ಈ ವರ್ಷ ಟ್ವಿಟ್ಟರ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು, ಯಾವುದು ಟಾಪ್?

ಕೊರೊನಾ ವರ್ಷದಲ್ಲಿ ಹೆಚ್ಚು ಸಿನಿಮಾಗಳು ತೆರೆಕಂಡಿಲ್ಲ. ಲೆಕ್ಕಾಚಾರದಂತೆ 2020ರಲ್ಲಿ ಬಿಡುಗಡೆಯಾಗಬೇಕಿದ್ದ ಸಿನಿಮಾಗಳು ಮುಂದಿನ ವರ್ಷಕ್ಕೆ ಮುಂದೂಡಿವೆ. ಕೆಲವು ಚಿತ್ರಗಳು ಒಟಿಟಿ ಮೂಲಕ ಇದೇ ವರ್ಷ ಪ್ರೇಕ್ಷಕರೆದುರು ಬಂದಿದೆ. ಇದೆಲ್ಲದರ ನಡುವೆ ಕೆಲವು ಸ್ಟಾರ್ ನಟರ ಚಿತ್ರಗಳು ವರ್ಷಪೂರ್ತಿ ಟ್ವಿಟ್ಟರ್‌ನಲ್ಲಿ ಚರ್ಚೆಯಲ್ಲಿತ್ತು.

ಹಾಗಾಗಿ ನಿರ್ದಿಷ್ಟ ಸಿನಿಮಾ ಕುರಿತು ಹೆಚ್ಚು ಬಾರಿ ಟ್ವೀಟ್ ಆಗಿವೆ. 2020ರಲ್ಲಿ ಯಾವ ಚಿತ್ರದ ಬಗ್ಗೆ ಟ್ವಿಟ್ಟರ್‌ನಲ್ಲಿ ಹೆಚ್ಚು ಟ್ವೀಟ್ ಆಗಿದೆ ಎಂಬ ಪಟ್ಟಿಯಲ್ಲಿ ಟ್ವಿಟ್ಟರ್ ಇಂಡಿಯಾ ಪ್ರಕಟ ಮಾಡಿದೆ. ಈ ಪಟ್ಟಿಯಲ್ಲಿ ತಮಿಳು ಮತ್ತು ತೆಲುಗು ಸಿನಿಮಾಗಳು ಪರಾಕ್ರಮ ಮೆರೆದಿದೆ. ಕನ್ನಡದಿಂದಲೂ ಒಂದು ಸಿನಿಮಾ ಇದೆ ಎಂಬ ಸ್ಯಾಂಡಲ್‌ವುಡ್ ಪ್ರೇಕ್ಷಕರು ಸಮಾಧಾನ ಪಡಬಹುದು. ಮುಂದೆ ಓದಿ...

10 ರಜನಿ 'ದರ್ಬಾರ್'

10 ರಜನಿ 'ದರ್ಬಾರ್'

ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಎಆರ್ ಮುರುಗದಾಸ್ ಕಾಂಬಿನೇಷನ್‌ನಲ್ಲಿ ಮೂಡಿ ಬಂದ ಸಿನಿಮಾ ದರ್ಬಾರ್. ಎರಡು ದಶಕದ ಬಳಿಕ ರಜನಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಮೂಡಿಸಿತ್ತು. ನಿರೀಕ್ಷೆಯಂತೆ ಸಿನಿಮಾ ಸಹ ಯಶಸ್ಸು ಕಂಡಿತ್ತು. ದರ್ಬಾರ್ ಸಿನಿಮಾ 2020 ರ ಜನವರಿ 9 ರಂದು ರಿಲೀಸ್ ಆಗಿತ್ತು. ಈ ವರ್ಷ ಟ್ವಿಟ್ಟರ್‌ನಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದೆ.

9 ಕೆಜಿಎಫ್ ಚಾಪ್ಟರ್ 2

9 ಕೆಜಿಎಫ್ ಚಾಪ್ಟರ್ 2

ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿರುವ ಕೆಜಿಎಫ್ ಚಾಪ್ಟರ್ 2 ಈ ವರ್ಷದ ಬಿಗ್ಗೆಸ್ಟ್ ಸಿನಿಮಾ ಆಗಿತ್ತು. ಕೊರೊನಾ ಕಾರಣದಿಂದ ಈ ವರ್ಷ ತೆರೆಗೆ ಬರಲಿಲ್ಲ. ಆದರೂ ಈ ಚಿತ್ರದ ಬಗ್ಗೆ ಭಾರತೀಯ ಸಿನಿಮಾ ಅಭಿಮಾನಿಗಳು ಕುತೂಹಲದಿಂದ ಕಾಯ್ತಿದ್ದಾರೆ. ಸದ್ಯಕ್ಕೆ ಕೆಜಿಎಫ್ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಮುಂದಿನ ವರ್ಷದ ಮೊದಲಾರ್ಧದಲ್ಲಿ ತೆರೆಗೆ ಬರಲಿದೆ. ಟ್ವಿಟ್ಟರ್‌ನಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಕೆಜಿಎಫ್ 2 ಒಂಬತ್ತನೇ ಸ್ಥಾನದಲ್ಲಿದೆ.

