ಬಾಲಿವುಡ್ ರೀಮೇಕ್ ಮಾಡುತ್ತಿರುವ ಟಾಪ್ ಹತ್ತು ದಕ್ಷಿಣ ಭಾರತ ಸಿನಿಮಾಗಳಿವು

ಭಾರತದ ಅತಿ ದೊಡ್ಡ ಹಾಗೂ ದುಬಾರಿ ಚಿತ್ರರಂಗ ಎಂದು ಕರೆದುಕೊಳ್ಳುವ ಬಾಲಿವುಡ್ ಸಿನಿಮಾ ಕಂಟೆಂಟ್‌ಗೆ ಸದಾ ದಕ್ಷಿಣ ಭಾರತ ಚಿತ್ರರಂಗದ ಕಡೆ ನೋಡುತ್ತಿರುತ್ತದೆ.

ಬಾಲಿವುಡ್‌ನ ಹಲವು ಆಲ್‌ಟೈಮ್ ಸೂಪರ್ ಹಿಟ್ ಸಿನಿಮಾಗಳನ್ನು ಎರವಲು ಪಡೆದಿರುವುದು ದಕ್ಷಿಣ ಭಾರತ ಚಿತ್ರರಂಗದಿಂದ. ಬಾಲಿವುಡ್‌ನ ನಂಬರ್ 1 ಹಾಸ್ಯ ಸಿನಿಮಾ 'ಹೇರಾ-ಪೇರಿ', ಅಮಿತಾಬ್ ಬಚ್ಚನ್‌ರ 'ಸೂರ್ಯವಂಶಂ', ಶಾರುಖ್ ನಟನೆಯ 'ಸ್ವದೇಸ್', 'ಪಹೇಲಿ' ಸಿನಿಮಾಗಳು ಕನ್ನಡದ 'ಚಿಗುರಿದ ಕನಸು', 'ನಾಗಮಂಡಲ' ಸಿನಿಮಾದ ರೀಮೇಕ್.

ಹಲವು ದಶಕಗಳಿಂದಲೂ ಬಾಲಿವುಡ್, ದಕ್ಷಿಣ ಭಾರತ ಸಿನಿಮಾಗಳ ರೀಮೇಕ್ ಮಾಡುತ್ತಲೇ ಬಂದಿದೆ. ಈಗಲೂ ಈ ಸಂಪ್ರದಾಯ ಮುಂದುವರೆದಿದೆ. ಈಗಂತೂ ಬಾಲಿವುಡ್‌, ಹೆಚ್ಚು-ಹೆಚ್ಚು ದಕ್ಷಿಣ ಭಾರತ ಸಿನಿಮಾಗಳನ್ನು ಎತ್ತಿಕೊಳ್ಳುತ್ತಿದೆ. ಹಿಂದಿಗೆ ರೀಮೇಕ್ ಆಗುತ್ತಿರುವ ಟಾಪ್ ಹತ್ತು ದಕ್ಷಿಣ ಭಾರತ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ.

ಕನ್ನಡದ 'ಯೂ ಟರ್ನ್' ಹಿಂದಿಗೆ

ಕನ್ನಡದ 'ಯೂ ಟರ್ನ್' ಹಿಂದಿಗೆ

'ಲೂಸಿಯಾ' ಪವನ್ ನಿರ್ದೇಶಿಸಿ, ಶ್ರದ್ಧಾ ಶ್ರೀನಾಥ್ ನಟಿಸಿದ್ದ ಕನ್ನಡ ಸಿನಿಮಾ 'ಯೂ ಟರ್ನ್' ಹಿಂದಿಗೆ ರೀಮೇಕ್ ಆಗುತ್ತಿದೆ. ಆಲಿಯಾ ಎಫ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದು, ಬಾಲಿವುಡ್‌ನ ಟಾಪ್ ನಿರ್ಮಾಪಕರಲ್ಲಿ ಒಬ್ಬರಾಗಿರುವ ಏಕ್ತಾ ಕಪೂರ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನು ತೆಲುಗು ಹಾಗೂ ತಮಿಳಿಗೆ ಪವನ್ ಅವರೇ ರೀಮೇಕ್ ಮಾಡಿದ್ದಾರೆ. ಎರಡೂ ಭಾಷೆಯಲ್ಲಿ ಸಮಂತಾ ನಾಯಕಿಯಾಗಿ ನಟಿಸಿದ್ದರು. ಬೆಂಗಾಲಿಯಲ್ಲಿ 'ಫ್ಲೈ ಓವರ್' ಹೆಸರಿನಲ್ಲಿ ಶ್ರೀಲಂಕನ್ ಭಾಷೆಯಲ್ಲಿ 'ಯೂ ಟರ್ನ್' ಎಂದು, ಫಿಲಿಫಿನೊ ಭಾಷೆಯಲ್ಲಿ 'ಯೂ ಟರ್ನ್' ಎಂದು ರೀಮೇಕ್ ಆಗಿದೆ. ಹಿಂದಿಯಲ್ಲಿಯೂ 'ಯೂ ಟರ್ನ್' ಹೆಸರನ್ನೇ ಉಳಿಸಿಕೊಳ್ಳಲಾಗಿದೆ.

