twitter
    Celebs»Rajesh Krishnan»Biography

    ರಾಜೇಶ್ ಕೃಷ್ಣನ್ ಜೀವನಚರಿತ್ರೆ

    ರಾಜೇಶ್ ಕೃಷ್ಣನ್ ಅವರು ಜನಿಸಿದ್ದು 3 ಜೂನ್ 1973 ತಮಿಳುನಾಡಿನಲ್ಲಿ.  ತಂದೆ ರಂಗನಾಥನ್, ತಾಯಿ ಮೀರಾ ಕೃಷ್ಣನ್. ಇವರ ಬಾಲ್ಯ ವಿದ್ಯಾಬ್ಯಾಸವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

    ರಾಜೇಶ್ ಚಿಕ್ಕ ವಯಸಿನಲ್ಲೇ ತಾಯಿ ಬಳಿಯೇ ಇವರು ಸಂಗೀತವನ್ನು ಕಲಿತು ಇಂದು ಕನ್ನಡ ಚಿತ್ರರಂಗದಲ್ಲಿ ಖ್ಯಾತ ಗಾಯಕನಾಗಿ ಮಿಂಚುತ್ತಿದ್ದಾರೆ .1991 ರಲ್ಲಿ ಬಿಡುಗಡೆಗೊಂಡ ಗೌರಿ ಗಣೇಶ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ಹಿನ್ನಲೆ ಗಾಯಕರಾಗಿ ಹೊರ ಹೊಮ್ಮಿದರು.

    ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕರಾದ ಹಂಸಲೇಖ, ಮನೋಮೂರ್ತಿ, ಕಲ್ಯಾಣ್, ಹೀಗೆ ಹಲವಾರು ನಿರ್ದೇಶಕರ ಚಿತ್ರಗಳಲ್ಲಿ ತಮ್ಮ ಕಂಠಸಿರಿಯಿಂದ ಅಪಾರ ಗೀತೆಗಳಿಗೆ ಧ್ವನಿಯಾಗಿದ್ದಾರೆ.. ಇವರೆಗೂ 3000ಕ್ಕೂ ಹೆಚ್ಚು ಕನ್ನಡ, 500ಕ್ಕೂ ಹೆಚ್ಚು  ತೆಲುಗು, 250 ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ಹಿನ್ನಲೆ ಗಾಯಕರಾಗಿ ಹಾಡಿ ಸೈ ಅನಿಸಿಕೊಂಡಿದ್ದಾರೆ.

    ಅನೇಕ ಕಾರ್ಯಕ್ರಮಗಳಲ್ಲು ನಿರೂಪಕರಾಗಿ, ಕಾರ್ಯ ನಿರ್ವಹಿಸಿದ್ದಾರೆ. ಕನ್ನಡ ಚಿತ್ರದಲ್ಲೂ ಇವರು ತೆರೆಯ ಮೇಲೆ ಕಾಣಿಸಿಕೊಂಡಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X