Celebs » Amulya » Biography
ಜೀವನಚರಿತ್ರೆ
ಅಮೂಲ್ಯ ಇವರು 14 ಸೆಪ್ಟೆಂಬರ್ 1993 ಬೆಂಗಳೂರಿನಲ್ಲಿ ಜನಿಸಿದ್ದಾರೆ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿರುವ ಅಮೂಲ್ಯ ತಾಯಿ ಜಯಮ್ಮನ ಮಡಿಯಲಲ್ಲಿ ಬೆಳೆದರು. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜ್ ನಲ್ಲಿ ಪದವಿ ಪಡೆದುಕೊಂಡಿದ್ದಾರೆ.  ಇವರು ಕಾಲೇಜು ದಿನಗಳಲ್ಲಿ ಸ್ಪೋರ್ಟ್ಸ್, ಭರತ ನಾಟ್ಯ  ಡಾನ್ಸ್ ಗಳಲ್ಲಿ ಆಸಕ್ತಿ ಹೊಂದಿದ್ದರು. ಅಷ್ಟೇ ಅಲ್ಲದೆ ಇವರು ಕರಾಟೆಯಲ್ಲಿ ಗ್ರೀನ್ ಬೆಲ್ಟ್ ಪಡೆದುಕೊಂಡಿದ್ದಾರೆ.

ಹೀಗೆ ಕಾಲೇಜು ದಿನಗಳಲ್ಲಿ ಕ್ರಿಯಾಶೀಲರಾಗಿದ್ದ ಅಮೂಲ್ಯ ಚಿಕ್ಕ ವಯಸ್ಸಿನಲ್ಲಿಯೇ ಟಿವಿ ಕಿರುತೆರೆಗಳಲ್ಲಿ ಕಾಣಿಸಿಕೊಂಡರು. ನಂತರ ಇವರಿಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶಗಳು ಬಂದವು. ಇವರು ಚಿಕ್ಕ ವಯಸಿನಲ್ಲೇ ಚಿತ್ರ ರಂಗದಲ್ಲಿ ಪರ್ವ, ಲಾಲಿ ಹಾಡು, ಮಂಡ್ಯ ಮೊದಲಾದ ಚಿತ್ರಗಳಲ್ಲಿ ದೊಡ್ಡ ನಟರ ಜೊತೆ ಕಾಣಿಸಿಕೊಂಡರು.  2001 ರಲ್ಲಿ ತೆರೆಕಂಡ "ಪರ್ವ" ಚಿತ್ರದಲ್ಲಿ ಮೊದಲ ಬಾರಿಗೆ ಬಾಲನಟಿಯಾಗಿ ನಟಿಸಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ.

 ಬಹಳಷ್ಟು ಸಿನಿಮಾಗಳಲ್ಲಿ ಬಾಲ ನಟಿಯಾಗಿ ನಟಿಸಿ ಪ್ರಸಿದ್ಧಿ ಪಡೆದಿದ್ದ ಅಮೂಲ್ಯ 2007 ರಲ್ಲಿ ಬಿಡುಗಡೆಗೊಂಡ "ಚೆಲುವಿನ ಚಿತ್ತಾರ" ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ಮೊದಲ ಬಾರಿಗೆ  ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರ ಅಭೂತ ಪೂರ್ವ ಯಶಸ್ಸು ಕಂಡ ಹಿನ್ನಲೆಯಲ್ಲಿ ಅಮೂಲ್ಯ ಅವರ ಸಿನಿಮಾ ಜೀವನ ಬದಲಾಯಿತು. ಚೆಲುವಿನ ಚಿತ್ತಾರ ಸಿನಿಮಾ ಯಶಸ್ವಿ ನಂತರ ಇವರಿಗೆ ಹಲವು ಚಿತ್ರಗಳಲ್ಲಿ ನಟಿಸಲು ಅವಕಾಶಗಳು ದೊರೆತವು.

ಚೈತ್ರದ ಚಂದ್ರಮ, ಶ್ರಾವಣಿ ಸುಬ್ರಮಣ್ಯಂ, ಗಜಕೇಸರಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿ ಕನ್ನಡ ಸಿನಿಮಾರಂಗದಲ್ಲಿ  ಸೈ ಎನಿಸಿಕೊಂಡಿದ್ದಾರೆ ಅಮೂಲ್ಯ.