Celebs » Rachita Ram » Biography
ಜೀವನಚರಿತ್ರೆ

ಗುಳಿ ಕೆನ್ನೆ ಬೆಡಗಿ ರಚಿತಾ ರಾಮ್ ಇವರು ಜನಿಸಿದ್ದು ಅಕ್ಟೋಬರ್ 02, 1992 ರಲ್ಲಿ. ಇವರ ತಂದೆ ರಾಮ್ ಭರತ ನಾಟ್ಯ ನೃತ್ಯಗಾರರಾಗಿದ್ದು, ಈವರೆಗೆ ಸುಮಾರು 500 ಕಡೆಗಳಲ್ಲಿ ತಮ್ಮ ನೃತ್ಯ ಪ್ರದರ್ಶನ ಮಾಡಿ ಸೈ ಎನಿಸಿಕೊಂಡಿದ್ದಾರೆ.

ಇನ್ನೂ ಇವರ ಅಕ್ಕ ನಿತ್ಯ ರಾಮ್ ಕೂಡ ಕಿರುತೆರೆ ನಟಿಯಾಗಿದ್ದಾರೆ. ಇದರಿಂದ ರಚಿತಾ ರಾಮ್ ಕೂಡ ತಮ್ಮ ತಂದೆ ಮಾರ್ಗದರ್ಶನದಲ್ಲಿ ಭರತ ನಾಟ್ಯವನ್ನು ಮೈಗೂಡಿಸಿಕೊಂಡು ವಿವಿಧ ಕಾರ್ಯಕ್ರಮಗಳಲ್ಲಿ ತಮ್ಮ ನಾಟ್ಯವನ್ನು ಪ್ರದರ್ಶನ ಮಾಡುತ್ತಿದ್ದರು.

ಭರತ ನಾಟ್ಯ ನೃತ್ಯವನ್ನು ಮಾಡುವ ಹವ್ಯಾಸ ಬೆಳೆಸಿಕೊಂಡು ಬಂದ ಇವರು  2013 ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಅಭಿನಯದಲ್ಲಿ ತೆರೆಕಂಡಿರುವ "ಬುಲ್ ಬುಲ್" ಚಿತ್ರದಲ್ಲಿ ನಟಿಸುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟರು. ಈ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅಭೂತ ಪೂರ್ವ ಯಶಸ್ಸು ಕಂಡುಕೊಂಡಿದ್ದರಿಂದ ಇವರಿಗೆ ಒಳ್ಳೆ ಇಮೇಜ್ ತಂದುಕೊಟ್ಟಿತು.

ಹೀಗೆ ಮೊದಲ ಸಿನಿಮಾ ಯಶಸ್ವಿಯ ಖುಷಿಯಲ್ಲಿದ್ದ ಇವರಿಗೆ 2014 ರಲ್ಲಿ ಬಿಡುಗಡೆಗೊಂಡ "ಅಂಬರೀಶ" ಸಿನಿಮಾದಲ್ಲೂ ನಟಿಸುವ ಅವಕಾಶ ಇವರಿಗೆ ದೊರೆಯಿತು. ನಂತರ ಇವರು "ರನ್ನ, ರಥಾವರ" ಹೀಗೆ ಕೆಲ ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದಲ್ಲಿ ಸೈ ಎನಿಸಿಕೊಂಡಿದ್ದಾರೆ.

 

ರಚಿತಾ ರಾಮ್ ಅವರ ಸಿನಿಮಾಗಳು:-

ಬುಲ್ ಬುಲ್ ದಿಲ್ ರಂಗೀಲಾ

ರನ್ನ ಅಂಬರೀಶ

ರಥಾವರ ಚಕ್ರವ್ಯೂಹ

ಭರ್ಜರಿ ಜಗ್ಗುದಾದ

ಒಂದೂರಲ್ಲಿ ಒಬ್ಬ ರಾಜ

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada