'ಟಾಕ್ಸಿಕ್' ಎದುರು ಬಾಕ್ಸಾಫೀಸ್ ಅಖಾಡಕ್ಕೆ ಇಳಿಯೋದ್ಯಾರು? ಹೆದರಿ ದೂರ ಓಡೊದ್ಯಾರು?
ರಾಕಿಂಗ್ ಸ್ಟಾರ್ ಯಶ್ ನಟನೆಯ 'ಟಾಕ್ಸಿಕ್' ಸಿನಿಮಾ ಬಿಡುಗಡೆಗೆ ಹೊಸ ದಿನಾಂಕ ನಿಗದಿಯಾಗಿದೆ. ಆಗಸ್ಟ್ 26ರಂದು ಸಿನಿಮಾ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ. ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾಬಂಧನ ಹಬ್ಬಗಳ ಸಾಲು ಸಾಲು ರಜೆಗಳ ಲಾಭ ಪಡೆಯಲು ಬುಧವಾರವೇ ಸಿನಿಮಾ ಬಿಡುಗಡೆ ಆಗಲಿದೆ. ಅಂದಹಾಗೆ ಆಗಸ್ಟ್ ಕೊನೆ ವಾರದಲ್ಲಿ ಬೇರೆ ಸಿನಿಮಾಗಳ ಬಿಡುಗಡೆಗೆ ತಯಾರಿ ನಡೆದಿತ್ತು. ಈಗ ಎಲ್ಲಾ ಲೆಕ್ಕಾಚಾರ ಉಲ್ಟಾ ಆಗಿದೆ.
'ಟಾಕ್ಸಿಕ್' ರೀತಿಯ ದೊಡ್ಡ ಸಿನಿಮಾ ಎದುರು ಸಿನಿಮಾ ಬಿಡುಗಡೆ ಮಾಡಲು ಯಾರು ಧೈರ್ಯ ಮಾಡುವುದಿಲ್ಲ. ವಿಶ್ವದಾದ್ಯಂತ ಸಾವಿರಾರು ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ರಾಯ ಹಾಗೂ ಟಿಕೆಟ್ ಆರ್ಭಟದ ಮುಂದೆ ನಿಲ್ಲುವುದು ನಿಜಕ್ಕೂ ಕಷ್ಟ. ಕನ್ನಡ ಮಾತ್ರವಲ್ಲದೇ ಬೇರೆ ಇಂಡಸ್ಟ್ರಿಗಳಲ್ಲಿ ಕೂಡ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿದೆ. 'KGF' ಸರಣಿ ಮೂಲಕ ಯಶ್ ಹುಟ್ಟಾಕ್ಕಿರುವ ಕ್ರೇಜ್ ಆ ರೇಂಜಿಗಿದೆ. ಈಗಾಗಲೇ ಬಂದಿರುವ 'ಟಾಕ್ಸಿಕ್' ಸ್ಯಾಂಪಲ್ಸ್ ನೋಡಿ ಪರಭಾಷಾ ಪ್ರೇಕ್ಷಕರು ಫಿದಾ ಆಗಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಬೇಕು ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ.

