twitter
    Celebs»Dhananjay»Biography

    ಧನಂಜಯ ಜೀವನಚರಿತ್ರೆ

    ಅರಸೀಕೆರೆಯ ಕಲ್ಲೇನಹಳ್ಳಿಯಲ್ಲಿ ಜನಿಸಿದ ಧನಂಜಯ ಕನ್ನಡ ಚಿತ್ರರಂಗದ ಬಹುಮುಖ ಮತ್ತು ಬಹುಮೂಲ್ಯ ಕಲಾಪ್ರತಿಭೆ. ಐತಿಹಾಸಿಕದಿಂದ ಆಧುನಿಕದವರೆಗೂ ವಿಭಿನ್ನ ಮತ್ತು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಿರುವ ಧನಂಜಯ ರಂಗಭೂಮಿಯ ಹಿನ್ನಲೆಯಿಂದ ಚಿತ್ರರಂಗಕ್ಕೆ ಬಂದರು.

    ವಿಧ್ಯಾಭ್ಯಾಸದಲ್ಲಿ ಚುರುಕಾಗಿದ್ದ ಧನಂಜಯ ಹತ್ತನೇ ತರಗತಿ ಪರೀಕ್ಷೆಯಲ್ಲಿ 90 ಕ್ಕೂ ಹೆಚ್ಚು ಪ್ರತಿಶತ ಅಂಕ ಪಡೆದು ಜಿಲ್ಲೆಗೆ ಪ್ರಥಮ ಬಂದಿದ್ದರು.ಮೈಸೂರಿನ ಜಯಚಾಮರಾಜೆಂದ್ರ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಇವರು ಇನ್ಪೋಸಿಸ್ ನಲ್ಲಿ ದೊರೆತ ಉದ್ಯೋಗ ನಿರಾಕರಿಸಿ ಮೈಸೂರಿನ ರಂಗಾಯಣ ಸೇರಿದರು.

    2013 ರಲ್ಲಿ ತೆರೆಕಂಡ `ಡೈರೆಕ್ಟರ್ ಸ್ಪೆಷಲ್' ಚಿತ್ರದಿಂದ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.ನಂತರ ಇವರು ನಟಿಸಿದ ಕಿರುಚಿತ್ರ `ಜಯನಗರ 4th ಬ್ಲಾಕ್' ಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು.
    ಮುಂದೆ `ರಾಟೆ',`ಬಾಕ್ಸರ್',`ಜೆಸ್ಸಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ ಧನಂಜಯ 2017 ರಲ್ಲಿ ನಟಿಸಿದ ಐತಿಹಾಸಿಕ ಚಿತ್ರ `ಅಲ್ಲಮ'ಕ್ಕಾಗಿ ಫಿಲ್ಮ ಫೇರ್ ವಿಮರ್ಶಕರ ಅತ್ತ್ಯುತ್ತಮ ನಟ ಪ್ರಶಸ್ತಿ ಪಡೆದರು.

    2018 ರಲ್ಲಿ ತೆರೆಕಂಡ ದುನಿಯಾ ಸೂರಿ ನಿರ್ದೇಶನದ ,ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನಯದ `ಟಗರು' ಚಿತ್ರದಲ್ಲಿ ಡಾಲಿಯಾಗಿ ಖಳನಟನ ಪಾತ್ರದಲ್ಲಿ ಮಿಂಚಿದರು . ಈ ಚಿತ್ರದಲ್ಲಿನ ಇವರ ಅಭಿನಯಕ್ಕೆ ಪ್ರೇಕ್ಷಕರು ಸಂಪೂರ್ಣವಾಗಿ ಫಿದಾ ಆದರು.
    ರಾಮಗೋಪಾಲ್ ವರ್ಮಾ ನಿರ್ಮಾಣದ ಕನ್ನಡ ಮತ್ತು ತೆಲಗು ಭಾಷಾ ಚಿತ್ರ `ಭೈರವಗೀತಾ' ಚಿತ್ರದಲ್ಲಿ ನಾಯಕನಾಗಿ ಅರ್ಭಟಿಸಿರುವ ಧನಂಜಯ ದರ್ಶನ್‌ರ `ಯಜಮಾನ' ಚಿತ್ರದಲ್ಲಿ ಮಿಠಾಯಿ ಸೂರಿ ಪಾತ್ರದಲ್ಲಿ ಮಿಂಚಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X