ಕೊನೆ ಕ್ಷಣದಲ್ಲಿ 'ಮಹಾವತಾರ್ ನರಸಿಂಹ' ಚಿತ್ರವನ್ನು ಹಿಂದಿಕ್ಕಿದ 'ವಾರ್ 2' ; 3ನೇ ಸ್ಥಾನಕ್ಕೆ ತೀವೃ ಪೈಪೋಟಿ

ಭಾರತೀಯ ಚಿತ್ರರಂಗದಲ್ಲಿ ಹಿಂದೊಮ್ಮೆ ಪೌರಾಣಿಕ ಚಿತ್ರಗಳದ್ದೇ ಹವಾ ಇತ್ತು. ಫಾಲ್ಕೆ ಅವರ ''ಹರಿಶ್ಚಂದ್ರ'' ಚಿತ್ರವನ್ನು ನೋಡಿ ಹಲವಾರು ಜನ ಪ್ರೇರಣೆಗೊಂಡಿದ್ದರು. ಇನ್ನು..ಡಾ.ರಾಜ್ ಕುಮಾರ್.. ಎನ್‌.ಟಿ.ಆರ್.. ಅಕ್ಕಿನೇನಿ ನಾಗೇಶ್ವರ ರಾವ್.. ಎಸ್.ವಿ.ರಂಗರಾವ.. ಹೀಗೆ ಹಲವರು ಪೌರಾಣಿಕ ಪಾತ್ರಧಾರಿಗಳಾಗಿ ಮಿಂಚಿದರು. ಜನಪ್ರಿಯರಾದರು. ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಕೂಡ ಪಡೆದರು. ಆದರೆ .. ಈಗ ಪೌರಾಣಿಕ ಚಿತ್ರಕ್ಕೆ ಚಿತ್ರರಂಗದಲ್ಲಿ ಮೊದಲಿದ್ದ ಬೆಲೆ ಇಲ್ಲ.

ಹಾಗಂಥ, ಪ್ರಯತ್ನಗಳಾಗಿಯೇ ಇಲ್ಲ ಅಂತಲ್ಲ. ಅಲ್ಲೊಂದು.. ಇಲ್ಲೊಂದು ಚಿತ್ರಗಳನ್ನು ಅಲ್ಲೊಬ್ಬರು.. ಇಲ್ಲೊಬ್ಬರು ಮಾಡುತ್ತಾರೆ ಆದರೂ ಹೊಡಿ ಬಡಿ ಚಿತ್ರಗಳಿಂದ ಪ್ರೇಕ್ಷಕರನ್ನು ಚಿತ್ರರಂಗ ಕಮರ್ಷಿಯಲ್ ಜಾಲದಲ್ಲಿ ಸಿಲುಕಿಸಿದೆ.

war-2-vs-mahavatar-narsimha-the-ultimate-box-office-battle-for-bollywoods-3-spot

ಹೀಗಿರುವಾಗ ತೆರೆಗೆ ಬಂದ ಕನ್ನಡದ ''ಹೊಂಬಾಳೆ'' ಸಂಸ್ಥೆಯ ಸಹಕಾರ-ಸಹಯೋಗದ ಜೊತೆ ಬಂದ ''ಮಹಾವತಾರ್ ನರಸಿಂಹ'' ಬಾಕ್ಸಾಫೀಸ್‌ನಲ್ಲಿ ಐತಿಹಾಸಿಕ ದಾಖಲೆಯನ್ನು ಬರೆದಿದೆ. ಹತ್ತು ಹಲವು ಹಿಂದಿನ ದಾಖಲೆಗಳನ್ನು ಮುರಿದಿದೆ. ಸೂಪರ್ ಸ್ಟಾರ್‌ಗಳ ಚಿತ್ರಗಳನ್ನೆಲ್ಲಾ ನಿವಾಳಿಸಿ ಒಗೆದಿದೆ. ಭಾರತದಲ್ಲಿ ಯಾವ ಆನಿಮೇಷನ್‌ ಚಿತ್ರ ಕೂಡ ಮಾಡಲು ಸಾಧ್ಯವಾಗದಷ್ಟು ಹಣವನ್ನು ದೋಚಿದೆ.ಆದರೆ ಹೀಗೆ ಹಲವು ಸಾಧನೆಗಳನ್ನು ಮಾಡಿದ ಈ ಚಿತ್ರವನ್ನು ಕೊನೆ ಕ್ಷಣದಲ್ಲಿ ''ವಾರ್ 2'' ಚಿತ್ರ ಬಾಕ್ಸಾಫೀಸ್‌ನಲ್ಲಿ ಹಿಂದಿಕ್ಕಿದೆ.

