twitter
    Celebs»LN Shastry»Biography

    ಎಲ್ ಎನ್ ಶಾಸ್ತ್ರೀ ಜೀವನಚರಿತ್ರೆ

    ಎಲ್.ಎನ್.ಶಾಸ್ತ್ರೀ (ಚೈತನ್ಯ) ಕನ್ನಡ ಚಿತ್ರರಂಗದ ಪ್ರಸಿದ್ಧ ಕಂಚಿನ ಕಂಠದ ಹಿನ್ನಲೆಗಾಯಕ ಮತ್ತು ಸಂಗೀತ ನಿರ್ದೇಶಕ. ಸುಮಾರು 25 ವರ್ಷಗಳ ಸಿನಿಪಯಣದಲ್ಲಿ 3000 ಕ್ಕೂ ಹೆಚ್ಚು ಗೀತೆಗಳಿಗೆ ಧ್ವನಿಯಾಗಿದ್ದಾರೆ. 1996 ರಲ್ಲಿ ತೆರೆಕಂಡ `ಅಜಗಜಾಂತರ' ಚಿತ್ರದಿಂದ ತಮ್ಮ ಗಾಯನ ಪಯಣ ಆರಂಭಿಸಿದ ಇವರು ಮತ್ತೇ ಹಿಂತುರಗಿ ನೋಡಲಿಲ್ಲ.
    ಜನುಮದ ಜೋಡಿ ಚಿತ್ರದ `ಕೋಲುಮುಂಡೆ ಜಂಗಮ' ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದರು. 1998 ರಲ್ಲಿ ತೆರೆಕಂಡ `ಕನಸಲು ನೀನೆ ಮನಸಲು ನೀನೆ' ಚಿತ್ರದಿಂದ ಸಂಗೀತ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಸಂದರ್ಭದಲ್ಲಿ ತಮ್ಮ ಸ್ನೇಹಿತರೊಬ್ಬರ ಸಲಹೆಯಂತೆ ತಮ್ಮ ಹೆಸರನ್ನು ಚೈತನ್ಯ ಎಂದು ಬದಲಿಸಿದರು. ಈ ಹೆಸರಿನಲ್ಲಿಯೇ ಸುಮಾರು 25 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
    2009 ರಲ್ಲಿ ಬಳ್ಳಾರಿ ನಾಗ ಚಿತ್ರದ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುವಾಗ ಸಾಹಸಸಿಂಹ ವಿಷ್ಣವರ್ಧನ್ ಮತ್ತು ಅಭಿಮಾನಿಗಳ ಒತ್ತಾಯದ ಮೇರೆಗೆ ಚೈತನ್ಯ ಎಂಬ ಹೆಸರನ್ನು ಕೈಬಿಟ್ಟು ಮೊದಲಿನ ಹೆಸರನ್ನು ಮುಂದುವರೆಸಿದರು. ಇವರ ಪತ್ನಿ ಸುಮಾ ಶಾಸ್ತ್ರೀ ಕೂಡ ಸುಮಾರು 50 ಕ್ಕೂ ಹೆಚ್ಚು ಚಿತ್ರಗಳಲ್ಲಿ ಹಾಡಿರುವ ಹಿನ್ನಲೆ ಗಾಯಕಿ.
    2017 ಅಗಸ್ಟನಲ್ಲಿ ಕರಳು ಕ್ಯಾನ್ಸರ್ ನಿಂದ ಈ ಗಾನಕೋಗಿಲೆ ಈ ಜಗತ್ತಿನಿಂದ ಮರೆಯಾಯಿತು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X