twitter
    Celebs»Prema»Biography

    ಪ್ರೇಮಾ ಜೀವನಚರಿತ್ರೆ

    ಪ್ರೇಮಾ ಕನ್ನಡ ಮತ್ತು ತೆಲಗು ಚಿತ್ರರಂಗದಲ್ಲಿ ತಮ್ಮ ಅಭಿನಯದಿಂದ ಹೆಸರು ಮಾಡಿರುವ ಪ್ರಮುಖ ನಟಿ. ಸಾಕಷ್ಟು ಯಶಸ್ವಿ ಚಿತ್ರಗಳ ಮೂಲಕ ತಮ್ಮ ಅಭಿನಯ ಪ್ರೌಡಿಮೆ ಮೆರೆದಿರುವ ಪ್ರೇಮಾ ಕರ್ನಾಟಕದ ಕೊಡಗಿನಲ್ಲಿ ಜನಿಸಿದರು.

     

    1977 ಜನೇವರಿ 6 ರಂದು ಕೊಡಗಿನ ನೆರವಂಡ ಕುಟುಂಬದಲ್ಲಿ ಜನಿಸಿದರು. ಮೂರ್ನಾಡು ಜೂನಿಯರ್ ಕಾಲೇಜಿನಿಂದ ಪಿಯುಸಿ ಮುಗಿಸಿದ ಪ್ರೇಮಾ ಕಾಲೇಜು ದಿನಗಳಲ್ಲಿ ಕ್ರೀಡೆಗಳಲ್ಲಿ ಮುಂದಿದ್ದರು. ಎತ್ತರ ಜಿಗಿತ ಮತ್ತು ವಾಲಿಬಾಲ್ ಮುಂತಾದ ಕ್ರೀಡೆಗಳಲ್ಲಿ ರಾಷ್ಟ್ರಮಟ್ಟದವರೆಗೂ ಹೋಗಿದ್ದಾರೆ. ಇವರ ಸಹೋದರ ಅಯ್ಯಪ್ಪ ಕರ್ನಾಟಕ ರಣಜಿ ತಂಡದಲ್ಲಿ ಗುರುತಿಸಿಕೊಂಡಿದ್ದು ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ಭಾಗವಹಿಸಿದ್ದಾರೆ.

     

    1995 ರಲ್ಲಿ ಶಿವರಾಜಕುಮಾರ್ ರವರ `ಸವ್ಯಸಾಚಿ' ಮತ್ತು ರಾಘವೇಂದ್ರ ರಾಜಕುಮಾರ್ ರವರ `ಆಟ ಹುಡುಗಾಟ' ಚಿತ್ರದಿಂದ ಸಿನಿಪಯಣ ಆರಂಭಿಸಿದರು.ನಂತರ ಶಿವಣ್ಣರವರ `ಓಂ' ಚಿತ್ರದಲ್ಲಿನ ನಟನೆಗೆ ರಾಜ್ಯ ಪ್ರಶಸ್ತಿ ಪಡೆದರು. 1996 ರಲ್ಲಿ ತೆರೆಕಂಡ `ನಮ್ಮೂರ ಮಂದಾರ ಹೂವೇ' ಚಿತ್ರದಲ್ಲಿ ಅದ್ಭುತ ನಟನೆ ನೀಡಿದರು.

     

    ನಂತರ ತೆಲಗು ಮತ್ತು ಮಲಯಾಳಂ ಚಿತ್ರದಲ್ಲಿ ನಟಿಸಿ ಅಲ್ಲಿಯೂ ತಮ್ಮ ಅಭಿನಯ ಪ್ರತಿಭೆ ಸಾಬೀತು ಪಡಿಸಿದರು. `ನಾನು ನನ್ನ ಹೆಂಡ್ತೀರು', ಯಜಮಾನ' ,`ಕನಸುಗಾರ',`ಆಪ್ತಮಿತ್ರ' ಮುಂತಾದ ಹಿಟ್ ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ `ಸಿಂಗಾರೆವ್ವ' ಎಂಬ ಕಲಾತ್ಮಕ ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಸಾಹಸಸಿಂಹ ವಿಷ್ಣುವರ್ಧನ್ ಜೊತೆ ಸುಮಾರು ಏಳು ಚಿತ್ರಗಳಲ್ಲಿ ನಟಿಸಿದ್ದಾರೆ.

     

    2006 ರಲ್ಲಿ ಜೀವನ್ ಅಪ್ಪಚ್ಚು ಎಂಬುವವರನ್ನು ವಿವಾಹವಾದ ಪ್ರೇಮಾ ತಮ್ಮ ಸಿನಿಜೀವನಕ್ಕೆ ತಾತ್ಕಾಲಿಕ ವಿದಾಯ ಹೇಳಿದರು. ನಂತರ 2009 ರಲ್ಲಿ `ಶಿಶಿರ' ಎಂಬ ಚಿತ್ರದಲ್ಲಿ ನಟಿಸಿದರು. ಸುಮಾರು 70 ಕ್ಕೂ ಹೆಚ್ಚು ಕನ್ನಡ ಮತ್ತು 28 ತೆಲುಗು ಚಿತ್ರಗಳಲ್ಲಿ ನಟಿಸಿರುವ ಪ್ರೇಮಾ 2017 ರಲ್ಲಿ ಉಪೇಂದ್ರ ಮತ್ತೆ ಬಾ ಚಿತ್ರದಿಂದ ಮತ್ತೆ ಸಿನಿಪಯಣ ಆರಂಭಿಸಿದರು.

    2016 ರಲ್ಲಿ ತಮ್ಮ ಹತ್ತು ವರ್ಷದ ದಾಂಪತ್ಯಕ್ಕೆ ವಿದಾಯ ಹೇಳಿ ಪರಸ್ಪರ ಒಪ್ಪಿಗೆ ಮೇರೆಗೆ ಪ್ರೇಮಾ ದಂಪತಿ ಬೆಂಗಳೂರಿನ ಕೌಟಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದರು. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X