twitter
    Celebs»Shreya Ghoshal»Biography

    ಶ್ರೇಯಾ ಘೋಷಾಲ್ ಜೀವನಚರಿತ್ರೆ

    ಶ್ರೇಯಾ ಘೋಷಾಲ್ ಭಾರತ ಚಿತ್ರರಂಗದ ಪ್ರಖ್ಯಾತ ಹಿನ್ನಲೆ ಗಾಯಕಿ. ಭಾರತದ ಹಲವು ಭಾಷೆಗಳಲ್ಲಿ ನೂರಾರು ಮಧುರ ಗೀತೆಗಳಿಗೆ ಧ್ವನಿಯಾಗಿರುವ ಶ್ರೇಯಾ ನಾಲ್ಕು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ್ದಿದ್ದಾರೆ.

    1984 ರಲ್ಲಿ ಪಶ್ಚಿಮ ಬಂಗಾಳದ ಬಹರಾಮ್‌ಪುರದಲ್ಲಿ ಬಂಗಾಳಿ ಕುಟುಂಬದಲ್ಲಿ ಜನಿಸಿದರು. ಆದರೆ ಇವರು ಬೆಳೆದಿದ್ದೆಲ್ಲ ರಾಜಸ್ಥಾನದಲ್ಲಿ.ಕೇವಲ ನಾಲ್ಕು ವರ್ಷದವರಿದ್ದಾಗಿನಿಂದಲೇ ಶ್ರೇಯಾ ತನ್ನ ತಾಯಿ ಜೊತೆ ಹಾರ್ಮೋನಿಯಂ ಸಾಥ್ ಕೊಡಲು ಹೋಗುತ್ತಿದ್ದರು.

    ನಂತರ ಕೋಟಾದ ಪ್ರಸಿದ್ಢ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತಗಾರ ಮಹೇಶ್ಚಂದ್ರ ಶರ್ಮಾರ ಬಳಿ ಶ್ರೇಯಾ ಸಂಗೀತ ಅಭ್ಯಾಸ ಆರಂಭವಾಯಿತು.ಬಾಲ್ಯದ ವಿಧ್ಯಾಭ್ಯಾಸವನ್ನು ಕೋಟಾದ `ಅಟೋಮಿಕ್ ಎನರ್ಜಿ ಸೆಂಟ್ರಲ್' ಶಾಲೆಯಲ್ಲಿ ಮುಗಿಸಿದ ಶ್ರೇಯಾ ಮುಂಬೈನ SEIS ಕಾಲೇಜಿನಿಂದ ಪದವಿ ಪಡೆದರು.

    ಬಾಲಕಿಯಾಗಿದ್ದಾಗಲೇ ಜೀ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ `ಸರಿಗಮಪ' ಮಕ್ಕಳ ಆವೃತ್ತಿಯಲ್ಲಿ ವಿಜೇತರಾದರು. ಖ್ಯಾತ ಗಾಯಕ ಸೋನು ನಿಗಮ್ ಈ ಶೋ ನಿರೂಪಿಸುತ್ತಿದ್ದರು. ಈ ಕಾರ್ಯಕ್ರಮದ ತೀರ್ಪುಗಾರರಾಗಿದ್ದ ಸಂಗೀತ ನಿರ್ದೇಶಕ ಕಲ್ಯಾಂಜಿ ಶ್ರೇಯಾ ತಂದೆ- ತಾಯಿಗಳಿಗೆ ಮುಂಬೈಗೆ ಬಂದು ನೆಲಸಲು ಕೇಳಿಕೊಂಡರು.ಮುಂಬೈಯಲ್ಲಿ ಸುಮಾರು 18 ತಿಂಗಳ ಕಾಲ ಕಲ್ಯಾಂಜಿಯವರು ಶ್ರೇಯಾರಿಗೆ ತರಬೇತಿ ನೀಡಿದರು.


    2000 ದಲ್ಲಿ ಸಂಜಯ ಲೀಲಾ ಬನ್ಸಾಲಿಯವರ ಚಿತ್ರ `ದೇವದಾಸ್' ಮೂಲಕ ಚಿತ್ರಗಳಲ್ಲಿ ಹಿನ್ನಲೆ ಗಾಯಕಿಯಾಗಿ ಸಂಗೀತ ಪಯಣ ಆರಂಭಿಸಿದರು.ನಂತರ ಬಾಲಿವುಡ್ ಮಾತ್ರವಲ್ಲದೇ ಕನ್ನಡ,ತಮಿಳು,ತೆಲುಗು,ಮಲಯಾಳಂ,ಬಂಗಾಳಿ,ಮರಾಠಿ, ಭೋಜಪುರಿ ಮುಂತಾದ ಭಾಷೆಗಳಲ್ಲಿ ಹಾಡಿದ್ದಾರೆ.

    2003 ರಲ್ಲಿ ತೆರೆಕಂಡ ಪ್ಯಾರಿಸ್ ಪ್ರಣಯ ಚಿತ್ರದ ಮೂಲಕ ಕನ್ನಡದಲ್ಲಿ ಹಿನ್ನಲೆ ಗಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆದರೆ ಕನ್ನಡದಲ್ಲಿ ಇವರ ಗಾಯನದ ಪರಿಪೂರ್ಣ ಮಧುರತೆ ಪರಿಚಯವಾಗಿದ್ದು `ಮುಂಗಾರು ಮಳೆ' ಚಿತ್ರದ ಗೀತೆಗಳ ಮೂಲಕ. ಅಲ್ಲಿಂದ ಹಲವಾರು ಜಯಂತ್ ಕಾಯ್ಕಿಣಿಯವರ ಗೀತೆಗಳಿಗೆ ಸೋನು-ಶ್ರೇಯಾ ಜೋಡಿ ಧ್ವನಿ ನೀಡಿದೆ.

     

    ವಿಶ್ವಾದ್ಯಂತ ಹಲವಾರು ಸಂಗೀತ ಕಾರ್ಯಕ್ರಮಗಳನ್ನು ನೀಡಿರುವ ಶ್ರೇಯಾ ಕೆಲವು ರಿಯಾಲಿಟಿ ಶೋಗಳ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ್ದಾರೆ.2010 ರಲ್ಲಿ ಅಮೇರಿಕಾದ ಓಹಿಯೋ ರಾಜ್ಯದಲ್ಲಿ ಶ್ರೇಯಾ ಸಂಗೀತ ಕಾರ್ಯಕ್ರಮವಿದ್ದಾಗ ಆ ದಿನವನ್ನು ಅಲ್ಲಿನ ಗವರ್ನರ್ ಆ ದಿನವನ್ನು `ಶ್ರೇಯಾ ಘೋಷಾಲ್ ಡೇ' ಎಂದು ಘೋಷಿಸಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X