twitter
    Celebs»Naveen Sajju»Biography

    ನವೀನ್ ಸಜ್ಜು ಜೀವನಚರಿತ್ರೆ

    ನವೀನ್ ಸಜ್ಜು ಕನ್ನಡ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕ. ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬಳ್ಳೆಕೆರೆ ಎಂಬ ಊರಿನಲ್ಲಿ ಹುಟ್ಟಿದ ನವೀನ್ ಸಜ್ಜು ಬಾಲ್ಯದಿಂದಲೇ ಕಷ್ಟದಲ್ಲೇ ಬೆಳೆದು ಬಂದವರು. ಚಿಕ್ಕ ವಯಸ್ಸಿನಲ್ಲಿ ಊರಿನ ಸಾವಿನ ಮನೆಗಳಲ್ಲಿ ಹರಿಕಥೆ ನೋಡಿ ಅವರ ಜೊತೆಗೆ ಹಾಡುತ್ತಿದ್ದರು ನವೀನ್ ಸಜ್ಜು, ಕೆಲವು ನಾಟಕಗಳಲ್ಲಿಯೂ ಅಭಿನಯಿಸಿದ್ದಾರೆ.

     

    ಊರೂರು ಸುತ್ತಿ ಆರ್ಕೇಸ್ಟ್ರಾದಲ್ಲಿ ಹಾಡುತ್ತಿದ್ದ ನವೀನ್ ಸಜ್ಜು ಹೊಟ್ಟೆಪಾಡಿಗಾಗಿ ಮೈಸೂರಿನಲ್ಲಿ ಎರಡು ತಿಂಗಳು ಆಟೋ  ಕೂಡ ಓಡಿಸಿದ್ದರು.ಒಂದು ಸಲ ಆರ್ಕೆಸ್ಟ್ರಾದಲ್ಲಿ ಹಾಡುವಾಗ ಇವರ ಗಾಯನ ಕೇಳಿದ್ದ ಪವನಕುಮಾರ್ ಮತ್ತು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ 2013 ರಲ್ಲಿ ತೆರೆಕಂಡ `ಲೂಸಿಯಾ' ಚಿತ್ರದಲ್ಲಿ ಅವಕಾಶ ಕೊಟ್ಟರು. ಈ ಚಿತ್ರದ `ಜುಮ್ಮ ಜಮ್ಮ' ಹಾಡು ಇವರಿಗೆ ಹೆಸರು ತಂದು ಕೊಟ್ಟಿತು. ಈ ಹಾಡಿಗಾಗಿ ಆರು ತಿಂಗಳ ಕಾಲ ತಮ್ಮ ಧ್ವನಿ ಮಾಡುಲೇಷನ್ ಅಭ್ಯಾಸ ಮಾಡಿದ್ದರು. ಈ ಗೀತೆ ಇವರಿಗೆ ರಾಜ್ಯ ಸರ್ಕಾರದ ಅತ್ತ್ಯುತ್ತಮ ಗಾಯಕ ಪ್ರಶಸ್ತಿ ತಂದು ಕೊಟ್ಟಿತು.

     

    ಡಾ.ಗಂಗೂಬಾಯಿ ಸಂಗೀತ ವಿದ್ಯಾಲಯದಲ್ಲಿ ಹಿಂದೂಸ್ತಾನಿ ಸಂಗೀತದಲ್ಲಿ ದಿಪ್ಲೋಮಾ ಪಡೆಯುತ್ತಿರುವ ಇವರು ಪ್ರಸ್ತುತ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕ ಮಾತ್ರವಲ್ಲದೇ ಸಂಗೀತ ನಿರ್ದೇಶಕನಾಗಿ ಪ್ರಸ್ತುತರು. ಮೆಲಡಿ ಗೀತೆಗಳಿಗಿಂತ ಹೈ ಪಿಚ್ ಇರುವ ಹಾಡುಗಳನ್ನು ಹಾಡವುದು ನವೀನ್‌ಗೆ ಇಷ್ಟ. ಕನಕ ಚಿತ್ರದ `ಎಣ್ಣೆ ನಮ್ದೂ ಊಟ ನಿಮ್ದು' ಹಾಡು ಇವರಿಗೆ ಇನ್ನಷ್ಷು ಜನಪ್ರಿಯತೆ ತಂದು ಕೊಟ್ಟಿತು.

     

    ಬಿಗ್‌ಬಾಸ್ ಕನ್ನಡ ಸೀಸನ್ 6

    ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ.ಈ ಸ್ಫರ್ದೆಯಲ್ಲಿ ರನ್ನರ್ ಆಪ್ ಆದರು

    ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು

    ಅಕ್ಷತಾ ಪಾಂಡವಪುರ

    ಮುರಳಿ

    ಎಂ.ಜೆ.ರಾಕೇಶ್

    ಜಯಶ್ರೀ

    ಕವಿತಾ ಗೌಡ

    ಆಂಡ್ರೂ

    ಧನರಾಜ್

    ರ‍್ಯಾಪಿಡ್ ರಶ್ಮಿ

    ನಯನಾ ಪುಟ್ಟಸ್ವಾಮಿ

    ಜಿಮ್ ರವಿ

    ಸೋನು ಪಾಟೀಲ್

    ಮೇಘಶ್ರೀ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X