CelebsbredcrumbHariharanbredcrumbBiography

  ಹರಿಹರನ್ ಜೀವನಚರಿತ್ರೆ

  ಹರಿಹರನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ಹಿನ್ನಲೆ ಗಾಯಕ .ಪ್ರಮುಖವಾಗಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕೆಲ ಕನ್ನಡ, ತೆಲಗು,ತಮಿಳು ಚಿತ್ರಗಳ ಹಾಡಿಗೆ ಧ್ವನಿಯಾಗಿದ್ದಾರೆ.

  ಮುಂಬೈನಲ್ಲಿ ತಮಿಳು ಬ್ರಾಹ್ಮಿನ್ ಅಯ್ಯರ್ ಕುಟುಂಬದಲ್ಲಿ ಜನಿಸಿದ ಇವರು ವಿಜ್ಞಾನ ಮತ್ತು ಕಾನೂನಿನಲ್ಲಿ ಪದವಿ ಪಡೆದಿದ್ದಾರೆ.ಇವರ ತಾಯಿ ಕರ್ನಾಟಕ ಸಂಗೀತದ ಪ್ರಸಿದ್ಧ ಗಾಯಕಿ ಶ್ರೀಮತಿ ಆಲಮೇಲು. ತಾಯಿಯಿಂದ ಇವರಿಗೆ ಸಂಗೀತದ ಅಭ್ಯಾಸ ಆರಂಭವಾಯಿತು.

  ಹಿಂದೂಸ್ತಾನಿ ಸಂಗೀತಗಾರರಾದ ಮೇಹ್ಡಿ ಹಸನ್ ಮತ್ತು ಜಗಜಿತ್ ಸಿಂಗ್ ರ ಪ್ರಭಾವದಿಂದ ಘಜಲ್‌ಗಳಲ್ಲಿ ಕೂಡ ಆಸಕ್ತಿ ಬೆಳಸಿಕೊಂಡರು. ಉಸ್ತಾದ್ ಗುಲಾಮ್ ಮುಸ್ತಾಫಾ ಖಾನ್‌ರಿಂದ ಸಂಗೀತ ತರಬೇತಿ ಪಡೆದರು.

  ಹಿಂದಿಯ `ಗಮನ' ಚಿತ್ರದಿಂದ ಸಂಗೀತ ಪಯಣ ಆರಂಭಿಸಿದ ಇವರು ಈ ಚಿತ್ರದ ಹಾಡಿಗಾಗಿ ಪ್ರಶಸ್ತಿ ಕೂಡ ಪಡೆದರು.

  ಹಲವು ಭಾಷೆಗಳ ಸಾಕಷ್ಟು ಗೀತೆಗಳಿಗೆ ಧ್ವನಿಯಾಗಿರುವ ಇವರು 1998 ರಲ್ಲಿ ಹಿಂದಿಯ `ಬಾರ್ಡರ್' ಚಿತ್ರದ ಗೀತೆಗಾಗಿ ರಾಷ್ಟ್ರ ಪ್ರಶಸ್ತಿ ಪಡೆದರು. 2004 ರಲ್ಲಿ ಪದ್ಮಶ್ರೀ ಗೌರವ ಪಡೆದರು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X