Celebs » Diganth » Biography
ಜೀವನಚರಿತ್ರೆ
ಕನ್ನಡ ಚಿತ್ರರಂಗದಲ್ಲಿ ದೂದ್ ಪೇಡಾ ಎಂದೇ ಖ್ಯಾತಿಗಳಿಸಿರುವ ದಿಗಂತ್ ಜನಿಸಿದ್ದು 28 ಡಿಸೆಂಬರ್ 1983 ಸಾಗರದಲ್ಲಿ. ತಂದೆ ಕೃಷ್ಣಮೂರ್ತಿ ತಾಯಿ ಮಲ್ಲಿಕಾ ಕೃಷ್ಣಮೂರ್ತಿ.

ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಸಾಗರದಲ್ಲಿ. ನಂತರ ಇವರು ಬೆಂಗಳೂರಿನ ಶ್ರೀ ಭಗವನ್ ಮಹಾವೀರ್ ಜೈನ್ ಕಾಲೇಜ್ ನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪಡೆದು ನಂತರ ಮಾಡಲಿಂಗ್ ಕ್ಷೇತ್ರಕ್ಕೆ ಪರಿಚಿತರಾದರು. 2006 ರಲ್ಲಿ  ಮಾಡಲಿಂಗ್ ಪದವಿಯನ್ನು ಪಡೆದುಕೊಂಡು ಚಿತ್ರರಂಗವನ್ನು ಪ್ರವೇಶಿಸಿದರು.

2010 ರಲ್ಲಿ ಇವರಿಗೆ  "ಮನಸಾರೆ" ಚಿತ್ರದ ಮೂಲಕ ನಾಯಕನಾಗಿ ಪರಿಚಿತರಾದರು. ಅನಂತರ ಇವರಿಗೆ ಕನ್ನಡ ಚಿತ್ರ ರಂಗದಲ್ಲಿ ಸುಮಾರು ಚಿತ್ರಗಳಿಗೆ ನಾಯಕನಾಗಿ ಅಭಿನಹಿಸುವ ಅವಕಾಶ ಸಿಕ್ಕವು. ಪಂಚರಂಗಿ, ಲೈಫು ಇಷ್ಟೇನೆ, ಪಾರಿಜಾತ,  ಹೀಗೆ ಇನ್ನು ಹಲವು ಕನ್ನಡ ಚಿತ್ರರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada