twitter
    Celebs»Vijaya Narasimha»Biography

    ವಿಜಯ ನಾರಸಿಂಹ ಜೀವನಚರಿತ್ರೆ

    ವಿಜಯ ನಾರಸಿಂಹ ಕನ್ನಡ ಚಿತ್ರರಂಗದ ಪ್ರಸಿದ್ಧ ಧೀಮಂತ ಗೀತ ರಚನಾಕಾರ ಮತ್ತು ಚಿತ್ರಸಾಹಿತಿ. ಅರ್ಥಗರ್ಭಿತ ಚಿತ್ರಗೀತೆಗಳಿಗೆ ಹೆಸರಾದ ಇವರು ಸುಮಾರು 4000 ಕ್ಕೂ ಹೆಚ್ಚು ಚಿತ್ರಗೀತೆಗಳನ್ನು ಬರೆದಿದ್ದಾರೆ.

    60,70 ಮತ್ತು 80 ರ ದಶಕದಲ್ಲಿ ಸಕ್ರಿಯವಾಗಿದ್ದ ಇವರು 2001 ರಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿದರು.

    ಸಿನಿಪಯಣ

    ಡಾ.ರಾಜಕುಮಾರ್ ಅಭಿನಯದ `ಓಹಿಲೇಶ್ವರ' ಚಿತ್ರದ `ಈ ದೇಹದಿಂದ ದೂರವಾದೆ ಏಕೆ ಆತ್ಮವೇ' ಗೀತೆಯಿಂದ ಇವರ ಸಿನಿಪಯಣ ಶುರುವಾಯಿತು. ನಂತರ ಪುಟ್ಟಣ್ಣ ಕಣಗಾಲ್ ಮತ್ತು ವಿಜಯ ಭಾಸ್ಕರ್ ಜೊತೆಗೂಡಿದ ಇವರು ಕನ್ನಡ ಚಿತ್ರರಂಗದ ಚಮತ್ಕಾರಿ ತ್ರಿವಳಗಳೆಂದೇ ಪ್ರಸಿದ್ಧರಾದರು. `ಗೆಜ್ಜೆ ಪೂಜೆ' ,`ಶರಪಂಜರ'`ಎಡಕಲ್ಲು ಗುಡ್ಡದ ಮೇಲೆ' ಮುಂತಾದ ಚಿತ್ರಗಳಿಗೆ ಸಾಹಿತ್ಯ ನೀಡಿದ್ದಾರೆ. ರಾಜಕುಮಾರ್ ಅಭಿನಯದ `ಒಡಹುಟ್ಟಿದವರು' ಇವರು ಸಾಹಿತ್ಯ ನೀಡಿದ ಕೊನೆಯ ಚಿತ್ರ.

    ಚಿತ್ರಜಗತ್ತಿನಾಚೆಗೆ

    ಚಿತ್ರಗೀತೆಗಳನಷ್ಷೇಯಲ್ಲದೇ ಕೆಲವು ಕಾದಂಬರಿಗಳನ್ನು ಬರೆದಿದ್ದಾರೆ. `ಬದುಕಿನ ಭೈರಾಗಿ',`ಶ್ರೀಮನ್ ಚಕ್ರಾಯಣ' ಮತ್ತು`ಸಂಜೆಗಂಪು' ಕಾದಂಬರಿಗಳನ್ನು ಬರೆದಿರುವ ಇವರು ಪುಟ್ಟಣ್ಣ ಕಣಗಾಲ್ ಅವರ ಆತ್ಮಕಥೆಯನ್ನು ಬರೆದಿದ್ದಾರೆ. ಇವರ `ಭಾದ್ರಪದ ಶುಕ್ಲದ ಚೌತಿ' ಧ್ವನಿಸುರಳಿ ಸುಮಾರು ಮೂವತ್ತು ವರ್ಷಗಳ ಹಿಂದೆ ದಾಖಲೆ ಪ್ರಮಾಣದಲ್ಲಿ ಮಾರಾಟವಾಗಿತ್ತು.

    ಕೆಲವು ಪ್ರಸಿದ್ಧ ಚಿತ್ರಗೀತೆಗಳ ಸಾಲುಗಳು

    ಈ ದೇಹದಿಂದ ದೂರವಾದೇ ಏಕೆ ಆತ್ಮವೇ- (ಓಹಿಲೇಶ್ವರ)

    ಭಾರತ ಭೂಶಿರ ಮಂದಿರ ಸುಂದರಿ - (ಉಪಾಸನೆ)

    ಪಂಚಮವೇದ ಪ್ರೇಮದ ನಾದ - (ಗೆಜ್ಜೆ ಪೂಜೆ)

    ಸಂದೇಶ ಮೇಘಸಂದೇಶ- (ಶರಪಂಜರ)

    ಪ್ರೀತಿಯೇ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವೆಗೆ- (ದೂರದ ಬೆಟ್ಟ)

    ವಿರಹ ನೂರು ತರಹ- (ಎಡಕಲ್ಲು ಗುಡ್ಡದ ಮೇಲೆ)

    ಮಂದಾರ ಪುಷ್ಪವು ನೀನು - (ರಂಗನಾಯಕಿ)

    ಹಿಂದೂಸ್ಥಾನವ ಎಂದೂ ಮರೆಯದ - (ಅಮೃತ ಘಳಿಗೆ)

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X