Welcome To The Jungle BO Day 1 ; ಅಕ್ಷಯ್ ಕುಮಾರ್ ಅಬ್ಬರ, ಜಂಗಲ್‌ನಲ್ಲಿ ಜನ ಜಾತ್ರೆ, ಈ ಚಿತ್ರದ ದಾಖಲೆ ಉಡೀಸ್
ಮಲ್ಟಿಸ್ಟಾರ್ ಸಿನಿಮಾ ಮಾಡುವುದು ಸುಲಭ ಅಲ್ಲ. ಅದಕ್ಕೆ ಅದರದ್ದೇ ಆದ ಅಡೆತಡೆಗಳಿರುತ್ತವೆ. ಒಂದು ಕಡೆ ಅಭಿಮಾನಿಗಳ ನಿರೀಕ್ಷೆಯಾದರೆ ಮತ್ತೊಂದು ಕಡೆ ಸ್ಟಾರ್‌ಗಳನ್ನು ಸಂಭಾಳಿಸುವ, ನಿಭಾಯಿಸುವ ಸವಾಲು. ಚೂರು ಯಾಮಾರಿದರೂ ಕೂಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತೆ. ಇದು ಸಾಲದು ಎಂಬಂತೆ ಸ್ಟಾರ್ ಗಳ ಈಗೋ ತಣಿಸುವ ಟಾಸ್ಕ್ ಕೂಡ ಡೈರೆಕ್ಟರ್ ಕಣ್ಣೆದುರು ಇರುತ್ತೆ.
ಹೀಗಿರುವಾಗ ನಿರ್ದೇಶಕ ಅಹ್ಮದ್ ಖಾನ್, ಅಕ್ಷಯ್ ಕುಮಾರ್, ಸುನಿಲ್ ಶೆಟ್ಟಿ, ಪರೇಶ್ ರಾವಲ್ ಅವರಲ್ಲದೇ ಅರ್ಷದ್ ವಾರ್ಸಿ, ತುಷಾರ್ ಕಪೂರ್, ಅಪ್ತಾಭ್ ಶಿವದಾಸನಿ, ಶ್ರೇಯಸ್ ತಲ್ಪಡೆ, ಕೃಷ್ಣ ಅಭಿಷೇಕ್, ಕಿಕು ಶಾರ್ದಾ, ಈ ಚಿತ್ರದಲ್ಲಿದ್ದಾರೆ. ಇವರಲ್ಲದೇ ಹಿರಿಯ ನಟರಾದ ಜಾಕಿ ಶ್ರಾಫ್, ಜಾನಿ ಲಿವರ್, ರಾಜ್‌ಪಾಲ್ ಯಾದವ್, ಫರಿದಾ ಜಲಾಲ್, ಮುಖೇಶ್ ತಿವಾರಿ, ಯಶ್‌ಪಾಲ್ ಶರ್ಮಾ, ಗಾಯಕ ದಿಲೇರ್ ಮೆಹಂದಿ , ಹೀಗೆ 34 ಜನರನ್ನು ಒಂದು ಗುಡ್ಡೆ ಹಾಕಿ ಸಿನಿಮಾ ಮಾಡಿದ್ದಾರೆ. ಆ ಚಿತ್ರದ ಹೆಸರು ''ವೆಲ್ಕಮ್ ಟು ದಿ ಜಂಗಲ್''. ನಿನ್ನೆ (ಜೂನ್ 26) ಈ ಚಿತ್ರ ಬಿಡುಗಡೆಯಾಗಿದ್ದು ಜಂಗಲ್‌ನಲ್ಲಿ ಜನ ಜಾತ್ರೆಯ ವಾತಾವರಣ ಕಂಡು ಬಂದಿದೆ.