'ವಿಕ್ರಂ-ವೇದ' ಮೇಲೆ ಹೃತಿಕ್ ರೋಷನ್ ಕಣ್ಣು

'ವಿಕ್ರಂ-ವೇದ' ಮೇಲೆ ಹೃತಿಕ್ ರೋಷನ್ ಕಣ್ಣು

ತಮಿಳಿನ ಸೂಪರ್-ಡೂಪರ್ ಹಿಟ್ ಸಿನಿಮಾ 'ವಿಕ್ರಂ-ವೇದ' ಹಿಂದಿಗೆ ರೀಮೇಕ್ ಆಗುತ್ತಿದೆ. ತಮಿಳಿನಲ್ಲಿ ವಿಜಯ್ ಸೇತುಪತಿ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಹೃತಿಕ್ ರೋಷನ್ ನಿರ್ವಹಿಸುತ್ತಿದ್ದಾರೆ. ಮಾಧವನ್ ನಟಿಸಿದ್ದ ಪೊಲೀಸ್ ಪಾತ್ರದಲ್ಲಿ ಸೈಫ್ ಅಲಿ ಖಾನ್ ನಟಿಸುತ್ತಿದ್ದಾರೆ. ಹಿಂದಿ ಸಿನಿಮಾದ ಚಿತ್ರೀಕರಣ ಬಹುತೇಕ ಅಂತಿಮ ಹಂತದಲ್ಲಿದ್ದು ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

ಹೊಸಬರ 'ಹಿಟ್' ಹಿಂದಿಗೆ ರೀಮೇಕ್

ಹೊಸಬರ 'ಹಿಟ್' ಹಿಂದಿಗೆ ರೀಮೇಕ್

ತೆಲುಗಿನ 'ಹಿಟ್' ಸಿನಿಮಾ ಹಲವರನ್ನು ಆಶ್ಚರ್ಯಗೊಳಿಸಿತ್ತು. ಹೊಸ ತಂಡ ಒಂದು ಅತ್ಯುತ್ತಮ ಥ್ರಿಲ್ಲರ್ ಸಿನಿಮಾವನ್ನು 'ಹಿಟ್' ಮೂಲಕ ಕಟ್ಟಿಕೊಟ್ಟಿತ್ತು. ಈಗ ಈ ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದೆ. ಹಿಂದಿ ಸಿನಿಮಾದಲ್ಲಿ ನಾಯಕನಾಗಿ ರಾಜಕುಮಾರ್ ರಾವ್ ನಟಿಸುತ್ತಿದ್ದಾರೆ. ನಾಯಕಿಯಾಗಿ ಸಾನ್ಯಾ ಮಲ್ಹೋತ್ರಾ ನಟಿಸುತ್ತಿದ್ದಾರೆ. ಸಿನಿಮಾವು ಪೋಲೀಸ್ ಒಬ್ಬ ನಾಪತ್ತೆಯಾದ ಮಹಿಳೆಯರ ಪ್ರಕರಣದ ತನಿಖೆ ಸುತ್ತ ಸುತ್ತುತ್ತದೆ. ತೆಲುಗಿನಲ್ಲಿ 'ಹಿಟ್' ಸಿನಿಮಾದ ಮುಂದಿನ ಭಾಗ ಸಹ ತೆರೆಗೆ ಬರುತ್ತಿದೆ.

