twitter
    Celebs»Geetapriya»Biography

    ಗೀತಪ್ರಿಯ ಜೀವನಚರಿತ್ರೆ

    ಗೀತಪ್ರಿಯ ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಮತ್ತು ಗೀತರಚನಕಾರ. ಸುಮಾರು 40 ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿರುವ ಇವರು 250 ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಬರೆದಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಇವರ ಕೊಡುಗೆಯನ್ನು ಗಮನಿಸಿ 1992-93 ರಲ್ಲಿ ಇವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಲಭಿಸಿತು.

    ವೈಯಕ್ತಿಕ ಜೀವನ

    ಗೀತಪ್ರಿಯ 1931 ರಲ್ಲಿ ಲಕ್ಷಣರಾವ್ ಹೆಸರಿನಲ್ಲಿ ಜನಿಸಿದರು.ಇವರ ತಂದೆ ಮೈಸೂರು ಒಡೆಯರ್ ಅವರ ಸೈನ್ಯದಲ್ಲಿದ್ದರು. ಇವರ ಮಾತೃಭಾಷೆ ಮರಾಠಿಯಾದರೂ ಇವರ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದರು.ಇವರ ಕುಟುಂಬದ ಹತ್ತಿರ ವಾಸಿಸುತ್ತಿದ್ದ ಕವಿ ಪಿ.ಟಿ.ನರಸಿಂಹಾಚಾರ್ ಪ್ರಭಾವಕ್ಕೆ ಬಾಲ್ಯದಲ್ಲಿ ಸಿಲುಕಿದರು.

    ಶಿವರಾಮ ಕಾರಂತ,ಮಾಸ್ತಿ ವೆಂಕಟೇಶ್ ಅಯ್ಯಂಗಾರ್,ತರಾಸು,ಅನಕೃ ಮುಂತಾದವರ ಸಾಹಿತ್ಯದಿಂದ ಸ್ಫೂರ್ತಿ ಪಡೆದ ಇವರು ತಾವು ಯುವಕರಿದ್ದಾಗಲೇ ಕಥೆ ಮತ್ತು ಕವನಗಳನ್ನು ಬರೆದು ರಾಮರಾಜ್ಯ, ತಾಯಿನಾಡು ಮುಂತಾದ ಮ್ಯಾಗಜೀನ್‌ಗೆ ಕಳಿಸುತ್ತಿದ್ದರು.

    ಶಿಕ್ಷಣ ಪೂರ್ಣಗೊಳಿಸಿ ಕಬ್ಬನ ಪಾರ್ಕನ್ ರೆಸ್ಟೊರೆಂಟ್ ಒಂದರಲ್ಲಿ ತಿಂಗಳಿಗೆ 35 ರೂಪಾಯಿ ಸಂಬಳ ಪಡೆದು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ರಂಗಭೂಮಿ ಪರಿಚಯದಿಂದ ಇವರಿಗೆ ಸಂಗೀತ ನಿರ್ದೇಶಕ ವಿಜಯ ಭಾಸ್ಕರ್ ಮತ್ತು ನಿರ್ದೇಶಕ ಎಂ.ಬಿ.ಸಿಂಗ್ ಬಾಬು ಪರಿಚಯವಾಯಿತು. ನಂತರ ವಿಜಯ ಭಾಸ್ಕರ್‌ರವರು ತಿಂಗಳಿಗೆ 40 ರೂಪಾಯಿ ಕೊಡುವುದಾಗಿ ಹೇಳಿದಾಗ ಗೀತರಚನೆಕಾರರಾಗಿ ಚಿತ್ರರಂಗ ಪ್ರವೇಶಿಸಿದರು.

    ಗೀತರಚನಕಾರ

    1954 ರಲ್ಲಿ ತೆರೆಕಂಡ `ಶ್ರೀ ರಾಮ ಪೂಜಾ' ಚಿತ್ರದ ಮೂಲಕ ಸಾಹಿತಿಯಾಗಿ ಹೊರಹೊಮ್ಮಿದರು.ನಂತರ ಮದ್ರಾಸ್‌ಗೆ ಹೋಗಿ ಅಲ್ಲಿ ಸಂಬಾಷಣಾಕರರಾಗಿ ಕೂಡ ಕಾರ್ಯ ನಿರ್ವಹಿಸಿದರು. 1963 ರಲ್ಲಿ ತೆರೆಕಂಡ `ಶ್ರೀ ರಾಮಾಂಜನೇಯ ಯುದ್ಧ' ಚಿತ್ರಕ್ಕೆ ಇವರು ಬರೆದ ಗೀತೆಗಳು ಪ್ರಶಂಸೆ ಪಡೆದವು. ನಂತರ ಸಾಕಷ್ಟು ಕನ್ನಡ ಚಿತ್ರಗಳಿಗೆ ಗೀತೆ ಬರೆದರು. ಮೊಹಮ್ಮದ ರಫಿ ಹಾಡಿದ ಒಂದೇ ಒಂದು ಕನ್ನಡದ ಗೀತೆಯಾದ `ನೀನೆಲ್ಲಿ ನಡೆವೆ ದೂರ' ಗೀತೆ ಇವರು ರಚಿಸಿದ್ದು.

    ನಿರ್ದೇಶಕ

    1968 ರಲ್ಲಿ ಡಾ.ರಾಜಕುಮಾರ್ ಮತ್ತು ಕಲ್ಪನಾ ಮುಖ್ಯ ಪಾತ್ರದಲ್ಲಿ ನಟಿಸಿದ `ಮಣ್ಣಿನ ಮಗ' ಚಿತ್ರವನ್ನು ನಿರ್ದೇಶಿಸಿದರು.ಈ ಚಿತ್ರ ರಾಷ್ಟ್ರ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. ಈ ಚಿತ್ರ ಬೆಂಗಳೂರಿನ ಕಪಾಲಿ ಮತ್ತು ಭಾರತ್ ಚಿತ್ರಮಂದಿರಗಳಲ್ಲಿ ನೂರು ದಿನ ಓಡಿತು.

    ನಂತರ `ಬೆಸುಗೆ',`ಹೊಂಬಿಸಿಲು',`ಪುಟಾಣಿ ಏಜೆಂಟ್123',`ಮೌನಗೀತೆ' ಮುಂತಾದ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರು ಮೂರು ತುಳು ಮತ್ತು ಒಂದು ಹಿಂದಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

    ನಿಧನ

    ಗಂಟಲು ಕ್ಯಾನ್ಸರ್‌ನಿಂದ ಇವರು ಮಲ್ಲೇಶ್ವರಂನ ಸರ್ಕಾರಿ ಆಸ್ಪತ್ರೆ ಸೇರಿದರು.2016 ಜನೇವರಿ 16 ರಂದು ಹೃದಯಾಘಾತದಿಂದ ನಿಧನರಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X