Maa Box Office Day 2 ; ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿದ ಕಾಜೋಲ್, 'ಮಾ' 2ನೇ ದಿನದ ಗಳಿಕೆಯಲ್ಲಿ 26% ಏರಿಕೆ

ಕೆಲ ಚಿತ್ರಗಳೇ ಹಾಗೇ. ಭಾರೀ ನಿರೀಕ್ಷೆ ಮೂಡಿಸಿ ಆ ನಂತರ ನಿರಾಸೆ ಮಾಡುತ್ತವೆ. ಆದರೆ ಇನ್ನೂ ಕೆಲವು ಯಾವ ನಿರೀಕ್ಷೆಯನ್ನೂ ಮೂಡಿಸದೇ ದಿಗ್ಗನೆ ಬಂದು ಆ ನಂತರ ನಿಧಾನವಾಗಿ ಸದ್ದು ಮಾಡಲು ಶುರು ಮಾಡುತ್ತಾವೆ. ಪ್ರೇಕ್ಷಕರನ್ನು ಸೆಳೆಯಲು ಶುರು ಮಾಡುತ್ತಾವೆ. ಇದಕ್ಕೆ ಕಾಜೋಲ್ ಅಭಿನಯದ ''ಮಾ'' ಸದ್ಯದ ಉದಾಹರಣೆ.

ಹೌದು, ಬಾಕ್ಸಾಫೀಸ್‌ನಲ್ಲಿ ಚಿನ್ನದ ಬೆಳೆ ಬೆಳೆಯಲು ಸೂಪರ್ ಸ್ಟಾರ್‌ ಪಟ್ಟಕ್ಕೇರಿದ ನಾಯಕರೇ ಹೆಣಗಾಡುತ್ತಿರುವ ಈ ಕಾಲದಲ್ಲಿ ಕಾಜೋಲ್ ತಮ್ಮ ''ಮಾ'' ಚಿತ್ರದ ಮೂಲಕ ಬಾಲಿವುಡ್‌ನಲ್ಲಿ ಪವಾಡ ಮಾಡುತ್ತಿದ್ದಾರೆ. ಆಮಿರ್ ಖಾನ್ ಅವರ ಸಿತಾರೆ ಜಮೀನ್ ಪರ್ ಚಿತ್ರಕ್ಕೆ ತೀವೃ ಸ್ಫರ್ಧೆಯನ್ನು ನೀಡುತ್ತಿದ್ದಾರೆ. ಬಾಕ್ಸಾಫೀಸ್‌ನಲ್ಲಿ ಹಣವನ್ನು ದೋಚುತ್ತಿದ್ದಾರೆ.

weekend-wonder-kajol-s-maa-sees-explosive-26-growth-on-day-2-at-box-office

ಚಿತ್ರದ ಗಳಿಕೆಯ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ಸ್ಯಾಕ್ನಿಲ್ ವೆಬ್ ಸೈಟ್ ಪ್ರಕಾರ, ಮಾ ಚಿತ್ರದ ಎರಡನೇ ದಿನದ ಗಳಿಕೆಯಲ್ಲಿ ತೀವೃ ಏರಿಕೆ ಕಂಡು ಬಂದಿದೆ. ಮೊದಲ ದಿನ ₹ 4.65 ಕೋಟಿಯನ್ನು ಗಳಿಸಿದ್ದ ಚಿತ್ರ ನಿನ್ನೆ { ಜೂನ್ 28 } ಅಂದಾಜು ₹6 ಕೋಟಿ ಹಣ ಕೊಳ್ಳೆ ಹೊಡೆದಿದೆ. ಈ ಮೂಲಕ ಎರಡು ದಿನದಲ್ಲಿ ಚಿತ್ರ ₹ 10.65 ಕೋಟಿಯನ್ನು ದೋಚಿದೆ.

ಇನ್ನೂ ಬಾಲಿವುಡ್ ನ ಲೆಕ್ಕಾಚಾರವನ್ನು ಹಂಚಿಕೊಳ್ಳುವ www.koimoi.com ವರದಿಯ ಪ್ರಕಾರ ಮೊದಲ ದಿನಕ್ಕಿಂತ ಎರಡನೇ ದಿನ ಚಿತ್ರದ ಗಳಿಕೆ ಶೇಕಡಾ 26% ಹೆಚ್ಚಾಗಿದೆ.

www.koimoi.com ವರದಿಯ ಪ್ರಕಾರ ಮೊದಲ ದಿನ ಚಿತ್ರ ಮೊದಲ ದಿನ ₹4.93 ಕೋಟಿ ಗಳಿಸಿದ್ದು ಎರಡನೇ ದಿನ ₹6.26ಕೋಟಿಯನ್ನು ಗಳಿಸಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಎರಡು ದಿನದಲ್ಲಿ ₹11ಕೋಟಿಗೂ ಅಧಿಕ ಹಣ ಗಳಿಸಿದೆ.

weekend-wonder-kajol-s-maa-sees-explosive-26-growth-on-day-2-at-box-office

ಇನ್ನೂ 'ಮಾ' ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಈ ಹಿನ್ನೆಲೆ ಇಂದು ( ಜೂನ್ 29 ) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಬಾಲಿವುಡ್ ಪಂಡಿತರ ಲೆಕ್ಕಾಚಾರದ ಪ್ರಕಾರ ನಿನ್ನೆ ₹6ಕೋಟಿ ಗಡಿ ತಲುಪಿದ 'ಮಾ' ಇಂದು ₹8 ಕೋಟಿಯನ್ನು ಕೊಳ್ಳೆ ಹೊಡೆಯಬಹುದು.

ಹೊರದೇಶದಲ್ಲಿ 'ಮಾ' ಗಳಿಸಿದ್ದೆಷ್ಟು ?

ಹೀಗೆ ಭಾರತದಲ್ಲಿ ಸದ್ಯ ಹತ್ತು ಹನ್ನೊಂದು ಕೋಟಿಯನ್ನು ಗಳಿಸಿರುವ 'ಮಾ' ಹೊರದೇಶದಲ್ಲಿ ಒಂದು ಕೋಟಿ ಹಣವನ್ನು ಗಳಿಸಿದೆ ಎಂದು ಕೊಯಿ‌ಮೊಯಿ ವೆಬ್ ಸೈಟ್ ವರದಿ ಮಾಡಿದೆ. ಅಲ್ಲಿಯೂ ಕೂಡ ಇಂದಿನ ಗಳಿಕೆಯಲ್ಲಿ ಏರಿಕೆಯಾಗಬಹುದು ಎಂದು ಕೂಡ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ

More from Filmibeat

English summary
'Maa' delivers a blockbuster weekend with 26% box office growth on Day 2! See how Kajol's performance is captivating audiences and driving its success.
Read more about: kajol bollywood boxoffice report
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X