twitter
    Celebs»Meghana Raj»Biography

    ಮೇಘನಾ ರಾಜ್ ಜೀವನಚರಿತ್ರೆ

    ಮೇಘನಾ ಸುಂದರ್ ರಾಜ್ ಕನ್ನಡ ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯಾಗಿರುವ ಪ್ರಖ್ಯಾತ ನಟಿ. ಇವರು ಖ್ಯಾತ ನಟ ಸುಂದರರಾಜ್ ಮತ್ತು ಪ್ರಮೀಳಾ ಜೋಷಾಯಿಯವರ ಪುತ್ರಿ. 2018 ರಲ್ಲಿ ಯುವಸಾಮ್ರಾಟ್ ಚೀರಂಜೀವಿ ಸರ್ಜಾರವರನ್ನು ವಿವಾಹವಾದರು.


    1990 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಮೇಘನಾ ಸುಂದರರಾಜ್ ಮತ್ತು ಪ್ರಮೀಳಾವರ ಏಕೈಕ ಪುತ್ರಿ. ಬಾಲ್ಡವಿನ್ ಹೈಸ್ಕೂಲ್‌ನಲ್ಲಿ ವಿಧ್ಯಾಭ್ಯಾಸ ಮುಗಿಸಿದ ಇವರು ಕ್ರೈಸ್ತ ವಿಶ್ವವಿದ್ಯಾನಿಲಯದಿಂಧ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

    ಬಾಲ್ಯದಲ್ಲಿ ತಂದೆಯೊಡನೆ ನಾಟಕದಲ್ಲಿ ಅಭಿನಯಿಸಿದ್ದ ಮೇಘನಾ 2009 ರಲ್ಲಿ ತೆರಕಂಡ `ಬೆಂಡು ಅಪ್ಪಾರಾವ್ RMP' ಚಿತ್ರದಿಂದ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಇದಕ್ಕೂ ಮೊದಲು ಕೆ.ಬಾಲಚಂದರ್ ನಿರ್ಮಾಣದ `ಕೃಷ್ಣಲೀಲೈ' ಚಿತ್ರದಲ್ಲಿ ನಟಿಸಿದ್ದರೂ ಅದು ತೆರೆ ಕಾಣಲಿಲ್ಲ.


    2010ರಲ್ಲಿ ತೆರೆಕಂಡ ಯೋಗೇಶ್ ಚಿತ್ರ `ಪುಂಡ' ಮೂಲಕ ಚಂದನವನದಲ್ಲಿ ಕೂಡ ನಾಯಕಿಯಾಗಿ ಇನ್ನಿಂಗ್ಸ್ ಆರಂಭಿಸಿದರು.ಮೇಘನಾಗೆ ಸಿನಿ ಕರಿಯರ್‌ಗೆ ಬ್ರೇಕ್ ನೀಡಿದ್ದು ಮಲಯಾಳಂ ಚಿತ್ರರಂಗ. ಹಲವು ಯಶಸ್ವಿ ಮಲಯಾಳಂ ಚಿತ್ರಗಳಲ್ಲಿ ನಟಿಸಿದ ಮೇಘನಾ 2013 ರಲ್ಲಿ ತೆರೆಕಂಡ `ರಾಜಾಹುಲಿ' ಚಿತ್ರದಿಂದ ಮತ್ತೆ ಕನ್ನಡಕ್ಕೆ ಬಂದರು. ನಂತರ `ಬಹುಪರಾಕ್',`ಆಟಗಾರ' ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿದರು.


    ಪತಿ ಚಿರಂಜೀವಿ ಸರ್ಜಾ 2020 ಜೂನ್ 7 ರಂದು ಹೃದಯಾಘಾತದಿಂದ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X