twitter
    Celebs»Sunil Rao»Biography

    ಸುನಿಲ್ ರಾವ್ ಜೀವನಚರಿತ್ರೆ

    ಸುನಿಲ್ ರಾವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ, ಗಾಯಕ ಮತ್ತು ಗೀತಸಾಹಿತಿ. ಬಾಲನಟನಾಗಿ ಕನ್ನಡ ಚಿತ್ರರಂಗ ಪ್ರವೇಶಿಸಿ ನಂತರ ಕೆಲವು ಕಿರುತೆರೆ ಕಾರ್ಯಕ್ರಮಗಳ ಮೂಲಕ ಸಿನಿರಂಗ ಪ್ರವೇಶಿಸಿದರು.

     

    ಖ್ಯಾತ ಹಿನ್ನಲೆ ಗಾಯಕಿ ಮತ್ತು ಸುಗಮ ಸಂಗೀತಗಾರ್ತಿ ಬಿ ಕೆ ಸುಮಿತ್ರಾ ರವರ ಪುತ್ರ. ಇವರ ಸಹೋದರಿ ಸೌಮ್ಯ ರಾವ್ ಕೂಡ ಹಿನ್ನಲೆ ಗಾಯಕಿಯಾಗಿ ಸಕ್ರಿಯವಾಗಿದ್ದಾರೆ. ಜಯನಗರದ ನ್ಯಾಷನಲ್ ಕಾಲೇಜಿನ ವಿಧ್ಯಾಭ್ಯಾಸ ಮುಗಿಸಿದ ಇವರು ಗಾಯಕರಾಗಲು ಚಿತ್ರರಂಗ ಪ್ರವೇಶಿಸಿದರು.

     

    ಬಾಲನಟನಾಗಿ `ಕೆಂಡದ ಮಳೆ' ಮತ್ತು `ಏಳು ಸುತ್ತಿನ ಕೋಟೆ' ಮುಂತಾದ ಚಿತ್ರಗಳಲ್ಲಿ ನಟಿಸಿದ ಇವರು 2003 ರಲ್ಲಿ ಬಾಲಿವುಡ್ ಚಿತ್ರ `ಫ್ರೀಕಿ ಚಕ್ರ' ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದರು. ನಂತರ ಕನ್ನಡದಲ್ಲಿ `ಪ್ರೀತಿ ಪ್ರೇಮ ಪ್ರಣಯ', ಎಕ್ಸ್‌ಕ್ಯೂಸ್ ಮಿ',`ಚಪ್ಪಾಳೆ', `ಮಸಾಲಾ' ಮುಂತಾದ ಚಿತ್ರಗಳಲ್ಲಿ ನಟಿಸಿದರು.

     

    2011 ರಲ್ಲಿ ರೂಪಕಲಾ ಬೆಳ್ಳಿ ಕಣ್ಮಣಿ ಪ್ರಶಸ್ತಿ ಪಡೆದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X