Celebs » Parul Yadav » Biography
ಜೀವನಚರಿತ್ರೆ
ಪಾರೂಲ್ ಯಾದವ್ ಅವರು ಜನಿಸಿದ್ದು ಜೂನ್ 05,  1982 ಮುಂಬೈ ನಲ್ಲಿ. ಇವರ ವಿದ್ಯಾಭ್ಯಾಸ ಮುಗಿಸಿದ್ದು ಮುಂಬೈ ನಲ್ಲಿ. ಇವರು ಶಿಕ್ಷಣದ ಜೊತೆಯಲ್ಲೇ ರೂಪ ದರ್ಶಿಯಾಗಿ ನಿರೂಪಕಿಯಾಗಿ ಹೊರ ಹೊಮ್ಮಿದವರು. ಇವರು ಅನೇಕ ಕಾರ್ಯ ಕ್ರಮಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

ಹಿಂದಿ, ಮಲಿಯಾಳಂ, ತಮಿಳು, ಕನ್ನಡ, ಹೀಗೆ ಹಲವು ಭಾಷೆಗಳಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಿಂದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ  "ಭಾಗ್ಯವಿದಾತ" ಎಂಬ ಧಾರಾವಾಹಿಯಲ್ಲಿ ನಟಿಸುವ ಮೂಲಕ ಅನೇಕ ಕಾಮಿಡಿ ಶೋ ಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡಿದ್ದಾರೆ.

2011 ರಲ್ಲಿ ಬಿಡುಗಡೆಗೊಂಡ "ಗೋವಿಂದಾಯ ನಮಃ" ಚಿತ್ರದಲ್ಲಿ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಮೊದಲ  ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡರು. ಈ ಚಿತ್ರದ ನಂತರ ಅನೇಕ ಚಿತ್ರಗಳಲ್ಲಿ ಅಭಿನಹಿಸಲು ಇವರಿಗೆ ಅವಕಾಶಗಳು ಒದಗಿಬಂದವು.. ಬಚ್ಚನ್ , ಶಿವಾಜಿನಗರ ಹೀಗೆ ಹಲವು ಚಿತ್ರ ಗಳಲ್ಲಿ ಅಭಿನಹಿಸಿ ಕನ್ನಡ ಚಿತ್ರ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

ಇವರಿಗೆ ಲಭಿಸಿದ ಪ್ರಶಸ್ತಿಗಳು:-
* ಸುವರ್ಣ ಪ್ರಶಸ್ತಿ - 2013.
* ಅಂತರಾಷ್ಟ್ರೀಯ ದಕ್ಷಿಣ ಭಾರತ ಫಿಲ್ಮ್ ಪ್ರಶಸ್ತಿ - ಗೋವಿಂದಾಯ ನಮಃ - 2012.
* ಬೆಂಗಳೂರು ಟೈಮ್ಸ್ ಫಿಲ್ಮ್ ಪ್ರಶಸ್ತಿ - ಗೋವಿಂದಾಯ ನಮಃ - 2012.
* ಫಿಲ್ಮ್ ಫೇರ್ ಪ್ರಶಸ್ತಿ - ಅತ್ಯತ್ತಮ ಸಹಾಯ ಪಾತ್ರ - ಬಚ್ಚನ್ - 2013.
* ಅಂತರಾಷ್ಟ್ರೀಯ ದಕ್ಷಿಣ ಭಾರತ ಫಿಲ್ಮ್ ಪ್ರಶಸ್ತಿ - ಅತ್ಯತ್ತಮ ಸಹಾಯ ಪಾತ್ರ - ಬಚ್ಚನ್ - 2013.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada