Ajey Box Office Day 1 ; ಯೋಗಿ ಆದಿತ್ಯನಾಥ್‌ ಜೀವನಾಧಾರಿತ ಅಜೇಯ್ ಚಿತ್ರದ ಮೊದಲ ದಿನದ ಗಳಿಕೆ ಕಂಡು ಬಾಲಿವುಡ್ ಶಾಕ್

ಚಿತ್ರರಂಗ ಮತ್ತು ರಾಜಕೀಯ ಒಂದೇ ನಾಣ್ಯದ ಎರಡು ಮುಖಗಳು. ಇವತ್ತು ಇಲ್ಲಿ ಸ್ಟಾರ್ ಆದವರು ನಾಳೆಯ ದಿವಸ ಲೀಡರ್ ಆಗ್ತಾರೆ. ಮೆರೆಯುತ್ತಾರೆ. ಅದರಲ್ಲಿಯೂ ಪಕ್ಕದ ತಮಿಳುನಾಡಿನಲ್ಲಿ ರಾಜಕೀಯದ ಮೇಲೆ ಚಿತ್ರರಂಗದವರಿಗೆ ವಿಶೇಷ ಆಸಕ್ತಿ ಮೊದಲಿಂದ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಅಣ್ಣಾದೊರೈ.. ಕರುಣಾನಿಧಿ.. ಜಯಲಲಿತಾ.. ಅವರನ್ನೊಳಗೊಂಡು ವಿಜಯಕಾಂತ್.. ಶರತ್ ಕುಮಾರ್..ಕಮಲ್ ಹಾಸನ್‌ವರೆಗೆ ಬಹುತೇಕರು ರಾಜಕೀಯಕ್ಕೆ ಇಳಿದಿದ್ದಾರೆ. ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದಾರೆ.

ಕೇವಲ ದಕ್ಷಿಣ ಮಾತ್ರವಲ್ಲ ಉತ್ತರದಲ್ಲಿ ಕೂಡ ರಾಜಕೀಯದ ಮೇಲೆ ಹಲವರಿಗೆ ವ್ಯಾಮೋಹ ಇದೆ. ಇನ್ನೂ ಚಿತ್ರರಂಗದವರ ಈ ಪೊಲಿಟಿಕಲ್ ಪ್ರವೇಶ ಹೊರತು ಪಡಿಸಿದರೆ ರಾಜಕೀಯ ಗಣ್ಯರ ಜೀವನಕಥೆ ಮೇಲೆ ಚಿತ್ರರಂಗದ ಹಲವರಿಗೆ ಆಸಕ್ತಿ ಇದೆ.‌

Yogi Adityanath Biopic Ajey Stumbles at Box Office Earns Paltry 20 Lakh on Opening Day

ಇದಕ್ಕೆ ಕೈಗನ್ನಡಿ ಎಂಬಂತೆ ಭಾರತದ ಪ್ರಧಾನ ಮಂತ್ರಿ‌ ನರೇಂದ್ರ ಮೋದಿ, ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಹೀಗೆ ಹಲವರ ಜೀವನಾಧಾರಿತ ಚಿತ್ರಗಳು ತೆರೆಗೆ ಬಂದಿವೆ. ಈ ಸಾಲಿಗೆ ಸೇರಿಕೊಂಡ ಮತ್ತೊಂದು ಚಿತ್ರ ''ಅಜೇಯ್''.

ಹೌದು, ''ಅಜೇಯ್''.. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯ ಜೀವನಾಧಾರಿತ ಚಿತ್ರ. ಇನ್ಮೂ ಹೇಳಿ ಕೇಳಿ ಯೋಗಿ ಉತ್ತರ ಪ್ರದೇಶದಲ್ಲಿನ ಹಿಂದುತ್ವದ ಮುಖ. ಅಭಿವೃದ್ದಿಯ ಚಿಂತಕ.

ಈ ಹಿನ್ನೆಲೆ ಈ ಚಿತ್ರ ಶುರುವಾದಾಗ ಹಲವರಲ್ಲಿ ಅಪಾರ ನಿರೀಕ್ಷೆಗಳಿದ್ದವು. ಚಿತ್ರ ಹೊಸ ದಾಖಲೆ ಬರೆಯುತ್ತೆ ಎಂದೇ ಎಲ್ಲ ಅಂದಕೊಂಡಿದ್ದರು. ಆದರೆ ಆಗಿದ್ದು ಉಲ್ಟಾ. ಸದ್ಯದ ಪರಿಸ್ಥಿತಿಯಲ್ಲಿ ಈ ಚಿತ್ರಕ್ಕೆ ಹಾಕಿದ ಬಂಡವಾಳ ನಿರ್ಮಾಪಕರಿಗೆ ಮರಳಿ ಬಂದರೆ ಸಾಕು ಎನ್ನುವ ಮಾತು ಕೇಳಿ ಬರುತ್ತಿದೆ. ಮೊದಲ ದಿನವೇ ಅಜೇಯ್ ಬಾಕ್ಸಾಫೀಸ್ ನಲ್ಲಿ ಮುಗ್ಗರಿಸಿದೆ.

ಹೌದು, ಬಾಕ್ಸಾಫೀಸ್‌ನ ಅಂಕಿ ಅಂಶಗಳನ್ನು ಹಂಚಿಕೊಳ್ಳುವ ''ಸ್ಯಾಕ್ನಿಲ್'' ಅಜೇಯ್ ಚಿತ್ರದ ಮೊದಲ ದಿನದ ಲೆಕ್ಕವನ್ನು ಕೂಡ ಹಂಚಿಕೊಂಡಿದೆ. ಆ ಪ್ರಕಾರ ಚಿತ್ರ ಮೊದಲ ದಿನ ಕೋಟಿಗಳಲ್ಲಿ ಅಲ್ಲ ಬದಲಿಗೆ ಲಕ್ಷಗಳಲ್ಲಿ ಗಳಿಸಿದೆ. ಮೊದಲ ದಿನ ಕೇವಲ ₹ 25 ಲಕ್ಷವನ್ನು ಮಾತ್ರ ಗಳಿಸಿದೆ. ಇದು ಹಲವರಿಗೆ ಅದರಲ್ಲಿಯೂ ಬಾಲಿವುಡ್‌ನವರಿಗೆ ಆಶ್ಚರ್ಯವನ್ನುಂಟು ಮಾಡಿದೆ. ಯಾಕೆಂದರೆ.. ಆಗಲೇ ಹೇಳಿದಂತೆ ಈ ಚಿತ್ರದ ಕುರಿತು ಹಗಲು ಕನಸು ಕಂಡವರಲ್ಲಿ ಬಹುತೇಕ ಈ ಬಾಲಿವುಡ್ ಪಂಡಿತರೇ ಇದ್ದರು. ಆದರೆ ವಿಪರ್ಯಾಸ ಪ್ರೇಕ್ಷಕರು ಕೇವಲ ₹ 25 ಲಕ್ಷ ದೇಣಿಗೆ ನೀಡುವ ಮೂಲಕ ಚಿತ್ರತಂಡಕ್ಕೆ ಮತ್ತು ಬಾಲಿವುಡ್‌ಗೆ ಶಾಕ್ ನೀಡಿದ್ದಾರೆ.

Yogi Adityanath Biopic Ajey Stumbles at Box Office Earns Paltry 20 Lakh on Opening Day

ಇನ್ನೂ ಯೋಗಿ ಆದಿತ್ಯನಾಥ್ ಜೀವನಾಧಾರಿತ ಚಿತ್ರ ತೆರೆಗೆ ಬರುತ್ತಿದೆ ಎನ್ನುವುದು ಬಹುಶಃ ಉತ್ತರ ಭಾರತದ ಪ್ರೇಕ್ಷಕರಿಗೆ ಗೊತ್ತಿದ್ದಂತೆ ಇಲ್ಲ. ಇದಕ್ಕೆ ಪುರಾವೆ ಎನ್ನುವಂತೆ ''ಸ್ಯಾಕ್ನಿಲ್'' ಪ್ರಕಾರ ಮುಂಬೈನಲ್ಲಿ ಮೊದಲ ದಿನ ಕೇವಲ 10.67% ಆಕ್ಯುಪೆನ್ಸಿ ಮಾತ್ರ ಕಂಡು ಬಂದಿದೆ. ದೆಹಲಿಯಲ್ಲಿ ಈ ಸಂಖ್ಯೆ 7.33% ಮಾತ್ರ ಇದೆ. ಬೆಂಗಳೂರು ಮತ್ತು ಚೆನ್ನೈನಲ್ಲಿ ಮಾತ್ರ ಈ ಚಿತ್ರ ನೋಡುವ ಉತ್ಸಾಹ ಪ್ರೇಕ್ಷಕರಲ್ಲಿ ಕಂಡು ಬಂದಿದೆ.

ಒಟ್ನಲ್ಲಿ ಸದ್ಯ ''ಅಜೇಯ್'' ಚಿತ್ರದ ಮೊದಲ ದಿನದ ಗಳಿಕೆ ನಿರಾಶಾದಾಯಕವಾಗಿದೆ. ಇಂದು(ಸೆಪ್ಟೆಂಬರ್ 20) ಮತ್ತು ನಾಳೆ (ಸೆಪ್ಟೆಂಬರ್ 21)ಯ ಗಳಿಕೆಯ ಮೇಲೆ ಚಿತ್ರದ ಭವಿಷ್ಯ ನಿಂತಿದೆ. ಒಂದು ಕೋಟಿಯನ್ನಾದರೂ ಚಿತ್ರ ಗಳಿಸುತ್ತಾ ಎನ್ನುವ ಪ್ರಶ್ನೆ ಸದ್ಯ ಹಲವರಲ್ಲಿ ಕಾಡುತ್ತಿದೆ. ಉತ್ತರ ಶೀಘ್ರದಲ್ಲಿಯೇ ಸಿಗಲಿದೆ.

Disclaimer: ಈ ವರದಿಯಲ್ಲಿ ನೀಡಲಾಗಿರುವ ಸಿನಿಮಾದ ಬಾಕ್ಸ್ ಆಫೀಸ್ ಅಂಕಿ ಅಂಶಗಳ ಮಾಹಿತಿಯನ್ನು https://www.sacnilk.com/, https://x.com/taran_adarsh, https://x.com/rameshlaus?lang=en, ನಿರ್ಮಾಣ ಸಂಸ್ಥೆಗಳು ಹಾಗೂ ಸಾರ್ವಜನಿಕವಾಗಿ ಲಭ್ಯವಿರುವ ಹಲವು ವೇದಿಕೆಗಳಿಂದ ತೆಗೆದುಕೊಳ್ಳಲಾಗಿದೆ. ಸಿನಿಮಾಗೆ ಸಂಬಂಧಿಸಿದ ಬಾಕ್ಸ್ ಆಫೀಸ್ ಕಲೆಕ್ಷನ್‌ಗಳ ಕುರಿತು ಪ್ರಕಟಿಸುವ ವರದಿಗಳಿಗೆ ಫಿಲ್ಮಿಬೀಟ್ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ.

More from Filmibeat

English summary
"Despite immense political interest, the film 'Ajey' based on Yogi Adityanath's life struggles at the box office, earning a meager ₹20 lakh on day 1. Read on for a detailed analysis of the film's slow start and its future prospects."
Read more about: bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X