twitter
    For Quick Alerts
    ALLOW NOTIFICATIONS  
    For Daily Alerts

    ಈ ವರ್ಷ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಕನ್ನಡ ಸಿನಿಮಾಗಳಿವು

    |

    ಈ ವರ್ಷ ಕನ್ನಡ ಸಿನಿ ಜಗತ್ತಿನಲ್ಲಿ ಅನೇಕ ಚಿತ್ರಗಳು ಸದ್ದು ಮಾಡಿವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎನ್ನುವ ವಿಚಾರ ಒಂದೆಡೆ ಆದರೆ, ಇನ್ನು ಕೆಲವು ಸಿನಿಮಾಗಳು ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಲೂಟಿ ಮಾಡಿ ಟಾಪ್ ಆಫ್ ದಿ ಸ್ಯಾಂಡಲ್ ವುಡ್ ಆಗಿವೆ. ಈ ವರ್ಷ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡಿದ ಚಿತ್ರಗಳ ಪೈಕಿ ಸ್ಟಾರ್ ನಟರ ಚಿತ್ರಗಳೆ ಹೆಚ್ಚು ಇವೆ.

    ಹಾಗಾದ್ರೆ ಕನ್ನಡದಲ್ಲಿ ಅತೀ ಹಚ್ಚು ಕಲೆಕ್ಷನ್ ಮಾಡಿ ಟಾಪ್ ಲಿಸ್ಟ್ ನಲ್ಲಿ ಇರುವ ಚಿತ್ರಗಳು ಯಾವುವು? ಕೋಟಿ ಕ್ಲಬ್ ಸೇರಿದ ಚಿತ್ರಗಳ ಸಂಖ್ಯೆ ಕಡಿಮೆಯಾದರು ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ವಿವರ ಇಲ್ಲದೆ. ಕಲೆಕ್ಷನ್ ವಿಚಾರದಲ್ಲಿ ಅಧಿಕೃತವಾಗಿ ಚಿತ್ರತಂಡ ಎಲ್ಲಿಯೂ ಹೇಳಿಕೊಂಡಿಲ್ಲವಾದರು ಮೂಲಗಳ ಪ್ರಕಾರ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ವಿವರ ಇಲ್ಲಿದೆ.

    2019ರಲ್ಲಿ ಅತಿ ಹೆಚ್ಚು ದುಡ್ಡು ಬಾಚಿದ ಬಾಲಿವುಡ್ ಚಿತ್ರಗಳು2019ರಲ್ಲಿ ಅತಿ ಹೆಚ್ಚು ದುಡ್ಡು ಬಾಚಿದ ಬಾಲಿವುಡ್ ಚಿತ್ರಗಳು

    ನಿಖಿಲ್-ಸೀತರಾಮ ಕಲ್ಯಾಣ

    ನಿಖಿಲ್-ಸೀತರಾಮ ಕಲ್ಯಾಣ

    ನಿಖಿಲ್ ಕುಮಾರಸ್ವಾಮಿ ಅಭಿನಯದ ಸೀತಾರಾಮ ಕಲ್ಯಾಣ ಸಿನಿಮಾ ಜನವರಿಯಲ್ಲಿ ರಿಲೀಸ್ ಆಗಿದೆ. ನಿರ್ದೇಶಕ ಎ.ಹರ್ಷ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ನಿಖಿಲ್ ಕುಮಾರಸ್ವಾಮಿಗೆ ನಾಯಕಿಯಾಗಿ ನಟಿ ರಚಿತಾ ರಾಮ್ ಕಾಣಿಸಿಕೊಂಡಿದ್ದಾರೆ. ಮೂಲಗಳ ಪ್ರಕಾರ ಮತ್ತು ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ ಸೀತಾರಾಮ ಕಲ್ಯಾಣ 20 ಕೋಟಿ ಕಲೆಕ್ಷನ್ ಮಾಡಿದೆಯಂತೆ.

