Celebs » Sharat Lohitashwa » Biography
ಜೀವನಚರಿತ್ರೆ
ಶರತ್ ಲೋಹಿತಾಶ್ವ ಇವರು ಜನಿಸಿದ್ದು ತುಮಕುರು ಜಿಲ್ಲೆಯಲ್ಲಿ. ಇವರು ವಿದ್ಯಾಬ್ಯಾಸವನ್ನು ಬೆಂಗಳೂರಿನಲ್ಲಿ ಪೂರ್ಣಗೊಳಿಸಿದ್ದಾರೆ. ಮೊದಲು ಇವರು  ಡಿಡಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಚಿದಾಂಬರ ರಹಸ್ಯ" ಎಂಬ  ಕಿರುತೆರೆಯಲ್ಲಿ ನಟಿಸಿದ್ದಾರೆ.

ನಂತರ ಇವರು ಕನ್ನಡ ಸಿನಿಮಾರಂಗಕ್ಕೆ ಪ್ರವೇಶ ಮಾಡಿ ಸಂಜು ವೆಡ್ಸ್ ಗೀತಾ, ಭೀಮ ತೀರದಲ್ಲಿ, ಸಾರಥಿ, ಕಡ್ಡಿಪುಡಿ ಸೇರಿದಂತೆ ಇನ್ನು ಹಲವು ಕನ್ನಡ ಸಿನಿಮಾಗಳಲ್ಲಿ  ಖಳನಾಯಕ ಪಾತ್ರದಲ್ಲಿ ಸೇರಿದಂತೆ  ಸಹಾಯಕ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಇವರು ಹೆಚ್ಚಾಗಿ ಕನ್ನಡ ಚಿತ್ರಗಳಲ್ಲಿ ಸಹಾಯಕ ಪಾತ್ರಗಳನ್ನು ಕಾಣಿಸಿಕೊಂಡಿದ್ದಾರೆ. ಕೇವಲ ಪಾತ್ರ ಮಾಡುವುದು ಅಷ್ಟೇ ಅಲ್ಲದೆ ಇವರು ಉತ್ತಮ ಗಾಯಕರು ಕೂಡ ಆಗಿದ್ದಾರೆ. ಇವರು ಕೆಲ ಚಿತ್ರಗಳ ಹಾಡುಗಳಿಗೆ ತಮ್ಮ ದ್ವನಿಯನ್ನು ನೀಡಿದ್ದಾರೆ.

ಶರತ್ ಲೋಹಿತಾಶ್ವ ಅವರಿಗೆ ಲಭಿಸಿದ ಪ್ರಶಸ್ತಿಗಳು:
 * ಕರ್ನಾಟಕ ರಾಜ್ಯ ಪ್ರಶಸ್ತಿ - ಉತ್ತಮ ಸಹಾಯ ಪಾತ್ರ - 2013.
* ಉದಯ ಸನ್ ಫಿಸ್ಟ್ ಪ್ರಶಸ್ತಿ - ಉತ್ತಮ ಖಳನಾಯಕ - ಆ ದಿನಗಳು (2008).
* ಏರ್ ಟೆಲ್ ಕಸ್ತೂರಿ ಪ್ರಶಸ್ತಿ - ಉತ್ತಮ ಖಳನಾಯಕ - ಆ ದಿನಗಳು (2008).
* ಮೈಸೂರು ಮಿನಿರಲ್ಸ್ ಪ್ರಶಸ್ತಿ - ಉತ್ತಮ ಸಹಾಯ ಪಾತ್ರ - ಆ ದಿನಗಳು (2008).
* ಫಿಲ್ಮ್ ಫೇರ್ ಪ್ರಶಸ್ತಿ - ಉತ್ತಮ ಸಹಾಯ ಪಾತ್ರ - ಆ ದಿನಗಳು (2008).
*  ಫಿಲ್ಮ್ ಫೇರ್ ಪ್ರಶಸ್ತಿ - ಉತ್ತಮ ಸಹಾಯ ಪಾತ್ರ - ಕಡ್ಡಿಪುಡಿ ( 2014).
* ಅಂತರಾಷ್ಟ್ರೀಯ ದಕ್ಷಿಣ ಭಾರತ ಸಿನಿಮಾ ಪ್ರಶಸ್ತಿ - Best Actor in a Negative Role - ಭೀಮ ತೀರದಲಿ(2012).
* ಅಂತರಾಷ್ಟ್ರೀಯ ದಕ್ಷಿಣ ಭಾರತ ಸಿನಿಮಾ ಪ್ರಶಸ್ತಿ - Best Actor in a Negative Role - ಅಂಬರೀಶ (2014).
* ಬೆಂಗಳೂರು ಟೈಮ್ಸ್ ಫಿಲ್ಮ್ ಪ್ರಶಸ್ತಿ - Best Actor in a Negative Role - ಭೀಮ ತೀರದಲಿ(2012).
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada