twitter
    Celebs»Ilayaraja»Biography

    ಇಳಯರಾಜ ಜೀವನಚರಿತ್ರೆ

    ಪದ್ಮಭೂಷಣ ಪ್ರಶಸ್ತಿ ವಿಜೇತ ಇಳಯರಾಜ ಇವರು ಕನ್ನಡ, ತೆಲುಗು, ತಮಿಳು, ಚಿತ್ರಗಳ ಖ್ಯಾತ ಸಂಗೀತ ನಿರ್ದೇಶಕರಾಗಿದ್ದಾರೆ. ಇವರು ಜನಿಸಿದ್ದು 2 ಜೂನ್ 1943 ತಮಿಳುನಾಡಿನ ಪನೈಪುರಂ ನಲ್ಲಿ. ಇವರು ಚಿಕ್ಕ ವಯಸಿನಲ್ಲೇ ಸಂಗೀತ ಕಲಿಯುವುದರಲ್ಲಿ ಆಸಕ್ತಿ ವಹಿಸಿ ಇಂದು ಇಡೀ ಪ್ರಪಂಚವೇ ಗುರುತಿಸುವಾಗೆ ಸಂಗೀತ ಮಾಂತ್ರಿಕರಾಗಿ ಬೆಳೆದಿದ್ದಾರೆ.

     ಆ ದಿನಗಳು, ಪ್ರೇಮ್ ಕಹಾನಿ, ಮೈತ್ರಿ, ಗೀತಾ, ಹರೇ ರಾಮ್ ಹರೇ ಕೃಷ್ಣ, ದೃಶ್ಯ ಸೇರಿದಂತೆ ಇನ್ನು ಕೆಲ ಕನ್ನಡ ಚಿತ್ರಗಳಿಗೆ ಸಂಗೀತ ನಿರ್ದೇಶನ ನೀಡಿದ್ದಾರೆ.  1970 ದಿಂದ ಇವರು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಲು ಪ್ರಾರಂಭಿಸಿದರು.

    ಇವರೆಗೆ ಇವರು 8000 ಹಾಡುಗಳನ್ನು ಸಂಯೋಜನೆ ಮಾಡಿದ್ದಾರೆ. ಹಾಗೂ ಸುಮಾರು 1000 ಸಿನೆಮಾಗಳಲ್ಲಿ ತಮ್ಮ ಸಂಗೀತ ಮೊಡಿಯನ್ನು ತೋರಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಭಾಷೆಯಲ್ಲಿ ರಾಷ್ಟ್ರೀಯ & ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ.

    ಇವರ ಸಂಗೀತವನ್ನು ಮೆಚ್ಚಿ ಇವರಿಗೆ ರಾಷ್ಟ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.  ಭಕ್ತಿಗೀತೆಗಳು, ಭಾವಗಿತೆಗಳು, ಸಿನಿಮಾ ಹಾಡುಗಳು, ಹೀಗೆ ಹಲವಾರು ಬಗೆಯಲ್ಲಿ ತಮ್ಮ ಸಂಗೀತ ಮೊಡಿಯನ್ನು ಮಾಡಿ ಎಲ್ಲರಿಗು ಪರಿಚಿತವಾಗುವಂತೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದಾರೆ.

    ಕೇವಲ ಸಿನಿಮಾಗಳಲ್ಲಿ ತಮ್ಮ ಸಂಗೀತವನ್ನು ನೀಡದೆ ವಿವಿಧ ರಾಜ್ಯ, ದೇಶಗಳಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ತಮ್ಮ ಸಂಗೀತದ ಕಂಪು ಪಸರಿಸಿದ್ದಾರೆ.  ಇವರು ಹಲವು ಭಾಷೆಗಳ ಸಂಗೀತದಲ್ಲಿ ಮಾಡಿದ ಸಾಧನೆಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ ಸಂಗೀತದ ಹಿಂಪನ್ನು ಕೇಳಿ 2010 ರಲ್ಲಿ ಕೇಂದ್ರ ಸರ್ಕಾರ ಇವರಿಗೆ ಪದ್ಮಭೂಷಣ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಿದೆ.

    ಇಳಯರಾಜ ಅವರಿಗೆ ಲಭಿಸಿದ ಪ್ರಶಸ್ತಿಗಳು:-

    * ಪದ್ಮಭೂಷಣ ಪ್ರಶಸ್ತಿ
    *  ನ್ಯಾಷನಲ್ ಫಿಲ್ಮ್ ಅವಾರ್ಡ್ಸ್
    * ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟ್ ಅವಾರ್ಡ್
    *  ಇಂಟರ್ ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ
    * ಫಿಲ್ಮ್ ಫೇರ್ ಅವಾರ್ಡ್ಸ್
    * ಕೇರಳ ರಾಜ್ಯ ಫಿಲ್ಮ್ ಫೇರ್ ಅವಾರ್ಡ್
    * ಕೇರಳ ರಾಜ್ಯ ಸರ್ಕಾರ ಪ್ರಶಸ್ತಿ
    * ಸ್ಕ್ರೀನ್ ಅವಾರ್ಡ್ಸ್
    * ನಂದಿ ಅವಾರ್ಡ್ಸ್
    * ತಮಿಳುನಾಡು ರಾಜ್ಯ ಪ್ರಶಸ್ತಿ
    * ತಮಿಳುನಾಡು ರಾಜ್ಯ ಫಿಲ್ಮ್ ಅವಾರ್ಡ್ಸ್
    * ನಾರ್ವೆ ತಮಿಳ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್
    * ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X