    ವರ್ಷವೆಲ್ಲಾ ಸುದ್ದಿಯಲ್ಲಿದ್ದರೂ ನಿರಾಸೆ ಮಾಡಿದ ಸ್ಟಾರ್ ಗಳುವರ್ಷವೆಲ್ಲಾ ಸುದ್ದಿಯಲ್ಲಿದ್ದರೂ ನಿರಾಸೆ ಮಾಡಿದ ಸ್ಟಾರ್ ಗಳು

    ಪುನೀತ್- ನಟಸಾರ್ವಭೌಮ

    ಪುನೀತ್- ನಟಸಾರ್ವಭೌಮ

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಸಿನಿಮಾ ಕೂಡ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್ ನಲ್ಲಿದೆ. ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ 'ನಟಸಾರ್ವಭೌಮ' 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ನಟಸಾರ್ವಭೌಮ ನಿರ್ದೇಶಕ ಪವನ್ ಒಡೆಯರ್ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಪುನೀತ್ ಜೊತೆಗೆ ನಾಯಕಿಯರಾಗಿ ಮಲಯಾಳಂ ನಟಿ ಅನುಪಮ ಮತ್ತು ರಚಿತಾ ರಾಮ್ ಕಾಣಿಸಿಕೊಂಡಿದ್ದರು. ನಟಸಾರ್ವಭೌಮ ಚಿತ್ರದ ಮೂಲಕ ಅನುಪಮಾ ಮೊದಲ ಬಾರಿಗೆ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದರು.

    ರಿಷಬ್ ಶೆಟ್ಟಿ- ಬೆಲ್ ಬಾಟಮ್

    ರಿಷಬ್ ಶೆಟ್ಟಿ- ಬೆಲ್ ಬಾಟಮ್

    ನಿರ್ದೇಶಕ ರಿಷಬ್ ಶೆಟ್ಟಿ ಮೊದಲ ಬಾರಿಗೆ ನಾಯಕನಾಗಿ ಮಿಂಚಿದ ಸಿನಿಮಾ. ನಿರ್ದೇಶಕ ಜಯತೀರ್ಥ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾ. ಈ ವರ್ಷ ಶತದಿನೋತ್ಸವ ಆಚರಿಸಿದ ಕನ್ನಡ ಮೊದಲ ಸಿನಿಮಾ. ವಿಶೇಷ ಅಂದರೆ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 100 ದಿನ ಪೂರೈಸದ ಸಿನಿಮಾ ಎಂಬ ಖ್ಯಾತಿಗಳಿಸಿದೆ. ಕನ್ನಡ ಚಿತ್ರಾಭಿಮಾನಿಗಳ ಮನಗೆದ್ದ 'ಬೆಲ್ ಬಾಟಮ್' ಅಧಿಕೃತವಾಗಿ ಎಷ್ಟು ಗಳಿಕೆ ಮಾಡಿದೆ ಎನ್ನುವ ಮಾಹಿತಿ ಇಲ್ಲ. ಆದರೆ ಈ ವರ್ಷ ಅತೀ ಹೆಚ್ಚು ಗಳಿಕೆ ಮಾಡಿದ ಸಿನಿಮಾಗಳ ಪೈಕಿ ಇದೂ ಒಂದು.

    ಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಹೊಸ ನಟ-ನಟಿಯರಿವರುಈ ವರ್ಷ ಕನ್ನಡ ಚಿತ್ರರಂಗದಲ್ಲಿ ಸದ್ದು ಮಾಡಿದ ಹೊಸ ನಟ-ನಟಿಯರಿವರು

    ದರ್ಶನ್- ಯಜಮಾನ

    ದರ್ಶನ್- ಯಜಮಾನ

    ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೆ ಖ್ಯಾತಿಗಳಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಯಜಮಾನ ಸಿನಿಮಾ ಕೂಡ ಉತ್ತಮ ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ. ಈ ವರ್ಷ 100 ದಿನ ಪೂರೈಸಿದ ಸಿನಿಮಾಗಳಲ್ಲಿ ಯಜಮಾನ ಸಿನಿಮಾ ಒಂದು. ಅಭಿಮಾನಿಗಳ ಮನಗೆದ್ದಿರುವ ಯಜಮಾನ ಸಿನಿಮಾ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.

