twitter
    Celebs»Sharmila Mandre»Biography

    ಶರ್ಮಿಳಾ ಮಾಂಡ್ರೆ ಜೀವನಚರಿತ್ರೆ

    ಶರ್ಮಿಳಾ ಮಾಂಡ್ರೆ ಕನ್ನಡ ಚಿತ್ರರಂಗದ ಪ್ರಮುಖ ನಾಯಕಟಿ ಮತ್ತು ನಿರ್ಮಾಪಕಿ. ಇವರು 1989ರ ಅಕ್ಟೋಬರ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ತಂದೆ ದಯಾನಂದ್ ಉದ್ಯಮಿ ಹಾಗೂ ಕಾರು ರೇಸರ್. ಶರ್ಮಿಳಾ ಬೆಂಗಳೂರಿನ ಸೋಫಿಯಾ ಪ್ರೌಢಶಿಕ್ಷಣ ಮುಗಿಸಿದ್ದಾರೆ. ಇವರ ಅಜ್ಜಿ ರಮಾನಂದ ಮಾಂಡ್ರೆ ನಿರ್ಮಾಪಕ, ವಿತರಗಿ ಹಾಗೂ ಬೆಂಗಳೂರಿನ ಸಂಗಮ್ ಚಿತ್ರಮಂದಿರದ ಸಂಸ್ಥಾಪಕಿ. 


    ಸಿನಿಜೀವನ 

    ಶರ್ಮಿಳಾ ಮಾಂಡ್ರೆ 2007ರಲ್ಲಿ ತೆರೆಕಂಡ ಸಜನಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರವನ್ನು ಅವರ ಚಿಕ್ಕಮ್ಮ ಸುನಂದಾ ಮುರಳಿ ಮನೋಹರ್ ನಿರ್ಮಿಸಿದ್ದರು. ನಂತರ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡರು. ಈ ಚಿತ್ರ ಅವರ ಸಿನಿಬದುಕಿಗೆ ತಿರುವು ನೀಡಿತು. ನಂತರ ಈ ಬಂಧನ, ನವಗ್ರಹ, ಮಸ್ತ ಮಜಾ ಮಾಡಿ, ಶಿವಮಣಿ, ವೆಂಕಟ ಇನ್ ಸಂಕಟ, ಗಾಳಿಪಟ ೨, ಕರಿ ಚಿರತೆ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು ಚಿತ್ರರಂಗದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. 


    ಸಿನಿಮಾ ನಿರ್ಮಾಣ

    ಶರ್ಮಿಳಾ ಮಾಂಡ್ರೆ ತಮ್ಮ ಅಜ್ಜಿಯಂತೆಯೇ ಸಿನಿಮಾ ನಿರ್ಮಾಣಕ್ಕೆ ಸಹ ಇಳಿದಿದ್ದಾರೆ. ಈಗಾಗಲೇ ಮೂರು ತಮಿಳು ಚಿತ್ರಗಳನ್ನು ನಿರ್ಮಿಸಿರುವ ಇವರು, ಸದ್ಯ ಕನ್ನಡದ ದಸರಾ ಸಿನಿಮಾವನ್ನು ನಿರ್ಮಿಸುವುದರ ಜೊತೆಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. 


     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X