ಸ್ಪೈ ಯೂನಿವರ್ಸ್ ಚಿತ್ರಗಳಿಗಿಂತ ಹೆಚ್ಚು ಅದ್ಧೂರಿತನದಿಂದ ಈ ಚಿತ್ರವನ್ನು ತೆರೆಗೆ ತಂದಿತ್ತು. ಆದರೆ ಎಲ್ಲಾ ಲೆಕ್ಕಾಚಾರಗಳು ಈಗ ತಲೆಕೆಳಗಾಗಿದೆ.
ಒಟ್ನಲ್ಲಿ ಸದ್ಯ ಭಾರತದ ಬಾಕ್ಸಾಫೀಸ್‌ನಲ್ಲಿ ₹210 ಕೋಟಿ ಗಳಿಸಿರುವ ಈ ಚಿತ್ರ ಇನ್ನು ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ. ನಿರ್ಮಾಪಕರಿಗೆ ಆದ ನಷ್ಟ ಎಷ್ಟು ಎನ್ನುವುದು ಕೂಡ ಶೀಘ್ರದಲ್ಲಿಯೇ ಗೊತ್ತಾಗಲಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com ಹಾಗೂ ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications











