twitter
    Celebs»S.Narayan»Biography

    ಎಸ್.ನಾರಾಯಣ್ ಜೀವನಚರಿತ್ರೆ

    ಎಸ್. ನಾರಾಯಣ್ ಕನ್ನಡ ಚಿತ್ರರಂಗದ, ನಿರ್ದೇಶಕ, ನಿರ್ಮಾಪಕ, ನಟ ಹಾಗೂ ಚಿತ್ರ ಸಾಹಿತಿ. ಇವರು ಜನಿಸಿದ್ದು 05 ಜೂನ್ 1962 ರಲ್ಲಿ. ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡ ಚಿತ್ರರಂಗದಲ್ಲಿ ಗಣನೀಯ ಸಾಧನೆ ಮಾಡಿದವರು ನಿರ್ದೇಶಕ, ನಟ, ನಿರ್ಮಾಪಕ, ಚಿತ್ರ ಸಾಹಿತಿ ಹೀಗೆ ಬಹುಮುಖೀ ಪ್ರತಿಭೆ ಎಸ್. ನಾರಾಯಣ್  1981ರ ವರ್ಷದಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದು ಅಂದು ಜನಪ್ರಿಯ ನಿರ್ದೇಶಕರಾಗಿದ್ದ ಭಾರ್ಗವ, ಎ.ಟಿ. ರಘು, ರಾಜ್‌ಕಿಶೋರ್ ಮುಂತಾದವರ ಬಳಿ ಸಹಾಯಕರಾಗಿ ಸೇರಿಕೊಂಡರು.

    ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ`, ವಿಷ್ಣುವರ್ಧನ್ ಅಭಿನಯದ `ವೀರಪ್ಪನಾಯಕ`, ಹೊಸತನದದಿಂದ ಭಾರೀ ಯಶಸ್ಸುಗಳಿಸಿದ `ಚೈತ್ರದ ಪ್ರೇಮಾಂಜಲಿ`, ‘ಚಂದ್ರ ಚಕೋರಿ’ ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೊಂದು ಹೊಸ ಆಯಾಮ ಸೃಷ್ಟಿಸಿದ ಖ್ಯಾತಿ ನಾರಾಯಣ್‌ ಅವರದು. ರಾಜೇಂದ್ರ ಸಿಂಗ್ ಬಾಬು `ಕುರಿಗಳು ಸಾರ್ ಕುರಿಗಳು` ನಿರ್ಮಿಸಿದಾಗ ಹಾಸ್ಯ ನಟರಾಗಿ ನಟನಾ ಪ್ರತಿಭೆ ಪ್ರದರ್ಶಿಸಿ, ಸತತವಾಗಿ `ಸಾರ್ ಸರಣಿ ನಿರ್ಮಾಣಕ್ಕೆ ರಾಜೇಂದ್ರ ಸಿಂಗ್ ಬಾಬು ಅವರಿಗೆ ಪ್ರೇರಣೆ ನೀಡಿದ್ದಾರೆ ನಾರಾಯಣ್.

    ಸಿನಿಮಾ ಸೇರಬೇಕೆಂದು ನಾರಾಯಣ್ 1981ರಲ್ಲಿ ಬೆಂಗಳೂರಿಗೆ ಬಂದಾಗ ಹರಕಲು ಶರಟು, ಒಂದು ರೂಪಾಯಿ ಇತ್ತಂತೆ. ಮೊದಲ ಚಿತ್ರ `ಚೈತ್ರದ ಪ್ರೇಮಾಂಜಲಿ` ಮಾಡಿದಾಗ ಹಂಸಲೇಖ ಜೊತೆಯಲ್ಲಿದ್ದರು. ಎಲ್ಲರ ಮನದಲ್ಲಿ ಉಳಿದಿದ್ದ ಹಾಡುಗಳು ಚಿತ್ರಕ್ಕೂ, ನಿರ್ದೇಶಕ ನಾರಾಯಣ್ ಅವರಿಗೂ ಜನಮನ್ನಣೆ ತಂದುಕೊಟ್ಟಿತು. ಮೊದಲನೆ ಚಿತ್ರದಲ್ಲೇ ನಾರಾಯಣ್‌ ಅವರಿಗೆ ಯಶಸ್ಸು ಕೂಡಿಬಂತು. ನಂತರ ಅವರದು ನೇರ ಹಾದಿ. ಈ ಹಾದಿಯಲ್ಲಿ ಸೋಲು, ಗೆಲುವು ಸಮಸಮನಾಗಿದೆ. ಇದುವರೆವಿಗೂ ಅವರು ಸುಮಾರು 45 ಚಿತ್ರಗಳನ್ನು ನಿರ್ದೇಶಿಸಿದ್ದು ಸುಮಾರು ಇಪ್ಪತ್ತು ಚಿತ್ರಗಳನ್ನು ನಿರ್ಮಿಸಿದ್ದಾರೆ.

    ಅನುರಾಗದ ಅಲೆಗಳು`, `ಕ್ಯಾಪ್ಟನ್`, `ಮೇಘಮಾಲೆ` ಹೀಗೆ ತಮ್ಮ ಹಲವಾರು ಚಿತ್ರಗಳು ಸತತವಾಗಿ ಸೋಲನ್ನು ಕಂಡಾಗ ಕೂಡ ನಾರಾಯಣ್ ಧೃತಿಗೆಡಲಿಲ್ಲ. ಒಂದೆರೆಡು ವರ್ಷ ಮೌನವಾಗಿದ್ದು ಮತ್ತೆ ಸ್ವಂತ ನಿರ್ಮಾಣ ಆರಂಭಿಸಿದರು. ಕಡಿಮೆ ವೆಚ್ಚದಲ್ಲಿ `ನಿಘಾತ` ಪತ್ತೆದಾರಿ ಚಿತ್ರ ಮಾಡಿದರು. ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. `ಭಾಮಾ, ಸತ್ಯಭಾಮಾ`, `ನನ್ನವಳು ನನ್ನವಳು`, `ಅಂಜಲಿ ಗೀತಾಂಜಲಿ` ಮೂಲಕ ಹೀರೋ ಆದರು. ರಾಜ್‌ಕುಮಾರ್ ಅವರ ಅಭಿನಯದ  ಚಿತ್ರ `ಶಬ್ದವೇದಿ`, ವಿಷ್ಣುವರ್ಧನ್ ಅಭಿನಯದ `ವೀರಪ್ಪನಾಯಕ`, `ಸೂರ್ಯವಂಶ`, ಸಿಂಹಾದ್ರಿಯ ಸಿಂಹ, ಶಿವರಾಜ್‌ಕುಮಾರ್ ಜತೆ `ಗಲಾಟೆ ಅಳಿಯಂದ್ರು..`, ಹೊಸ ನಟ ಮುರಳಿಯ ‘ಚಂದ್ರ ಚಕೋರಿ’, ಪುನೀತ್ ರಾಜ್ ಕುಮಾರ್ ನಟಿಸಿದ ‘ಮೌರ್ಯ’ ಹೀಗೆ   ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕಂಡಿದ್ದಾರೆ.     

    ಕಿರುತೆರೆಯಲ್ಲಿ:
    ಇವರು ಕೇವಲ ಸಿನಿಮಾಗಳಲ್ಲಿ ಮಾತ್ರ ನಟಿಸದೆ ಟಿವಿ ಕಿರುತೆರೆಯಲ್ಲೂ  ನಟಿಸಿ ಸೈ ಎನಿಸಿಕೊಂಡಿದ್ದಾರೆ.  ಸುಮತಿ, ಭಾಗೀರತಿ, ಅಂಬಿಕಾ, ದುರ್ಗ, ಪಾರ್ವತಿ, ಚಂದ್ರಿಕಾ, ಸೂರ್ಯವಂಶ, ವೈಶಾಲಿ, ಮುಂತಾದ ಧಾರವಾಹಿಗಳಲ್ಲಿ ನಟಿಸುವುದರ ಜೊತೆಗೆ ಕೆಲ ಧಾರಾವಾಯಿಗಳನ್ನು ನಿರ್ದೇಶನ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X