twitter
    Celebs»Duniya Vijay»Biography

    ದುನಿಯಾ ವಿಜಯ್ ಜೀವನಚರಿತ್ರೆ


    ದುನಿಯಾ ವಿಜಯ್ ಕನ್ನಡ ಚಿತ್ರರಂಗದ ಖ್ಯಾತ ನಟ. ಇವರು 1974ರ ಜನವರಿ 20ರಂದು ಬೆಂಗಳೂರಿನಲ್ಲಿ ಜನಿಸಿದರು. ಬಡ ಕುಟುಂಬದಲ್ಲಿ ಬೆಳೆದು ಬಂದ ಇವರಿಗೆ ಬಾಲ್ಯದಿಂದಲೂ ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಅದರಂತೆ ಕೆಲ ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.


    ವೃತ್ತಿಜೀವನ

    ಕಿಚ್ಚ ಸುದೀಪ್ ಅಭಿನಯದ ರಂಗ ಎಸ್‌ಎಸ್‌ಎಲ್‌ಸಿ ಸಿನಿಮಾದಲ್ಲಿ ಸಣ್ಣ ಪಾತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ ಪ್ರವೇಶಿಸಿದರು. ನಂತರ ಮೊನಲಿಸಾ, ರಿಷಿ, ರಾಕ್ಷಸ, ಜೋಗಿ, ಡೆಡ್ಲಿ, ಶ್ರೀ, ಕಲ್ಲಾರಳಿ ಹೂವಾಗಿ, ಅಂಬಿ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಚಿಕ್ಕ-ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಂಡು. ನಂತರ 2007ರಲ್ಲಿ ಸೂರಿ ಅವರ ನಿರ್ದೇಶನದಲ್ಲಿ ಮೂಡಿಬಂದ 'ದುನಿಯಾ' ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರ ಬ್ಲಾಕ್‌ಬಸ್ಟರ್ ಆಗುವುದರ ಜೊತೆಗೆ ವಿಜಯ್‌ಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಈ ಸಿನಿಮಾದ ಅದ್ಭುತ ನಟನೆಯಿಂದ 'ದುನಿಯಾ' ವಿಜಯ್ ಎಂದೇ ಚಿರಪರಿಚಿತರಾದರು. ಜೊತೆಗೆ ಅತ್ಯುತ್ತಮ ನಟ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದರು.


    ನಂತರ ಇವರಿಗೆ ಅನೇಕ ಸಿನಿಮಾಗಳಲ್ಲಿ ನಾಯಕನಾಗಿ ಅಭಿನಯಿಸುವ ಅವಕಾಶಗಳು ಬಂದವು. ಬಳಿಕ ಚಂಡ, ಜರಾಸಂಧ, ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ಹೀಗೆ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X