ತೆಲುಗಿನ 'ಜೆರ್ಸಿ' ಈಗ ಹಿಂದಿಯ 'ಜೆರ್ಸಿ'

ತೆಲುಗಿನ 'ಜೆರ್ಸಿ' ಈಗ ಹಿಂದಿಯ 'ಜೆರ್ಸಿ'

ನಟ ನಾನಿ ನಟಿಸಿರುವ ತೆಲುಗಿನ ಹಿಟ್ ಸಿನಿಮಾ 'ಜೆರ್ಸಿ' ಹಿಂದಿಗೆ ರೀಮೇಕ್ ಆಗಿದೆ. ರಾಷ್ಟ್ರಪ್ರಶಸ್ತಿ ಪಡೆದ ಈ ಸಿನಿಮಾ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿತ್ತು. ಆ ಸಿನಿಮಾವನ್ನು 'ಜೆರ್ಸಿ' ಹೆಸರಿನಲ್ಲಿಯೇ ಹಿಂದಿಗೆ ರೀಮೇಕ್ ಮಾಡಲಾಗಿದ್ದು, ಶಾಹಿದ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ ಆಗಿ, ಕೊರೊನಾ ಕಾರಣಕ್ಕೆ ಬಿಡುಗಡೆ ಮುಂದೂಡಲಾಗಿದೆ. ಈ ಹಿಂದೆ ಶಾಹಿದ್ ಕಪೂರ್ ಅವರೇ ತೆಲುಗಿನ 'ಅರ್ಜುನ್ ಕಪೂರ್' ಸಿನಿಮಾದ ರೀಮೇಕ್ ಮಾಡಿ ಹಿಟ್ ನೀಡಿದ್ದರು. ಈಗ ಮತ್ತೊಂದು ತೆಲುಗು ರೀಮೇಕ್‌ನಲ್ಲಿ ನಟಿಸುತ್ತಿದ್ದಾರೆ.

ಮಲಯಾಳಂ ಸಿನಿಮಾ 'ಡ್ರೈವಿಂಗ್ ಲೈಸೆನ್ಸ್'

ಮಲಯಾಳಂ ಸಿನಿಮಾ 'ಡ್ರೈವಿಂಗ್ ಲೈಸೆನ್ಸ್'

ಮಲಯಾಳಂ ಸಿನಿಮಾಗಳು ಇತ್ತೀಚಿನ ಕೆಲ ವರ್ಷಗಳಲ್ಲಿ ವಿಶ್ವಮಟ್ಟದಲ್ಲಿ ಗಮನ ಸೆಳೆದಿವೆ. 2019 ರಲ್ಲಿ ಬಿಡುಗಡೆ ಆಗಿದ್ದ ಮಲಯಾಳಂ ಸಿನಿಮಾ 'ಡ್ರೈವಿಂಗ್ ಲೈಸೆನ್ಸ್' ಭಾರಿ ಮೆಚ್ಚುಗೆ ಗಳಿಸಿತ್ತು. ಸಿನಿಮಾ ನಟ ಹಾಗೂ ಆರ್‌ಟಿಓ ಅಧಿಕಾರಿ ನಡುವೆ ನಡೆವ ಸರಳ ಕತೆಯನ್ನು ಅದ್ಭುತವಾಗಿ ತೆರೆಗೆ ತರಲಾಗಿತ್ತು. ಇದೇ ಸಿನಿಮಾವನ್ನು ಈಗ ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಹೀರೋ ಪಾತ್ರದಲ್ಲಿ ನಟ ಅಕ್ಷಯ್ ಕುಮಾರ್, ಆರ್‌ಟಿಓ ಅಧಿಕಾರಿ ಪಾತ್ರದಲ್ಲಿ ಇಮ್ರಾನ್ ಹಶ್ಮಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಕೆಲವು ದಿನಗಳ ಹಿಂದಷ್ಟೆ ಪ್ರಾರಂಭವಾಗಿದೆ.