ಬಂಪರ್ ಓಪನಿಂಗ್
ಭಾರತದೆಲ್ಲೆಡೆ ನಿನ್ನೆ (ಜೂನ್ 26) ''ವೆಲ್ಕಮ್ ಟು ದಿ ಜಂಗಲ್'' 10,892 ಪ್ರದರ್ಶನ ಕಂಡಿದ್ದು, ₹18.75 ಕೋಟಿಯನ್ನು ದೋಚಿದೆ ಎಂದು ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ವರದಿ ಮಾಡಿದೆ.ವಿಶೇಷ ಅಂದರೆ ಕೇವಲ ಮಲ್ಟಿಪ್ಲೆಕ್ಸ್‌ನಲ್ಲಿ ಮಾತ್ರವಲ್ಲ. ಸಿಂಗಲ್ ಸ್ಕ್ರೀನ್‌ಗಳ ಎದುರು ಕೂಡ ಜನಸಂದಣಿ ಕಂಡು ಬಂದಿದ್ದು ಮಲ್ಟಿ ಸ್ಟಾರ್ ಸಿನಿಮಾ ಮತ್ತು ಕಾಮಿಡಿ ಚಿತ್ರಕ್ಕೆ ಇವತ್ತು ಕೂಡ ಬೇಡಿಕೆ ಇದೆ ಎನ್ನುವುದನ್ನು ''ವೆಲ್ಕಮ್ ಟು ದಿ ಜಂಗಲ್'' ಸಾಬೀತು ಮಾಡಿದೆ.
ಪೇಯ್ಡ್ ಪ್ರೀಮಿಯರ್ ನಲ್ಲಿ ಗಳಿಸಿದ್ದೆಷ್ಟು ?
ಬಿಡುಗಡೆಯ ಮುನ್ನ ಸದ್ಯದ ಸಂಪ್ರದಾಯದ ಪ್ರಕಾರ, ಭಾರತದ ಹಲವಡೆ ಪೇಯ್ಡ್ ಪ್ರೀಮಿಯರ್ ಗಳನ್ನು ಚಿತ್ರತಂಡ ಆಯೋಜಿಸಿತ್ತು. ಸಂಜೆಯ ಮೇಲೆ ನಡೆದ ಈ 2494 ಪ್ರೀಮಿಯರ್ ಶೋಗಳಿಂದ ₹3.75 ಕೋಟಿ ಹರಿದು ಬಂದಿದ್ದು, ಇದನ್ನು ಕೂಡಿಸಿದರೆ ಮೊದಲ ದಿನದ ಗಳಿಕೆ ₹18.75 ಕೋಟಿಯಾಗುತ್ತೆ.
ಸ್ಯಾಕ್ನಿಲ್ ಪ್ರಕಾರ ''ವೆಲ್ಕಮ್ ಟು ದಿ ಜಂಗಲ್'' ಚಿತ್ರದ ಗಳಿಕೆಯ ವಿವರ ಈ ಕೆಳಗಿನಂತಿದೆ.
| ದಿನ | ಭಾರತದ ಒಟ್ಟು ನಿವ್ವಳ ಗಳಿಕೆ (India Net) |
|---|---|
| ಪೇಯ್ಡ್ ಪ್ರೀಮಿಯರ್ (ಗುರುವಾರ) | ₹3.75 ಕೋಟಿ |
| ಮೊದಲನೇ ದಿನ (ಶುಕ್ರವಾರ) | ₹15.00 ಕೋಟಿ |
| ಒಟ್ಟು ಮೊತ್ತದ ಕಲೆಕ್ಷನ್ | ₹18.75 ಕೋಟಿ |
ಭೂತ್ ಬಂಗ್ಲಾ ಹಿಂದಿಕ್ಕಿದ ಜಂಗಲ್
ಅಕ್ಷಯ್ ಕುಮಾರ್ ಅಭಿನಯದ ಹಿಂದಿನ ಚಿತ್ರ ''ಭೂತ್ ಬಂಗ್ಲಾ'' ಮೊದಲ ದಿನ 12,386 ಪ್ರದರ್ಶನಗಳಿಂದ ₹16 ಕೋಟಿಯನ್ನು ಗಳಿಸಿತ್ತು. ಇದಕ್ಕೂ ಮೊದಲು ಬಂದಿದ್ದ ''ಜಾಲಿ ಎಲ್‌ಎಲ್‌ಬಿ 3'' ಮೊದಲ ದಿನ ₹12 ಕೋಟಿಯನ್ನು ಗಳಿಸಿತ್ತು. ''ವೆಲ್ಕಮ್ ಟು ದಿ ಜಂಗಲ್'' ಇವೆರಡು ಚಿತ್ರಗಳ ಗಳಿಕೆಯನ್ನು ಹಿಂದಿಕ್ಕಿದೆ.

ಪ್ರೇಕ್ಷಕ ಮತ್ತು ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ
''ವೆಲ್ಕಮ್ ಟು ದಿ ಜಂಗಲ್'' ಚಿತ್ರಕ್ಕೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಉತ್ತಮವಾದ ಪ್ರತಿಕ್ರಿಯೆ ಸಿಕ್ಕಿದೆ. ಪ್ರೇಕ್ಷಕರನ್ನು ನಗಿಸಬೇಕೆಂಬ ಉದ್ದೇಶದಿಂದಲೇ ಮಾಡಲಾದ ಈ ಚಿತ್ರಕ್ಕೆ ವ್ಯಕ್ತವಾಗುತ್ತಿರುವ ಸಕಾರಾತ್ಮಕ ಪ್ರತಿಕ್ರಿಯೆಯಿಂದ ನಿನ್ನೆಯ (ಜೂನ್ 26) ತಡರಾತ್ರಿಯ ಶೋಗಳು ಹಲವಡೆ ಹೌಸ್‌ಫುಲ್ ಆಗಿವೆ. ಇನ್ನು ಈ ಮೌತ್ ಪಬ್ಲಿಸಿಟಿಯಿಂದ ಇಂದು (ಜೂನ್ 27) ಮತ್ತು ನಾಳೆ (ಜೂನ್ 28) ಚಿತ್ರದ ಗಳಿಕೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದ್ದು ವಾರಾಂತ್ಯದ ಹೊತ್ತಿಗೆ ''ವೆಲ್ಕಮ್ ಟು ದಿ ಜಂಗಲ್'' 75 ಕೋಟಿಯ ಗಡಿ ಹತ್ತಿರ ಬಂದು ನಿಲ್ಲಲಿದೆ ಎನ್ನುವ ಮಾತು ಟ್ರೇಡ್ ವಲಯದಲ್ಲಿ ಸದ್ಯ ಕೇಳಿ ಬರುತ್ತಿದೆ.
Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.


Click it and Unblock the Notifications