    ದರ್ಶನ್- ಕುರುಕ್ಷೇತ್ರ

    ದರ್ಶನ್- ಕುರುಕ್ಷೇತ್ರ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಕುರುಕ್ಷೇತ್ರ ಸಿನಿಮಾ ಈ ವರ್ಷದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಪಟ್ಟಿಯಲ್ಲಿ ಇದೆ. ಮೂಲಗಳ ಪ್ರಕಾರ ಕುರುಕ್ಷೇತ್ರ 100 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿಲ್ಲ. ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರಗಳ ಪೈಕಿ ಕುರುಕ್ಷೇತ್ರ ಟಾಪ್ ನಲ್ಲಿ ಇದೆ.

    ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?ವರ್ಷದ 'ಸಕ್ಸಸ್ ಫುಲ್ ನಿರ್ದೇಶಕ' ಪಟ್ಟ ಯಾರಿಗೆ ಸಿಗಬಹುದು?

    ಸುದೀಪ್- ಪೈಲ್ವಾನ್

    ಸುದೀಪ್- ಪೈಲ್ವಾನ್

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಈ ವರ್ಷ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾದಲ್ಲಿ ಒಂದು. ಮೂಲಗಳ ಪ್ರಕಾರ ಪೈಲ್ವಾನ್ 60 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಪೈರಸಿ ಸಮಸ್ಯೆಯ ನಡುವೆಯೂ ಪೈಲ್ವಾನ್ ಅಖಾಡದಲ್ಲಿ ಗೆದ್ದು ಬೀಗಿದ್ದಾನೆ. ಪೈಲ್ವಾನ್ ಕೃಷ್ಣ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ.

    ಶ್ರೀಮುರಳಿ- ಭರಾಟೆ

    ಶ್ರೀಮುರಳಿ- ಭರಾಟೆ

    ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಭರಾಟೆ ಸಿನಿಮಾ ಕೂಡ ಅತೀ ಹೆಚ್ಚು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಅಭಿಮಾನಿಗಳ ನಿರೀಕ್ಷೆ ಮಟ್ಟ ಮುಟ್ಟುವಲ್ಲಿ ಭರಾಟೆ ವಿಫಲವಾದರು ಕಲೆಕ್ಷನ್ ವಿಚಾರದಲ್ಲಿ ಧೂಳ್ ಎಬ್ಬಿಸಿದೆ ಎಂದು ಹೇಳಾಗುತ್ತಿದೆ. ಮೂಲಗಳ ಪ್ರಕಾರ ಭರಾಟೆ 25 ರಿಂದ 30 ಕೋಟಿ ಕಲೆಕ್ಷೆನ್ ಮಾಡಿದೆ ಎಂದು ಹೇಳಲಾಗುತ್ತಿದೆ.

    3 ದಿನದ ಕಲೆಕ್ಷನ್ ಎಷ್ಟು?: ಬಾಕ್ಸ್ ಆಫೀಸ್ ನಲ್ಲಿ ಗೆದ್ನಾ 'ಒಡೆಯ'?3 ದಿನದ ಕಲೆಕ್ಷನ್ ಎಷ್ಟು?: ಬಾಕ್ಸ್ ಆಫೀಸ್ ನಲ್ಲಿ ಗೆದ್ನಾ 'ಒಡೆಯ'?

    ದರ್ಶನ್- ಒಡೆಯ

    ದರ್ಶನ್- ಒಡೆಯ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾ ರಿಲೀಸ್ ಆಗಿ ನಾಲ್ಕು ದಿನಗಳಾಗಿವೆ. ನಾಲ್ಕು ದಿನದ ಕಲೆಕ್ಷನ್ ನೋಡುವುದಾದರೆ 12 ರಿಂದ 15 ಕೋಟಿ ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಒಡೆಯ ರಿಮೇಕ್ ತಮಿಳು ಸಿನಿಮಾದ ರಿಮೇಕ್. ದರ್ಶನ್ ಅವರ ಯಜಮಾನ ಮತ್ತು ಕುರುಕ್ಷೇತ್ರ ಚಿತ್ರಗಳಿಗೆ ಹೋಲಿಸಿದರೆ ಒಡೆಯ ಕಲೆಕ್ಷನ್ ಕಮ್ಮಿಯಾಗಿದೆ.

    English summary
    2019 flashback: Highest Collection Kannada Movies in 2019. Kurukshetra, pailwan, Yajamana and more movies are Highest collection in 2019.
    Monday, December 16, 2019, 18:22
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X