'ಸೂರರೈ ಪೊಟ್ರು' ಹಿಂದಿಗೆ

'ಸೂರರೈ ಪೊಟ್ರು' ಹಿಂದಿಗೆ

ಕನ್ನಡಿಗ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಜೀವನ ಆಧರಿಸಿದ ತಮಿಳು ಸಿನಿಮಾ 'ಸೂರರೈ ಪೊಟ್ರು' ಅನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಅಮೆಜಾನ್‌ ಪ್ರೈಂನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾದ ಹಿಂದಿ ಅವತರಣಿಕೆ ಅಮೆಜಾನ್‌ನಲ್ಲಿ ಲಭ್ಯವಿದೆ ಆದರೂ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಹಿಂದಿ ರೀಮೇಕ್ ಅನ್ನು ಮೂಲ ಸಿನಿಮಾದ ನಿರ್ದೇಶಕಿ ಸುಧಾ ಕೊಂಗರಾ ಅವರೇ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಪಾತ್ರವರ್ಗ ಅಂತಿಮವಾಗಿಲ್ಲ. ಹಿಂದಿ ರೀಮೇಕ್ ಅನ್ನು ಚಿತ್ರಮಮದಿರಗಳಲ್ಲಿ ಬಿಡುಗಡೆ ಮಾಡುವ ಯೋಚನೆ ನಿರ್ಮಾಣ ಸಂಸ್ಥೆಗಿದೆ.

ಮಲಯಾಳಂನ ಥ್ರಿಲ್ಲರ್ ಸಿನಿಮಾ 'ಹೆಲೆನ್'

ಮಲಯಾಳಂನ ಥ್ರಿಲ್ಲರ್ ಸಿನಿಮಾ 'ಹೆಲೆನ್'

ಮಲಯಾಳಂ ಸಿನಿಮಾ 'ಹೆಲೆನ್' ಕೇವಲ ಒಂದು ದಿನದಲ್ಲಿ ನಡೆವ ಕತೆ. ಸಿನಿಮಾದ ನಾಯಕಿ ಕೋಲ್ಡ್ ಸ್ಟೋರೆಜ್ ಒಂದರಲ್ಲಿ ಸಿಲುಕಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ಹೊರಗೆ ಬರುವ ಕತೆಯನ್ನು ಸಿನಿಮಾ ಹೊಂದಿದೆ. ಮೂಲ ಸಿನಿಮಾದಲ್ಲಿ ಅನ್ನಾ ಬೆನ್ ಅದ್ಭುತವಾಗಿ ನಟಿಸಿದ್ದರು. ಹಿಂದಿಯಲ್ಲಿ ಈ ಸಿನಿಮಾ ರೀಮೇಕ್ ಅಗುತ್ತಿದ್ದು, ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಟಿಸುತ್ತಿದ್ದಾರೆ. ಹಿಂದಿ ಸಿನಿಮಾವನ್ನು ಜಾಹ್ನವಿ ಕಪೂರ್ ತಂದೆ ಬೋನಿ ಕಪೂರ್ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭವಾಗಿದೆ.

ತಮಿಳಿನ 'ಖೈದಿ' ಹಿಂದಿಗೆ ರೀಮೇಕ್

ತಮಿಳಿನ 'ಖೈದಿ' ಹಿಂದಿಗೆ ರೀಮೇಕ್

ತಮಿಳು ಸಿನಿಮಾ ಖೈದಿ ಒಂದು ರಾತ್ರಿ ನಡೆವ ಕತೆಯನ್ನು ಹೊಂದಿದೆ. ಪ್ರಜ್ಞೆ ತಪ್ಪಿ ಬಿದ್ದ ಪೊಲೀಸರನ್ನು ಖೈದಿಯೊಬ್ಬ ಲಾರಿಯಲ್ಲಿ ಒಂದು ಗೊತ್ತಾದ ಸ್ಥಳಕ್ಕೆ ತಲುಪಿಸುವ ಕತೆಯನ್ನು ಈ ಸಿನಿಮಾ ಹೊಂದಿದ್ದು, ತಮಿಳಿನಲ್ಲಿ ನಾಯಕ ಪಾತ್ರದಲ್ಲಿ ಸೂರ್ಯ ಸಹೋದರ ಕಾರ್ತಿ ನಟಿಸಿದ್ದಾರೆ. ಹಿಂದಿಗೆ ಈ ಸಿನಿಮಾ ರೀಮೇಕ್ ಆಗುತ್ತಿದ್ದು, ನಾಯಕ ಪಾತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿದ್ದಾರೆ.