ಚಿತ್ರಕ್ಕಾಗಿ ದೊಡ್ಡಮಟ್ಟದಲ್ಲಿ ಪ್ರೀ ರಿಲಿಸ್ ಬ್ಯುಸಿನೆಸ್ ನಡೆದಿದೆ. ಆಂಧ್ರ, ತೆಲಂಗಾಣ ರೈಟ್ಸ್ 120 ಕೋಟಿ ರೂ.ಗೆ ಮಾರಾಟವಾಗಿದೆ. ಇದು 'ಟಾಕ್ಸಿಕ್' ಚಿತ್ರಕ್ಕಿರುವ ಕ್ರೇಜ್ ಎಂಥಾದ್ದು ಎನ್ನುವುದನ್ನು ಸಾರಿ ಹೇಳ್ತಿದೆ. ದೊಡ್ಡ ತಾರಾಗಣ, ಅದ್ಧೂರಿ ಮೇಕಿಂಗ್, ಭಾರೀ ಬಜೆಟ್ ಎಲ್ಲವೂ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಏಕಕಾಲಕ್ಕೆ ಸಿನಿಮಾ ನಿರ್ಮಾಣವಾಗಿದೆ. ದೇಶ ವಿದೇಶದ ಹಲವು ಭಾಷೆಗಳಿಗೆ ಸಿನಿಮಾ ಡಬ್ ಆಗಿ ಬರಲಿದೆ. ಹಾಗಾಗಿ ಸಣ್ಣ ಸಿನಿಮಾಗಳು ಆಗಸ್ಟ್ ಕೊನೆ ವಾರ ಚಿತ್ರಮಂದಿರಕ್ಕೆ ಬರುವುದು ಅನುಮಾನ.
1. ದಿ ಪ್ಯಾರಡೈಸ್
ತೆಲುಗಿನಲ್ಲಿ ನಾನಿ ನಟನೆಯ 'ದಿ ಪ್ಯಾರಡೈಸ್' ಸಿನಿಮಾ ನಿರೀಕ್ಷೆ ಹುಟ್ಟಾಕ್ಕಿದೆ. 'ಆಯಾ ಶೇರ್' ಹಾಡಿನಿಂದಲೇ ಇನ್ನಿಲ್ಲದ ಕ್ರೇಜ್ ಶುರುವಾಗಿದೆ. ನಾನಿ ಗೆಟಪ್, ಖಡಕ್ ಲುಕ್ ಎಲ್ಲವೂ ಹುಬ್ಬೇರಿಸಿದೆ. ಆಗಸ್ಟ್ 21ರಂದು ಸಿನಿಮಾ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಆದರೆ ಚಿತ್ರೀಕರಣ ತಡವಾಗುತ್ತಿರುವುದರಿಂದ ರಿಲೀಸ್ ಮುಂದೂಡುವ ಸಾಧ್ಯತೆ ದಟ್ಟವಾಗಿದೆ. 'ಟಾಕ್ಸಿಕ್' ಸಿನಿಮಾ ಆಗಸ್ಟ್ 26ರಂದು ಬರುವುದರಿಂದ ನಾನಿ ಸಿನಿಮಾ ಎದುರು ಬರುವುದಿಲ್ಲ ಎನ್ನುವುದು ಖಾತ್ರಿ ಆಗ್ತಿದೆ.

2. ಈಥಾ
ಶ್ರದ್ಧಾ ಕಪೂರ್, ರಣದೀಪ್ ಹೂಡಾ ಅಭಿನಯದ ಬಯೋಪಿಕ್ ಸಿನಿಮಾ 'ಈಥಾ' ಆಗಸ್ಟ್ 28, 2026 ರಂದು ಬಿಡುಗಡೆ ಆಗಬೇಕಿದೆ. ಇದೀಗ ದಿಢೀರನೆ 'ಟಾಕ್ಸಿಕ್' ಸಿನಿಮಾ ರಿಲೀಸ್ ಡೇಟ್ ಘೋಷಣೆಯಾಗಿದೆ. ಅದೇ ವೀಕೆಂಡ್ ಸಿನಿಮಾ ಬರುವುದು ಖಚಿತವಾಗಿದೆ. ಹಾಗಾಗಿ 'ಈಥಾ' ಸಿನಿಮಾ ರಿಲೀಸ್ ಡೇಟ್ ಬದಲಾಗುತ್ತಾ ಕಾದು ನೋಡಬೇಕಿದೆ. ಅಧಿಕೃತವಾಗಿ ಈ ಬಗ್ಗೆ ಮಾಹಿತಿ ಸಿಗಬೇಕಿದೆ.