ಹೌದು, ''ಮಹಾವತಾರ್ ನರಸಿಂಹ'' ಚಿತ್ರ ತೆರೆಗೆ ಬಂದು 33 ದಿನಗಳಾಗಿವೆ. ''koimoi.com'' ಪ್ರಕಾರ ಈ 33 ದಿನದಲ್ಲಿ ಈ ಚಿತ್ರ ಭಾರತದಲ್ಲಿ ಇಲ್ಲಿಯವರೆಗೆ ₹ 232.66 ಕೋಟಿ ಹಣವನ್ನು ಗಳಿಸಿದೆ. ಆದರೆ ಈ ಗಳಿಕೆಯನ್ನು 14 ದಿನಗಳ ಹಿಂದೆ ಬಂದ ಹೃತಿಕ್ ರೋಷನ್ ಮತ್ತು ಜ್ಯೂಎನ್‌ಟಿಆರ್‌ ಅಭಿನಯದ ''ವಾರ್ 2'' ಈಗ ಹಿಂದಿಕ್ಕಿದೆ. ಈ ಮೂಲಕ ಈ ವರ್ಷ ಅತೀ ಹೆಚ್ಚು ಹಣ ಗಳಿಸಿದ ಚಿತ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ''ವಾರ್ 2'' ಅಲಂಕರಿಸಿದ್ದು ''ಮಹಾವತಾರ್ ನರಸಿಂಹ'' ನಾಲ್ಕನೇ ಸ್ಥಾನಕ್ಕೆ ಕುಸಿದಿದೆ.

ಹಾಗಂಥ.. ''ಮಹಾವತಾರ್ ನರಸಿಂಹ'' ಚಿತ್ರ ''ವಾರ್ 2'' ಚಿತ್ರವನ್ನು ಮತ್ತೆ ಹಿಂದಿಕ್ಕಲು ಸಾಧ್ಯ ಇಲ್ಲ ಎಂದುಕೊಳ್ಳುವಂತೆ ಇಲ್ಲ. ಯಾಕೆಂದರೆ ಬಾಕ್ಸಾಫೀಸ್.. ಅಚ್ಚರಿಯ ಗೂಡು. ಯಾವತ್ತು ಏನು ಬೇಕಾದರೂ ಆಗಬಹುದು. ಇನ್ನು ಈ ಶುಕ್ರವಾರ ಹಿಂದಿಯಲ್ಲಿ ''ಪರಮ ಸುಂದರಿ'' ಚಿತ್ರ ತೆರೆಗೆ ಬರಲಿದೆ. ಈ ಹಿನ್ನೆಲೆ ಈ ಎರಡು ಚಿತ್ರಗಳ ಪ್ರದರ್ಶನಗಳ ಸಂಖ್ಯೆಯಲ್ಲಿ ಇನ್ನೂ ಇಳಿಮುಖವಾಗಲಿದೆಯಾದರೂ ಈ ಶನಿವಾರ ಅಥವಾ ಭಾನುವಾರ ''ವಾರ್ 2'' ಮೇಲೆ ''ಮಹಾವತಾರ್ ನರಸಿಂಹ'' ಮೇಲುಗೈ ಸಾಧಿಸಿದರು ಸಾಧಿಸಬಹುದು

war-2-vs-mahavatar-narsimha-the-ultimate-box-office-battle-for-bollywoods-3-spot

2025ರಲ್ಲಿ ಅತೀ ಹೆಚ್ಚು ಹಣ ಗಳಿಸಿದ ಬಾಲಿವುಡ್‌ನ 5 ಚಿತ್ರಗಳು (Gross) (Koi Moi)

1 .ಛಾವಾ - ₹ 615.39 ಕೋಟಿ
2. ಸೈಯಾರ - ₹ 335.8 ಕೋಟಿ
3.ವಾರ್ 2- ₹ 235.96 ಕೋಟಿ
4. ಮಹಾವತಾರ್ ನರಸಿಂಹ- ₹ 232.66 ಕೋಟಿ
5.ಹೌಸ್‌ಫುಲ್ 3 - ₹ 198.41 ಕೋಟಿ

ಸದ್ಯ ವಾರ್ ವಾರ್ 2 ಮತ್ತು ಮಹಾವತಾರ್ ನರಸಿಂಹ ನಡುವೆ ಮೂರನೇ ಸ್ಥಾನಕ್ಕೆ ತೀವೃ ಪೈಪೋಟಿ ಇದೆ. ಎರಡರಲ್ಲಿ ಯಾವ ಚಿತ್ರ ಕೊನೆಯದಾಗಿ ಮೂರನೇ ಸ್ಥಾನವನ್ನು ಅಲಂಕರಿಸುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
The box office battle is on! Will Hrithik Roshan & Jr. NTR's "War 2" reclaim the #3 spot from "Mahavatar Narsimha"? Dive into the Day 13 numbers to see who's winning.
Read more about: boxofffice hrithik roshan jr ntr
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X