ಅಪ್ಪಾಜಿಯ 'ಶಬ್ದವೇದಿ'ಗೆ ಯಾರು ಟಿಕೆಟ್ ಕೇಳಲಿಲ್ಲ; 'ಜೋಗಿ' ಕ್ರೇಜ್ ಬಗ್ಗೆ ಪುನೀತ್ ಏನಂದಿದ್ರು?

ಕನ್ನಡ ಚಿತ್ರರಂಗದಲ್ಲಿ 'ಜೋಗಿ' ಸಿನಿಮಾ ಕ್ರೇಜ್ ಮೀರಿಸುವಂತಹ ಮತ್ತೊಂದು ಸಿನಿಮಾ ಬರಲಿಲ್ಲ. 20 ವರ್ಷಗಳ ಹಿಂದೆ ಸಿನಿಮಾ ತೆರೆಕಂಡು ಹಲವು ದಾಖಲೆಗಳನ್ನು ಬರೆದಿತ್ತು. ಪ್ರೇಮ್ ನಿರ್ದೇಶನ, ಶಿವಣ್ಣ ನಟನೆಗೆ ಬಾಕ್ಸಾಫೀಸ್ ಶೇಕ್ ಆಗಿತ್ತು. 4 ಕೋಟಿ ರೂ. ಬಜೆಟ್ ಸಿನಿಮಾ ಅವತ್ತಿನ ಕಾಲಕ್ಕೆ 20 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿತ್ತು.

ಅಂದು 'ಜೋಗಿ' ಸಿನಿಮಾ ಮಾಡಿದ್ದ ಬ್ಯುಸಿನೆಸ್ ಇವತ್ತಿಗೆ ಲೆಕ್ಕ ಹಾಕಿದ್ರೆ 200 ಕೋಟಿ ರೂ. ದಾಟುತ್ತದೆ. ಸೋಶಿಯಲ್ ಮೀಡಿಯಾ ಇಲ್ಲದ ಕಾಲದಲ್ಲಿ ಚಿತ್ರಕ್ಕೆ ಭರ್ಜರಿ ಪ್ರಚಾರ ಮಾಡಿ ಪ್ರೇಮ್ ಸಕ್ಸಸ್ ಕಂಡಿದ್ದರು. ಟೈಟಲ್‌ನಿಂದಲೇ ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡಿತ್ತು. ಇನ್ನು ಶಿವಣ್ಣನ ಉದ್ದ ಕೂಲಿನ ಲುಕ್ಕು, ಲಾಂಗ್ ಹಿಡಿದ ಪೋಸ್ಟರ್‌ಗಳು ಪೇಪರ್, ಟಿವಿಯಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದರು. ಗುರುಕಿರಣ್ ಸಂಗೀತದಲ್ಲಿ ಆಲ್ಬಮ್ ಹಿಟ್ ಆಗಿ ಮತ್ತಷ್ಟು ಕುತೂಹಲ ಮೂಡಿತ್ತು.

20 Years of Jogi Puneeth Rajkumar on the Unmatched Craze for Shivanna s Blockbuster

ಸಿನಿಮಾ ಮೇಲೆ ಹೈಪ್ ಹೆಚ್ಚಾದರೂ ರಿಲೀಸ್ ಡೇಟ್ ಮಾತ್ರ ಪದೇ ಪದೆ ಬದಲಾಗಿ ತಡವಾಗಿತ್ತು. ಹಾಗಾಗಿ ಒಮ್ಮೆಲೆ ಅಭಿಮಾನಿಗಳು ಸಿನಿಮಾ ನೋಡಲು ಮುಗಿಬಿದ್ದಿದ್ದರು. ರೌಡಿಸಂ ಜೊತೆಗೆ ಮದರ್ ಸೆಂಟಿಮೆಂಟ್ ವಿಚಾರವನ್ನು ಸೇರಿ ಪ್ರೇಮ್ ಕಟ್ಟಿಕೊಟ್ಟ ಸಿನಿಮಾ ಜಾದೂ ಮಾಡಿತ್ತು. ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಸಿನಿಮಾ ಮೂಡಿ ಬಂದು ಹಿಟ್ ಆಗಿತ್ತು. ಅಣ್ಣಾವ್ರು, ರಜನಿಕಾಂತ್ ಒಟ್ಟಿಗೆ ಬೆಂಗಳೂರಿನಲ್ಲಿ ಸಿನಿಮಾ ನೋಡಿದ್ದರು.

