twitter
    Celebs»Vinayak Joshi»Biography

    ವಿನಾಯಕ ಜೋಷಿ ಜೀವನಚರಿತ್ರೆ

    ವಿನಾಯಕ ಜೋಷಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಬಹುಮುಖ ಪ್ರತಿಭೆ. ಚಲನಚಿತ್ರ, ಕಿರುತೆರೆ, ರೇಡಿಯೋ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿದ್ದಾರೆ. ಇವರ ತಾತ ವಿ.ಎಮ್.ಜೋಷಿ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದರು. ಬಾಲನಟನಾಗಿ `ನಮ್ಮೂರ ಮಂದಾರ ಹೂವೇ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಇವರು ನಂತರ ರೇಡಿಯೋ ಜಾಕಿಯಾಗಿ ಕಾರ್ಯ ನಿರ್ವಹಿಸಿದರು. ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಪದವಿ ಪಡೆದಿರುವ ಇವರು `ಮುಸ್ಸಂಜೆ',`ದಂಡಪಿಂಡಗಳು' ಮುಂತಾದವು ಸೇರಿದಂತೆ ಸುಮಾರು 70 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. `ರೇಡಿಯೋ ಸಿಟಿ' ಮತ್ತು ರೇಡಿಯೋ ಮಿರ್ಚಿ' ಗಳಲ್ಲಿ ಜೋಷಿ ಕೆಲಕಾಲ ಪ್ಲಿಫಕಾರ್ಟ್ ಕಂಪನಿಯಲ್ಲಿ ಡಿಜಿಟಲ್ ಹೆಡ್ ಆಗಿ ಕಾರ್ಯ ನಿರ್ವಹಿಸಿದ್ದಾರೆ.

    2013 ರಲ್ಲಿ ಕಿಚ್ಚ ಸುದೀಪ್ ನಿರೂಪಣೆಯ `ಬಿಗ್‌ಬಾಸ್' ಕನ್ನಡ ಅವತರಣಿಕೆಯಲ್ಲಿ ಭಾಗವಹಿಸಿದರು. ಸುಮಾರು 40 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಇವರು ಎರಡು ಬಾರಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ``ಶ್ರದ್ಧಾ' ಎಂಬ ನಾಟಕದ ನಿರ್ದೇಶನಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. ಚಿತ್ರ ನಟನೆ ಮಾತ್ರವಲ್ಲದೇ `ಜೋಷಿ ಚಿತ್ರ' ಬ್ಯಾನರ್ ಅಡಿಯಲ್ಲಿ ನಾಲ್ಕು ಚಿತ್ರಗಳನ್ನು ನಿರ್ಮಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X