Celebs » Upendra » Biography
ಜೀವನಚರಿತ್ರೆ

ಉಪೇಂದ್ರ (ಸೂಪರ್ ಸ್ಟಾರ್, ರಿಯಲ್ ಸ್ಟಾರ್) ಕನ್ನಡ ಚಲನಚಿತ್ರ ನಿರ್ದೇಶಕ ಹಾಗು ನಟ. ಇವರು ಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬದಲ್ಲಿ ಕುಂದಾಪುರ ಸಮೀಪದಲ್ಲಿರುವ ಕೋಟೇಶ್ವರದಲ್ಲಿ  18 ಸೆಪ್ಟೆಂಬರ್ 1967 ರಲ್ಲಿ ಜನಿಸಿದರು. ಇವರು ಬಸವನಗುಡಿಯ ಎ.ಪಿ.ಎಸ್ ಕಾಲೇಜ್ ನಲ್ಲಿ ವಾಣಿಜ್ಯದಲ್ಲಿ  ಪದವಿಯನ್ನು ಪಡೆದುಕೊಂಡಿದ್ದಾರೆ.

ಇವರಿಗೆ ಕಾಲೇಜ್ ನಲ್ಲಿ ಓದುತ್ತಿರುವಾಗಲೇ ಚಿತ್ರ ರಂಗದಲ್ಲಿ ನಟನೆ ಮಾಡುವಾಸೆ ಹುಟ್ಟಿಕೊಂಡಿತ್ತು. ಕಾಲೇಜ್ ಮುಗಿದ ನಂತರ ಕನ್ನಡ ಚಿತ್ರರಂಗದ ಪ್ರಸಿದ್ಧ ನಿರ್ದೇಶಕ ಕಾಶೀನಾಥ್ ಅವರ ಜೊತೆಯಲ್ಲಿ ಸಹಾಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ನಂತರ 1992 ರಲ್ಲಿ ಬಿಡುಗಡೆಗೊಂಡಿರುವ "ತರ್ಲೆ ನನ್ಮಕ್ಳು" ಚಿತ್ರಕ್ಕೆ ನಿರ್ದೇಶನ ಮಾಡುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡದರು.

1993 ರಲ್ಲಿ ತೆರೆಕಂಡಿರುವ "ಶ್" ಚಿತ್ರದಲ್ಲಿ ಮೊದಲ ಬಾರಿಗೆ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡರು. ನಂತರ ಇವರ ನಿರ್ದೇಶನದಲ್ಲೇ "ಓಂ" ಚಿತ್ರ ಮೂಡಿಬಂತು. ನಂತರ ಇವರು  "ಉಪೇಂದ್ರ, ಪ್ರೀತ್ಸೇ, ಕುಟುಂಬ, ಸೂಪರ್, ಹಾಲಿವುಡ್" ಸೇರಿದಂತೆ ಇನ್ನು ಅನೇಕ ಚಿತ್ರಗಳಲ್ಲಿ ನಾಯಕ, ನಿರ್ದೇಶಕ, ನಿರ್ಮಾಪಕರಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಟನೆಯಲ್ಲದೆ  ಗಾಯಕರಾಗಿಯೂ ಚಿತ್ರ ರಂಗದಲ್ಲಿ ಎಲ್ಲರ ಮನಸನ್ನು ಗೆದ್ದಿರುವಂತಹ ನಟ ಸೂಪರ್ ಸ್ಟಾರ್ ಆಗಿ ಚಿತ್ರರಂಗದಲ್ಲಿ ಮಿಂಚಿದ್ದಾರೆ.

ಡಿಸೆಂಬರ್ 14, 2003 ರಲ್ಲಿ ಇವರು ಕೊಲ್ಕತಾದ ಸುಂದರಿ ಪ್ರಿಯಾಂಕ ಎನ್ನುವರನ್ನು ವಿವಾಹವಾಗಿದ್ದಾರೆ. ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಅವರು ಸಹ ನಟಿ ಆಗಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada