Celebs » Sri Murali » Biography
ಜೀವನಚರಿತ್ರೆ

ಶ್ರೀ ಮುರುಳಿ ಇವರು ಜನಿಸಿದ್ದು ಡಿಸೆಂಬರ್ 07, 1981 ಬೆಂಗಳೂರಿನಲ್ಲಿ. ತಂದೆ ಚಿನ್ನೇಗೌಡ. ಇವರು ಚಿತ್ರರಂಗದಲ್ಲಿ ನಿರ್ಮಾಪಕರಾಗಿ ಗುರುತಿಸಿಕೊಂಡಿದ್ದರು. ಇವರ ಅಣ್ಣ ವಿಜಯ ರಾಘವೇಂದ್ರ.

ಮುರುಳಿ ಇವರು 2003 ರಲ್ಲಿ ಬಿಡುಗಡೆಗೊಂಡ "ಚಂದ್ರ ಚಕೋರಿ" ಚಿತ್ರದ ಮೂಲಕ ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದಾರೆ. ನಂತರ "ಕಂಠಿ" ಚಿತ್ರ ಇವರಿಗೆ ಅದ್ಭುತ ಯಶಸ್ಸು ತಂದುಕೊಟ್ಟಿತು. ಹಾಗು ಈ ಚಿತ್ರದಿಂದ ಇವರಿಗೆ ಉತ್ತಮ ನಾಯಕ ಎಂಬ ಪ್ರಶಸ್ತಿಯು ಸಹ ಲಭಿಸಿತು.

ಹೀಗೆ ಕನ್ನಡ ಸಿನಿಮಾ ಸೇರಿದಂತೆ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.