twitter
    Celebs»TN Seetharam»Biography

    ಟಿ.ಎನ್. ಸೀತರಾಮ್ ಜೀವನಚರಿತ್ರೆ

    ಟಿ.ಎನ್.ಸೀತಾರಾಮ್ ಎಂದೇ ಕರೆಯಲ್ಪಡುವ ತಲಗಾವರ ನಾರಾಯಣರಾವ್ ಸೀತಾರಮ್ ರವರು ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕದಲ್ಲಿ ಸಕ್ರಿಯವಾಗಿರುವ ಖ್ಯಾತ ನಿರ್ದೇಶಕ, ನಟ, ನಿರ್ಮಾಪಕ ಮತ್ತು ಸಾಹಿತಿ. ರಂಗಭೂಮಿಯಲ್ಲೂ ಹಲವು ನಾಟಕಗಳನ್ನು ನಿರ್ಮಾಣ ಮಾಡಿದ್ದಾರೆ.

    ಬಾಲ್ಯ - ಶಿಕ್ಷಣ

    1948 ಡಿಸೆಂಬರ್ 6 ರಂದು ದೊಡ್ಡಬಳ್ಳಾಪುರ ಹತ್ತಿರದ ತಲಗಾವರ ಹಳ್ಳಿಯಲ್ಲಿ ಜನಿಸಿದರು. ತಂದೆ ನಾರಾಯಣರಾವ್ ಮತ್ತು ತಾಯಿ ಸುಂದರಮ್ಮ. ಹೈಸ್ಕೂಲ್ ವರೆಗೆ ದೊಡ್ಡಬಳ್ಳಾಪುರದಲ್ಲಿ ಶಿಕ್ಷಣ ಮುಗಿಸಿ, ಪಿಯುಸಿಗೆ ಬೆಂಗಳೂರಿನ ನ್ಯಾಷನಲ್ ಕಾಲೇಜಿ ಸೇರಿದರು. ಬಿ.ಎಸ್.ಸಿ ಮುಗಿಸಿ ಲಾ ಪದವಿ ಕೂಡ ಪಡೆದರು.

    ರಂಗಭೂಮಿ

    ಶಿಕ್ಷಣ ಮುಗಿದ ನಂತರ ನಾಟಕ ರಂಗದಲ್ಲಿ ಸಾಹಿತ್ಯ ಕೃಷಿ ಮಾಡತೊಡಗಿದರು. ಪಿ.ಲಂಕೇಶ್ ಮತ್ತು ಯು.ಆರ್.ಅನಂತಮೂರ್ತಿಯವರ ಪ್ರಬಾವಳಿಯಿಂದ ಸಾಹಿತ್ಯದಲ್ಲಿ ಮತ್ತು ರಂಗಭೂಮಿಯಲ್ಲಿ ಇನ್ನಷ್ಟು ತೊಡಗಿಸಿಕೊಂಡರು. ತಂದೆ ಊರಿನಲ್ಲಿ ಕೃಷಿ ನೋಡಿಕೊಂಡು ಲಾಯರ್ ವೃತ್ತಿಯನ್ನು ಮಾಡು ಎಂದು ಸಲಹೆ ನೀಡಿದಾಗ, `ಹೊಲ ಹೊಂದುವುದು ಪಾಪ" ವೆಂಬ ಆದರ್ಶದ ಅಡಿಯಲ್ಲಿ ನಿರಾಕರಿಸಿದರು. ಇದರಿಂದ ನಿರಾಸೆಗೊಂಡ ಸೀತಾರಾಮ್ ತಂದೆಯವರು ಮೆಡಿಸಿನ್ ಸೇವಿಸುವುದನ್ನು ನಿಲ್ಲಿಸಿ ಕೆಲವೇ ದಿನಗಳಲ್ಲಿ ನಿಧನರಾದರು. ತಂದೆಯ ನಿಧನದ ಅಪರಾಧ ಪ್ರಜ್ಞೆ ಸೀತಾರಮ್ ರವರಿಗೆ ಕಾಡಿದ್ದುಂಟು. ತಾವು ರಚಿಸಿದ ಹಲವು ನಾಟಕಗಳನ್ನು ತಮ್ಮ ತಂದೆಗೆ ಅರ್ಪಣೆ ಮಾಡಿದ್ದಾರೆ.

    ಕಿರುತೆರೆ - ಚಿತ್ರರಂಗ


    ರಂಗಭೂಮಿಯಲ್ಲಿ ಲಂಕೇಶ್ ರ ಸಹಾಯಕರಾಗಿ ತೊಡಗಿಕೊಂಡಿದ್ದ ಇವರು ನಂತರ ಪುಟ್ಟಣ ಕಣಗಾಲ್ ರ ಚಿತ್ರಗಳಿಗೆ ಸ್ಕ್ರಿಪ್ಟ್ ಮತ್ತು ಸಂಭಾಷಣೆ ಬರೆಯತೊಡಗಿದರು. ಹಾಗೇ ಕೆಲ ಚಿತ್ರಗಳಲ್ಲಿ ನಟಿಸಲು ಆರಂಭಿಸಿದರು. ಆದರೆ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ಕಿರುತೆರೆಯಲ್ಲಿ ಇವರು ನಿರ್ದೇಶಿಸಿದ ಧಾರಾವಾಹಿಗಳು. ದೂರದರ್ಶನಕ್ಕಾಗಿ ಸೀರಿಯಲ್ ನಿರ್ದೇಶನ ತೊಡಗಿದ ಇವರು ನಂತರ ಖಾಸಗಿ ವಾಹಿನಿಯಾದ ಈಟಿವಿ ಕನ್ನಡದಲ್ಲೂ ಸೀರಿಯಲ್ ಗಳನ್ನು ನಿರ್ದೇಶನ ಮಾಡಿದರು.

    ಮಾಯಾಮೃಗ, ಮನ್ವಂತರ, ಮುಕ್ತ ಮುಂತಾದ ಧಾರಾವಾಹಿಗಳನ್ನು ಕಿರುತೆರೆಯಲ್ಲಿ ಇತಿಹಾಸವನ್ನೇ ಬರೆದಿವೆ. ತಮ್ಮ ಬಹುತೇಕ  ಧಾರಾವಾಹಿಗಳಲ್ಲಿ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಾಯಾಮೃಗ ಡಿವಿಡಿ ರೂಪದಲ್ಲಿ ಹೊರಬಂದರೆ, ಮುಕ್ತ ಮುಂತಾದ ಧಾರಾವಾಹಿಗಳಿಗಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಸಂವಾದವನ್ನು ಏರ್ಪಡಿಸುತ್ತಿದ್ದರು.

    ಮತದಾನ, ಮೀರಾ ಮಾಧವ ರಾಘವ, ಕಾಫಿ ತೋಟ ಮುಂತಾದ ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಇವರ ಬಹುತೇಕ ಸೀರಿಯಲ್ ಗಳು ಮಹಿಳಾ ಪ್ರಧಾನವಾಗಿವೆ. ಇದಕ್ಕೆ ನಿಧನರಾದ ತಮ್ಮ ಸಹೋದರಿ ಪದ್ಮಾ ಸ್ಫೂರ್ತಿಯೆಂದು ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು.

    2006 ರ ಕರ್ನಾಟಕ ಚಲನಚಿತ್ರ ಪ್ರಶಸ್ತಿಗಳ ಅಧ್ಯಕ್ಷರಾಗಿದ್ದರು. ಜೀ ಕನ್ನಡದ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ತೀರ್ಪುಗಾರರಾಗಿದ್ದರು.

    ನಿರ್ದೇಶನದ ಪ್ರಮುಖ ಚಿತ್ರಗಳು

    ಮತದಾನ
    ಮೀರಾ ಮಾಧವ ರಾಘವ
    ಕಾಫಿ ತೋಟ

    ನಿರ್ದೇಶನದ ಕಿರುತೆರೆ ಧಾರಾವಾಹಿಗಳು

    ಸಂಕಲನ - 1990 - ದೂರದರ್ಶನ ವಾಹಿನಿ - 1990
    ನಾವೆಲ್ಲರೂ ಒಂದೇ - ದೂರದರ್ಶನ ವಾಹಿನಿ -1991
    ಪತ್ತೇದಾರಿ ಪ್ರಭಾಕರ್ - ದೂರದರ್ಶನ ವಾಹಿನಿ - 1994
    ಮುಖಾಮುಖಿ - ದೂರದರ್ಶನ ವಾಹಿನಿ - 1995
    ಕಾಲೇಜ್ ತರಂಗ - ದೂರದರ್ಶನ ವಾಹಿನಿ - 1995
    ಮಾಯಾಮೃಗ (ಪಿ.ಶೇಷಾದ್ರಿ ಜೊತೆ) - ದೂರದರ್ಶನ ವಾಹಿನಿ - 1998
    ಜ್ವಾಲಾಮುಖಿ - ಉದಯ ಟಿವಿ - 1998
    ಮನ್ವಂತರ - ಈಟಿವಿ ಕನ್ನಡ - 2001
    ದಶಾವತಾರ - ಈಟಿವಿ ಕನ್ನಡ - 2003
    ಮಳೆ ಬಿಲ್ಲು - ಈಟಿವಿ ಕನ್ನಡ- 2004
    ಮುಕ್ತ - ಈಟಿವಿ ಕನ್ನಡ - 2004
    ಮುಕ್ತ ಮುಕ್ತ - ಈಟಿವಿ ಕನ್ನಡ - 2008
    ಮಿಂಚು - ಈಟಿವಿ ಕನ್ನಡ
    ಮಹಾ ಪರ್ವ - ಈಟಿವಿ ಕನ್ನಡ - 2013
    ಮಗಳು ಜಾನಕಿ - ಈಟಿವಿ ಕನ್ನಡ -2018

    ಪ್ರಮುಖ ನಾಟಕಗಳು

    ನಮ್ಮೊಳಗೊಬ್ಬ ನಾಜೂಕಯ್ಯ
    ಬದುಕು ಮನ್ನಿಸು ಪ್ರಭುವೇ
    ಅಸ್ಪೋಟ

    ಪ್ರಶಸ್ತಿಗಳು

    1989-90- ಕರ್ನಾಟಕ ರಾಜ್ಯ ಪ್ರಶಸ್ತಿ - ಅತ್ಯುತ್ತಮ ಸಂಭಾಷಣೆಕಾರ - ಪಂಚಮವೇದ ಚಿತ್ರ

    2000 - ರಾಷ್ಟ್ರ ಪ್ರಶಸ್ತಿ - ಅತ್ಯುತ್ತಮ ಫೀಚರ್ ಚಿತ್ರ - ಮತದಾನ

    2005 - ಕರ್ನಾಟಕ ರಾಜ್ಯ ಆರ್ಯಭಟ ಪ್ರಶಸ್ತಿ - ಅತ್ಯುತ್ತಮ ನಿರ್ದೇಶಕ -ಮುಕ್ತ ಧಾರಾವಾಹಿ
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X