ಶುಭ ಪೂಂಜಾ ಜೀವನಚರಿತ್ರೆ

    ಶುಭಾ ಪೂಂಜಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್.ಮಂಗಳೂರಿನ ತುಳುವ ಕುಟುಂಬದಲ್ಲಿ ಜನಿಸಿದ ಶುಭಾ ಬೆಳೆದಿದ್ದು ಬೆಂಗಳೂರಿನಲ್ಲಿ. ಜಯನಗರದ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಶಿಕ್ಷಣ ಪಡೆದ ಇವರು ಮಾಡೆಲಿಂಗ್ ಮಾಡತೊಡಗಿದರು. ನಂತರ ಹಲವು ಟಿವಿ ಜಾಹೀರಾತುಗಳಲ್ಲಿ ಕಾಣಿಸಿಕೊಂಡರು. 2003 ರಲ್ಲಿ `ಮಿಸ್ ಚೆನ್ನೈ ಟಾಪ್ ಮಾಡೆಲ್' ಟೈಟಲ್ ಗೆ ಭಾಜನರಾದರು. ಇದೇ ಕಾರಣದಿಂದ 2004 ರಲ್ಲಿ ತೆರೆಕಂಡ `ಮಚಿ' ಚಿತ್ರದಿಂದ ತಮಿಳು ಚಿತ್ರರಂಗ ಪ್ರವೇಶಿಸಿದರು.

    2006 ರಲ್ಲಿ ತೆರೆಕಂಡ ಜಾಕಪಾಟ್ ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದರು. ನಂತರ ತೆರೆಕಂಡ ಚಂಡ, ಮೊಗ್ಗಿನ ಮನಸ್ಸು ಚಿತ್ರಗಳ ಖ್ಯಾತಿ ತಂದು ಕೊಟ್ಟವು. ನಂತರ ಸ್ಲಮ್ ಬಾಲ, ಕಂಠೀರವ, ಜೈ ಮಾರುತಿ 800 ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.ಶುಭಾ ಪೂಂಜಾ ಮಂಗಳೂರು ಮೂಲದ ಉದ್ಯಮಿ ಸುಮಂತ್ ಮಹಾಬಲ ಎನ್ನುವವರನ್ನು ವರಿಸಲಿದ್ದಾರೆ. ಒಂದು ವರ್ಷದ ಪ್ರೀತಿಯ ನಂತರ ಕುಟುಂಬದ ಸಮ್ಮತಿಯೊಂದಿಗೆ ಸಪ್ತಪದಿ ತುಳಿಯಲಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X