ಯಶ್ 'ಟಾಕ್ಸಿಕ್' ಮುಂದಿದೆ ದೊಡ್ಡ ಸವಾಲು; ಕರ್ನಾಟಕದಲ್ಲಿ ಈ 2 ದಾಖಲೆ ಮುರಿತ್ತಾನಾ ರಾಯ ?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಹೊಸ ರಿಲೀಸ್ ಡೇಟ್ ಗೊತ್ತಾಗಿದೆ. ಆದಷ್ಟು ಬೇಗ ಟ್ರೈಲರ್ ಹೊರಬಿಟ್ಟು ಪ್ರಮೋಷನ್ ಸ್ಟಾರ್ಟ್ ಮಾಡಿ ಎಂದು ಅಭಿಮಾನಿಗಳು ಕೇಳುತ್ತಿದ್ದಾರೆ. ಗ್ಲೋಬಲ್ ಲೆವೆಲ್‌ನಲ್ಲಿ ಏಕಕಾಲಕ್ಕೆ ದೇಶ ವಿದೇಶಗಳಲ್ಲಿ ಸಿನಿಮಾ ತೆರೆಗೆ ಬರ್ತಿದೆ. ಅದಕ್ಕೆ ತಕ್ಕಂತೆ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ ನಡೀತಿದೆ.

'ಟಾಕ್ಸಿಕ್' ಸಿನಿಮಾ ಅನಾಯಾಸವಾಗಿ 1000 ಕೋಟಿ ರೂ. ಕಲೆಕ್ಷನ್ ಮಾಡುತ್ತದೆ ಎನ್ನುವ ಚರ್ಚೆ ಶುರುವಾಗಿದೆ. 'ಕೆಜಿಎಫ್'-2 ಸಿನಿಮಾ 1200 ಕೋಟಿ ರೂ. ಕಲೆಕ್ಷನ್ ಮಾಡಿದ್ದಾಗಿ ವರದಿಯಾಗಿತ್ತು. ಆ ಬಳಿಕ ಯಶ್ ನಟಿಸಿದ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಹಾಗಾಗಿ ನಿರೀಕ್ಷೆ ಹೆಚ್ಚಿದೆ. ಅದಕ್ಕೆ ತಕ್ಕಂತೆ ಬುಕ್ಕಿಂಗ್ಸ್, ಓಪನಿಂಗ್ ಸಿಗಲಿದೆ. ಸಿನಿಮಾ ಚೆನ್ನಾಗಿದ್ದರೆ ಬಾಕ್ಸಾಫೀಸ್ ದಾಖಲೆಗಳ ಪರ್ವ ಶುರುವಾಗಲಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಕೂಡ ದೊಡ್ಡದಾಗಿ ಸಿನಿಮಾ ಬಿಡುಗಡೆ ಆಗುವುದರಿಂದ ಓವರ್‌ಸೀಸ್ ಮಾರ್ಕೆಟ್ ಕಲೆಕ್ಷನ್ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.

Two Big Karnataka Targets for Toxic Can Yash Deliver Another Historic Box Office Run

ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗಿದೆ. ಇನ್ನುಳಿದಂತೆ ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ತೆರೆಗೆ ಬರಲಿದೆ. ಕರ್ನಾಟಕದಲ್ಲಿ 'ಟಾಕ್ಸಿಕ್' ಸಿನಿಮಾ ಎಷ್ಟು ಕಲೆಕ್ಷನ್ ಮಾಡಬಹುದು ಎನ್ನುವ ಕುತೂಹಲ ಮೂಡಿದೆ. ಯಾವೆಲ್ಲಾ ದಾಖಲೆಗಳನ್ನು ಅಳಿಸಿ ಹಾಕಿ ರಾಯ ಹೊಸ ಇತಿಹಾಸ ನಿರ್ಮಿಸುತ್ತಾನೆ ಎನ್ನುವ ಚರ್ಚೆ ಜೋರಾಗಿದೆ.

ಕರ್ನಾಟಕದಲ್ಲಿ ಅತಿ ಹೆಚ್ಚು ಕಲೆಕ್ಷನ್

ಬಾಲಿವುಡ್, ಟಾಲಿವುಡ್ ಹಾಗೂ ಕಾಲಿವುಡ್‌ಗೆ ಹೋಲಿಸಿದರೆ ಸ್ಯಾಂಡಲ್‌ವುಡ್ ಕೊಂಚ ಚಿತ್ರ ಇಂಡಸ್ಟ್ರಿ. ಆದರೂ ದೊಡ್ಡಮಟ್ಟದಲ್ಲಿ ಕನ್ನಡ ಸಿನಿಮಾಗಳು ಇಲ್ಲಿ ಸದ್ದು ಮಾಡುತ್ತವೆ. ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಿಗೆ ಡಬ್ ಆಗಿ ಇಲ್ಲಿ ಸಿನಿಮಾ ಬಿಡುಗಡೆ ಆಗುವುದರಿಂದ ಇಲ್ಲಿ ನೆಲೆಸಿರುವ ಪರಭಾಷಿಕರು ಸಿನಿಮಾ ನೋಡುತ್ತಾರೆ. ಈವರೆಗೆ ಕರ್ನಾಟಕದಲ್ಲಿ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆ 'ಕಾಂತಾರ-1' ಹೆಸರಿನಲ್ಲಿದೆ. ಕಳೆದ ವರ್ಷ ತೆರೆಗೆ ಬಂದಿದ್ ರಿಷಬ್ ಶೆಟ್ಟಿ ಸಿನಿಮಾ 259 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು.

Two Big Karnataka Targets for Toxic Can Yash Deliver Another Historic Box Office Run

'ಕೆಜಿಎಫ್'-2 ಸಿನಿಮಾ ಕೂಡ ಕರ್ನಾಟಕದಲ್ಲಿ 180 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿದ್ದಾಗಿ ಹೇಳಲಾಗಿತ್ತು. ಇದೀಗ 'ಕಾಂತಾರ- 1' ದಾಖಲೆ ಮುರಿದು 'ಟಾಕ್ಸಿಕ್' ಸಿನಿಮಾ ಸದ್ದು ಮಾಡುತ್ತಾ ಕಾದು ನೋಡಬೇಕಿದೆ. ರಾಜ್ಯದಲ್ಲಿ 250 ಕೋಟಿ ರೂ. ಕಲೆಕ್ಷನ್ ಅಂದ್ರೆ ತಮಾಷೆ ಮಾತಲ್ಲ. ಸಾಲು ಸಾಲು ರಜೆಗಳು ಇರುವುದರಿಂದ ಸಿನಿಮಾ ಗಳಿಕೆ ಹೆಚ್ಚುವ ಅಂದಾಜಿದೆ.

ಮೊದಲ ದಿನ ಅತಿ ಹೆಚ್ಚು ಗಳಿಕೆ

ಕರ್ನಾಟಕದಲ್ಲಿ ಮೊದಲ ದಿನ ಅತಿಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎನ್ನುವ ದಾಖಲೆ ಯಶ್ ನಟನೆಯ 'ಕೆಜಿಎಫ್'-2 ಹೆಸರಿನಲ್ಲಿದೆ. ಏಪ್ರಿಲ್ 14, 2022ರಂದು ತೆರೆಗೆ ಬಂದಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸುನಾಮಿ ಎಬ್ಬಿಸಿತ್ತು. ಮೊದಲ ದಿನವೇ ಸಿನಿಮಾ 35 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಮಧ್ಯರಾತ್ರಿಯಿಂದಲೇ ಕೆಲವೆಡೆ ಸಿನಿಮಾ ಪ್ರದರ್ಶನ ಆರಂಭವಾಗಿತ್ತು. ಹಾಗಾಗಿ ಕಲೆಕ್ಷನ್ ಕೂಡ ಜೋರಾಗಿತ್ತು. ಸದ್ಯ 'ಟಾಕ್ಸಿಕ್' ಸಿನಿಮಾ ಕ್ರೇಜ್ ಹೇಗಿದೆ ಎನ್ನುವುದನ್ನು ಬಿಡಿಸಿ ಹೇಳಬೇಕಿಲ್ಲ. ಅದಕ್ಕೆ ತಕ್ಕಂತೆ ಅಡ್ವಾನ್ಸ್ ಬುಕ್ಕಿಂಗ್ ನಿರೀಕ್ಷಿಸಲಾಗ್ತಿದೆ.

'ಕೆಜಿಎಫ್'-2 ಸಿನಿಮಾ ಭಾರತದಲ್ಲಿ ಮೊದಲ ದಿನ 135 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿತ್ತು. ಹಿಂದಿ ಬೆಲ್ಟ್‌ನಲ್ಲೇ 65 ಕೋಟಿ ರೂ. ಗಳಿಸಿ ದಾಖಲೆ ಬರೆದಿತ್ತು. ಈ ದಾಖಲೆಯನ್ನು ಕೂಡ 'ಟಾಕ್ಸಿಕ್' ಅಳಿಸಿ ಹಾಕುತ್ತಾ ಕಾದು ನೋಡಬೇಕಿದೆ.

Read more about: toxic kgf yash
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X