ಸಂತೋಷ್ ಆನಂದರಾಮ್
ಸಂತೋಷ್ ಆನಂದರಾಮ್ ಜೀವನಚರಿತ್ರೆ
ಸಂತೋಷ್ ಆನಂದರಾಮ್ ಕನ್ನಡ ಚಿತ್ರರಂಗದ ಸ್ಟಾರ್ ನಿರ್ದೇಶಕ. ಉಡುಪಿಯ ಕೋಟಾ ಮೂಲದವರಾದ ಇವರು ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿಯೆ. ಇನ್ಫೋಸಿಸ್ ನಲ್ಲಿ ಸುಮಾರು ಒಂದು ವರ್ಷ ಕೆಲಸ ಮಾಡಿದ ಇವರು ನಂತರ ಚಿತ್ರರಂಗದ ಕಡೆಗಿನ ಅಭಿರುಚಿಯಿಂದ ಉದ್ಯೋಗ ತೊರೆದು ಚಿತ್ರಸಾಹಿತಿಯಾಗಿ ಕನ್ನಡ ಚಿತ್ರರಂಗ ಪ್ರವೇಶಿದರು. ಇವರು ಮೊದಲು ಸಾಹಿತ್ಯ ಬರೆದಿದ್ದು ರಾಕಿಂಗ್ ಸ್ಟಾರ್ ಯಶ್ ಚಿತ್ರ `ರಾಕಿ'ಗೆ. ನಂತರ 2014 ರಲ್ಲಿ ಯಶ್ ಅಭಿನಯದ `Mr & Mrs ರಾಮಾಚಾರಿ' ಚಿತ್ರದ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದರು. ಈ ಚಿತ್ರ 50 ಕೋಟಿಗೂ ಅಧಿಕ ಗಳಿಕೆ ಕಂಡು ಶತದಿನೋತ್ಸವ ಆಚರಿಸಿತು. ನಂತರ ಪವರ್ ಸ್ಟಾರ್ ಪುನೀತ್ ರಾಜಕುಮಾರ ಅಭಿನಯದ `ರಾಜಕುಮಾರ' ಚಿತ್ರವನ್ನು ನಿರ್ದೇಶಿಸಿದರು. ಈ ಚಿತ್ರವೂ ಕನ್ನಡ ಚಿತ್ರರಂಗದ ಹಿಂದಿನ ಎಲ್ಲಾ ದಾಖಲೆಗಳನ್ನು ಅಳಿಸಿ ಶತದಿನೋತ್ಸವ ಆಚರಿಸಿತು. ಕನ್ನಡ ಚಿತ್ರರಂಗದಲ್ಲಿ 75 ಕೋಟಿಗೂ ಹೆಚ್ಚು ಗಳಿಕೆ ಕಂಡ ಮೊದಲ ಮತ್ತು ಏಕೈಕ ಚಿತ್ರವಿದು.
ಸಂಬಂಧಿತ ಸುದ್ದಿ