ಕೇವಲ 75 ಚಿತ್ರಮಂದಿರಗಳಲ್ಲಿ 'ಜೋಗಿ' ಸಿನಿಮಾ ಬಿಡುಗಡೆ ಆಗಿತ್ತು. ಬಹುತೇಕ ಚಿತ್ರಮಂದಿರಗಳ ವಾರದ ಟಿಕೆಟ್ ಸಿನಿಮಾ ಬಿಡುಗಡೆಗೂ ಮುನ್ನ ಮಾರಾಟವಾಗಿತ್ತು. 3 ದಿನಗಳ ಕಾಲ ಅಭಿಮಾನಿಗಳು ಸಿನಿಮಾ ಟಿಕೆಟ್‌ಗಾಗಿ ಕ್ಯೂ ನಿಂತಿದ್ದರು. ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಇಲ್ಲದ ಕಾಲದಲ್ಲಿ ಸಿನಿಮಾ ಟಿಕೆಟ್ ಖರೀದಿಸುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಚಿತ್ರರಂಗದ ಸಂಪರ್ಕ ಇರುವ ಎಲ್ಲರಿಗೂ 'ಜೋಗಿ' ಚಿತ್ರದ ಟಿಕೆಟ್‌ ಕೊಡಿಸುವಂತೆ ಜನ ದುಂಬಾಲು ಬಿದ್ದಿದ್ದರು. 'ಜೋಗಿ' ಕ್ರೇಜ್ ನೋಡಿ ಸ್ವತಃ ಪುನೀತ್ ರಾಜ್‌ಕುಮಾರ್ ಕೂಡ ಶಾಕ್ ಆಗಿಬಿಟ್ಟಿದ್ದರು. ಅಂದು ಈ ಬಗ್ಗೆ ಕನ್ನಡ ಪ್ರಭ ಪತ್ರಿಕೆಗೆ ಅಪ್ಪು ಪ್ರತಿಕ್ರಿಯಿಸಿದ್ದರು.

20 Years of Jogi Puneeth Rajkumar on the Unmatched Craze for Shivanna s Blockbuster

"ಅಪ್ಪಾಜಿಯ 'ಶಬ್ಧವೇದಿ' ಸಿನಿಮಾ ಬಿಡುಗಡೆ ಆಗಿದ್ದಾಗಲೂ ಯಾರು ಟಿಕೆಟ್ ಕೇಳಿರಲಿಲ್ಲ. ಈಗ 'ಜೋಗಿ' ಟಿಕೆಟ್ ಕೊಡಿಸಿ ಎಂದು ದಿನಕ್ಕೆ 10 ಫೋನ್ ಕಾಲ್ ಬರ್ತಿದೆ. ಪ್ರತಿಯೊಬ್ಬರು ಹತ್ತೋ ಇಪ್ಪತ್ತೋ ಟಿಕೆಟ್ ಕೇಳ್ತಿದ್ದಾರೆ" ಎಂದು ಪುನೀತ್ ರಾಜ್‌ಕುಮಾರ್ ಹೇಳಿದ್ದರು. ಅಪ್ಪು ಮಾತಿನಲ್ಲೇ 'ಜೋಗಿ' ಕ್ರೇಜ್ ಅಂದು ಹೇಗಿತ್ತು ಎನ್ನುವುದು ಅರ್ಥವಾಗುತ್ತದೆ.

'ಒಡಹುಟ್ಟಿದವರು' ಸಿನಿಮಾ ಬಂದು 6 ವರ್ಷಗಳ ಗ್ಯಾಪ್ ಬಳಿಕ ಡಾ. ರಾಜ್‌ಕುಮಾರ್ ನಟನೆಯ 'ಶಬ್ಧವೇದಿ' ಸಿನಿಮಾ ತೆರೆಗೆ ಬಂದಿತ್ತು. ಆ ಸಿನಿಮಾ ಕೂಡ ಭಾರೀ ನಿರೀಕ್ಷೆ ಹುಟ್ಟಾಕ್ಕಿತ್ತು. ಅಭಿಮಾನಿಗಳು ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಸ್ವಾಗತಿಸಿದ್ದರು. ಆದರೆ ಆ ಚಿತ್ರಕ್ಕೂ ಇಂತಹ ಕ್ರೇಜ್ ಇರಲಿಲ್ಲ. ಜನ ನನಗೆ ಟಿಕೆಟ್ ಕೊಡಿಸಿ ಎಂದು ಕೇಳಿರಲಿಲ್ಲ ಎಂದು ಅಪ್ಪು ಹೇಳಿರುವುದು ಅಚ್ಚರಿ ಎನಿಸದೇ ಇರದು.

'ಜೋಗಿ' ಸಿನಿಮಾ ತೆರೆಕಂಡು 20 ವರ್ಷ ತುಂಬಿದೆ. ಅಭಿಮಾನಿಗಳು ಈ ಚಿತ್ರವನ್ನು ರೀ ರಿಲೀಸ್ ಮಾಡುವಂತೆ ಕೇಳುತ್ತಲೇ ಇದ್ದಾರೆ. ಹೊಸ ತಂತ್ರಜ್ಞಾನದಲ್ಲಿ 4k ವರ್ಷನ್‌ನಲ್ಲಿ ಚಿತ್ರವನ್ನು ಮತ್ತೆ ತೆರೆಗೆ ತರುವುದಾಗಿ ಚಿತ್ರತಂಡ ಹೇಳಿದೆ. ಅಭಿಮಾನಿಗಳು ಕೂಡ ಅದಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ.

More from Filmibeat

English summary
20 Years of ‘Jogi’: The Film That Redefined Craze in Kannada Cinema
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X