twitter
    Celebs»Chikkanna»Biography

    ಚಿಕ್ಕಣ್ಣ ಜೀವನಚರಿತ್ರೆ

    ಚಿಕ್ಕಣ್ಣ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ಹಾಸ್ಯ ಕಲಾವಿದ,ಹವ್ಯಾಸಿ ಹಿನ್ನಲೆ ಗಾಯಕ ಮತ್ತು ಗೀತರಚನಕಾರ. ತಮ್ಮ ವಿಶಿಷ್ಟ ಮ್ಯಾನರಿಸಂ ನಿಂದ ಪ್ರೇಕ್ಷಕರಿಗೆ ಕಚಗುಳಿಯಿಡುವ ಚಿಕ್ಕಣ್ಣ ಪ್ರಸ್ತುತ ಕನ್ನಡದ ಬಹುಬೇಡಿಕೆಯ ಹಾಸ್ಯ ನಟ.

    ಚಿಕ್ಕಣ್ಣ 1986,ಜೂನ್ 22 ರಂದು ಮೈಸೂರು ಜಿಲ್ಲೆಯ ಬಲ್ಲಹಳ್ಳಿಯಲ್ಲಿ ಜನಿಸಿದರು.ಮೈಸೂರಿನ ದೃಶ್ಯ ಕಲಾವಿದೆ ತಂಡದಲ್ಲಿ ಕಾಮಿಡಿ ಶೋಗಳನ್ನು ಮಾಡುತ್ತಾ ತಮ್ಮ ಕಲಾಜೀವನ ಆರಂಭಿಸಿದರು. ಈ ತಂಡದ ಮೂಲಕ ಹಲವು ಹಬ್ಬ-ಹರಿದಿನಗಳು ಮತ್ತು ರಾಜ್ಯೋತ್ಸವ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಿದ್ದ ಚಿಕ್ಕಣ್ಣ ನಂತರ ಉದಯ ಟಿವಿಯಲ್ಲಿ ಒಂದು ಕಾಮಿಡಿ ಶೋನಲ್ಲಿ ಕಾರ್ಯನಿರ್ವಹಿಸಿದರು.

    ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ ಕಾರ್ಯಕ್ರಮದ ನಿರೂಪಣೆ ಮಾಡುವಾಗ ಯಶ್ ಕಣ್ಣಿಗೆ ಬಿದ್ದರು. ನಂತರ ಯಶ್‌ರ `ಕಿರಾತಕ' ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹಾಸ್ಯನಟನಾಗಿ ಕಾಲಿಟ್ಟರು.ತದನಂತರ ತೆರೆಕಂಡ `ರಾಜಾ ಹುಲಿ',`ಅಧ್ಯಕ್ಷ' ಚಿತ್ರಗಳು ಇವರಿಗೆ ಬಿಗ್ ಬ್ರೇಕ್ ನೀಡಿದವು. ಅಲ್ಲಿಂದ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.ಕನ್ನಡದ ಬಹುತೇಕ ಎಲ್ಲಾ ನಟರೊಂದಿಗೆ ತೆರೆ ಹಂಚಿಕೊಂಡಿರುವ ಚಿಕ್ಕಣ್ಣ ಕಿರುತೆರೆಯಲ್ಲಿ ಖಳನಾಗಿ ಕೂಡ ಅಭಿನಯಿಸಿದ್ದಾರೆ.ಇವರಿಗೆ ಖಳನಾಯಕನಾಗಿ ನಟಿಸಬೇಕೆನ್ನುವ ಬಯಕೆ ಇದೆ.

     

    `ಮಾಸ್ಟರ್ ಪೀಸ್ ',`ನನ್ನ ನಿನ್ನ ಪ್ರೇಮ ಕಥೆ' ಮುಂತಾದ ಚಿತ್ರಗಳ ಮೂಲಕ ಹಿನ್ನಲೆ ಗಾಯಕನಾಗಿ ಕೂಡ ಪಯಣ ಆರಂಭಿಸಿರುವ ಇವರು `ಶಾರ್ಪ್ ಶೂಟರ್ ಚಿತ್ರಕ್ಕೆ ಗೀತೆರಚನೆ ಮಾಡುವ ಮೂಲಕ ಗೀತಸಾಹಿತಿಯಾದರು.ಶರಣ್‌ರ ರ‍್ಯಾಂಬೋ 2' ಚಿತ್ರದ ನಿರ್ಮಾಪಕರಲ್ಲಿ ಶರಣ್ ಕೂಡ ಒಬ್ಬರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X