3. ಜೈಲರ್- 2
ರಜನಿಕಾಂತ್ ನಟನೆಯ 'ಜೈಲರ್- 2' ಸಿನಿಮಾ ಆಗಸ್ಟ್ 15ರಂದು ತೆರೆಗೆ ಬರುವ ನಿರೀಕ್ಷೆಯಿದೆ. ಆದರೆ ಅಧಿಕೃತವಾಗಿ ರಿಲೀಸ್ ಡೇಟ್ ಘೋಷಣೆ ಆಗಿಲ್ಲ. ಇಂಡಿಪೆಂಡೆನ್ಸ್ ಡೇ ವೀಕೆಂಡ್ ಮೇಲೆ ಸಾಕಷ್ಟು ಸಿನಿಮಾಗಳು ಕಣ್ಣಿಟ್ಟಿವೆ. ಅದರಲ್ಲಿ 'ಜೈಲರ್- 2' ಕೂಡ ಒಂದಾಗಿದೆ. ಆದರೆ ಚಿತ್ರೀಕರಣ ಪದೇ ಪದೆ ತಡವಾಗುತ್ತಿರುವುದರಿಂದ ಆಗಸ್ಟ್‌ನಲ್ಲಿ ತಲೈವಾ ಸಿನಿಮಾ ಬರುವುದು ಅನುಮಾನ. ಒಂದೇ ವಾರದ ಅಂತರಲ್ಲಿ 'ಟಾಕ್ಸಿಕ್' ಎಂಟ್ರಿ ಕೊಡುವುದರಿಂದ 'ಜೈಲರ್- 2' ತೆರೆಗೆ ಬರುವುದು ತಡವಾಗಲಿದೆ.
4. ಬೇಲ್
ಪವನ್ ಒಡೆಯರ್ ನಿರ್ದೇಶನದಲ್ಲಿ ಶಿವರಾಜ್‌ಕುಮಾರ್ ನಟನೆಯ 'ಬೇಲ್' ಸಿನಿಮಾ ಕುತೂಹಲ ಮೂಡಿಸಿದೆ. ಇತ್ತೀಚೆಗೆ ಚಿತ್ರದ ಟೀಸರ್ ರಿಲೀಸ್ ಆಗಿ ಹಿಟ್ ಆಗಿದೆ. ಅಧಿಕೃತವಾಗಿ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಿಲ್ಲ. ಆದರೆ ವರಲಕ್ಷ್ಮಿ ಹಬ್ಬದ ಸಂಭ್ರಮದಲ್ಲಿ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ ಎಂದು ಹೇಳಲಾಗಿತ್ತು. ವಿಶೇಷ ಅಂದ್ರೆ 'ಟಾಕ್ಸಿಕ್' ಸಿನಿಮಾ ನಿರ್ಮಿಸಿರುವ ಕೆವಿಎನ್ ಸಂಸ್ಥೆಯೇ 'ಬೇಲ್' ಚಿತ್ರಕ್ಕೂ ಹಣ ಹೂಡಿದೆ. ಹಾಗಾಗಿ ಆಗಸ್ಟ್ ಕೊನೆ ವಾರ ಶಿವಣ್ಣನ ಸಿನಿಮಾ ಬರಲ್ಲ ಎನ್ನಬಹುದು. ಇದೇ ವಿಚಾರಕ್ಕೆ ಸೆಂಚುರಿ ಸ್ಟಾರ್ ಫ್ಯಾನ್ಸ್ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನುಳಿದಂ ರವಿತೇಜಾ ನಟನೆಯ ಇರುಮುಡಿ, ಶರ್ವಾನಂದ್ ಮುಖ್ಯಭೂಮಿಕೆಯಲ್ಲಿ 'ಭೋಗಿ' ಸಿನಿಮಾಗಳನ್ನು ಆಗಸ್ಟ್ ಕೊನೆ ವಾರವೇ ತೆರೆಗೆ ತರುವ ಪ್ರಯತ್ನ ನಡೆದಿತ್ತು. ಈಗ ಎಲ್ಲವೂ ಬದಲಾಗುವಂತಾಗಿದೆ.


Click it and Unblock the Notifications