'ಮಾಸ್ಟರ್' ರೀಮೇಕ್ ಮಾಡುತ್ತಿದ್ದಾರೆ ಸಲ್ಮಾನ್

'ಮಾಸ್ಟರ್' ರೀಮೇಕ್ ಮಾಡುತ್ತಿದ್ದಾರೆ ಸಲ್ಮಾನ್

ತಮಿಳಿನ ಸೂಪರ್ ಡೂಪರ್ ಹಿಟ್ ಸಿನಿಮಾ 'ಮಾಸ್ಟರ್' ಅನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ತಮಿಳಿನಲ್ಲಿ ನಟ ವಿಜಯ್ ನಟಿಸಿದ್ದ ನಾಯಕ ಪಾತ್ರದಲ್ಲಿ ಹಿಂದಿಯಲ್ಲಿ ಸಲ್ಮಾನ್ ಖಾನ್ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಎಂಡೆಮೋಲ್ ಶೈನ್ ಸಂಸ್ಥೆ ನಿರ್ಮಾಣ ಮಾಡಲಿದೆ. ದಕ್ಷಿಣ ಭಾರತ ಸಿನಿಮಾಗಳನ್ನು ರೀಮೇಕ್ ಮಾಡುವುದು ಸಲ್ಮಾನ್ ಖಾನ್‌ಗೆ ಹೊಸದೇನೂ ಅಲ್ಲ. ಈಗಾಗಲೇ ಹಲವು ಸಿನಿಮಾಗಳನ್ನು ಅವರು ರೀಮೇಕ್ ಮಾಡಿ ಹಿಟ್ ಸಂಪಾದಿಸಿದ್ದಾರೆ.

'ಅಲಾ ವೈಕುಂಟಪುರಂಲೋ'

'ಅಲಾ ವೈಕುಂಟಪುರಂಲೋ'

ತೆಲುಗಿನ ಸೂಪರ್ ಹಿಟ್ ಸಿನಿಮಾ 'ಅಲಾ ವೈಕುಂಟಪುರಂಲೋ' ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡಲಾಗುತ್ತಿದೆ. ಹಿಂದಿ ಸಿನಿಮಾಕ್ಕೆ 'ಶೆಹಜಾದ' ಎಂದು ಹೆಸರಿಟ್ಟಿದ್ದು, ತೆಲುಗಿನಲ್ಲಿ ಅಲ್ಲು ಅರ್ಜುನ್ ನಿರ್ವಹಿಸಿದ್ದ ಪಾತ್ರವನ್ನು ಹಿಂದಿಯಲ್ಲಿ ಕಾರ್ತಿಕ್ ಆರ್ಯನ್ ನಿರ್ವಹಿಸುತ್ತಿದ್ದಾರೆ. ತೆಲುಗಿನಲ್ಲಿ ಪೂಜಾ ಭಟ್ ನಟಿಸಿದ್ದ ಪಾತ್ರದಲ್ಲಿ ಹಿಂದಿಯಲ್ಲಿ ಕೃತಿ ಸೆನನ್ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದ್ದು ಕೆಲವೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

'ಏಡ್ಸ್' ಕುರಿತ ಕತೆಯುಳ್ಳ ತಮಿಳಿನ 'ಅರುವಿ'

'ಏಡ್ಸ್' ಕುರಿತ ಕತೆಯುಳ್ಳ ತಮಿಳಿನ 'ಅರುವಿ'

2017 ರಲ್ಲಿ ಬಿಡುಗಡೆ ಆಗಿದ್ದ 'ಅರುವಿ' ಸಿನಿಮಾದ ಹಿಂದಿ ರೀಮೇಕ್ ಬರಲಿದೆ. 'ಅರುವಿ' ಸಿನಿಮಾವು ಎಚ್‌ಐವಿ ಪಾಸಿಟಿವ್ ಆದ ಯುವತಿಯೊಬ್ಬಾಕೆ ಟಿವಿ ಚಾನೆಲ್ ಒಂದರಲ್ಲಿ ಎಲ್ಲರಲ್ಲೂ ಒತ್ತೆಯಾಳಾಗಿ ಇಟ್ಟುಕೊಳ್ಳುವ ಕತೆಯನ್ನು ಹೊಂದಿದೆ. ಈ ಸಿನಿಮಾದ ಹಿಂದಿ ರೀಮೇಕ್ ಆಗುತ್ತಿದ್ದು, ಮುಖ್ಯ ಪಾತ್ರದಲ್ಲಿ 'ದಂಗಲ್' ಸಿನಿಮಾದಲ್ಲಿ ನಟಿಸಿದ್ದ ಫಾತಿಮಾ ಸನಾ ಶೇಖ್ ನಟಿಸುತ್ತಿದ್ದಾರೆ.

More from Filmibeat

English summary
Here is the 11 top South Indian movies that Bollywood remaking. Many Hindi star actors acting in remake movies
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X