8 ಸರಿಲೇರು ನೀಕೆವ್ವರು

8 ಸರಿಲೇರು ನೀಕೆವ್ವರು

ಮಹೇಶ್ ಬಾಬು ಮತ್ತು ರಶ್ಮಿಕಾ ಮಂದಣ್ಣ ನಟಿನೆಯಲ್ಲಿ ತೆರೆಕಂಡಿದ್ದ ಸರಿಲೇರು ನೀಕೆವ್ವರು ಸಿನಿಮಾ ಈ ವರ್ಷ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಏಂಟನೇ ಸ್ಥಾನದಲ್ಲಿದೆ. ಜನವರಿ 11ನೇ ತಾರೀಖು ಈ ಸಿನಿಮಾ ಬಿಡುಗಡೆಯಾಗಿತ್ತು. ಬಾಕ್ಸ್ ಆಫೀಸ್‌ನಲ್ಲಿ ಸಕ್ಸಸ್ ಕಂಡಿತ್ತು.

7 ಪುಷ್ಪ

7 ಪುಷ್ಪ

ಅಲ್ಲು ಅರ್ಜುನ್ ಮತ್ತು ಸುಕುಮಾರ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಪುಷ್ಪ ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿರುವ ಚಿತ್ರ. ಸದ್ಯ ಚಿತ್ರೀಕರಣ ನಡೆಯುತ್ತಿದ್ದು, ಅಲ್ಲು ಅರ್ಜುನ್ ಅವರ ಗೆಟಪ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಪುಷ್ಪ ಏಳನೇ ಸ್ಥಾನದಲ್ಲಿದೆ

6 ಆರ್ ಆರ್ ಆರ್

6 ಆರ್ ಆರ್ ಆರ್

ರಾಜಮೌಳಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಮಲ್ಟಿಸ್ಟಾರ್ ಸಿನಿಮಾ ಆರ್ ಆರ್ ಆರ್ ಮುಂದಿನ ವರ್ಷ ಬಿಡುಗಡೆಯಾಗಲಿದೆ. ಜೂ ಎನ್ ಟಿ ಆರ್ ಮತ್ತು ರಾಮ್ ಚರಣ್ ಒಟ್ಟಿಗೆ ನಟಿಸುತ್ತಿದ್ದಾರೆ. ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಆರ್ ಆರ್ ಆರ್ ಆರನೇ ಸ್ಥಾನದಲ್ಲಿದೆ

5 ಸೂರರೈ ಪೊಟ್ರು

5 ಸೂರರೈ ಪೊಟ್ರು

ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲು ಕಾಯದೇ ಒಟಿಟಿಯಲ್ಲಿ ರಿಲೀಸ್ ಆಗಿ ಯಶಸ್ಸು ಕಂಡ ಚಿತ್ರ ಸೂರರೈ ಪೊಟ್ರು. ಸೂರ್ಯ ನಟಿಸಿದ್ದ ಈ ಚಿತ್ರ ದೊಡ್ಡ ಸಕ್ಸಸ್ ಪಡೆದುಕೊಂಡಿತ್ತು. ನವೆಂಬರ್ 12 ರಂದು ಅಮೇಜಾನ್ ಪ್ರೈಮ್‌ನಲ್ಲಿ ಸಿನಿಮಾ ಪ್ರದರ್ಶನ ಕಂಡಿತ್ತು. ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಆರ್ ಆರ್ ಆರ್ ಐದನೇ ಸ್ಥಾನದಲ್ಲಿದೆ.

4 ಸರ್ಕಾರು ವಾರಿ ಪಾಟ

4 ಸರ್ಕಾರು ವಾರಿ ಪಾಟ

ಮಹೇಶ್ ಬಾಬು ನಟಿಸುತ್ತಿರುವ ಸರ್ಕಾರು ವಾರಿ ಪಾಟ ಬಿಡುಗಡೆಗೂ ಮುಂಚೆ ದೊಡ್ಡ ಮಟ್ಟದ ಬಿಸಿನೆಸ್ ಮಾಡಿದೆ. ಡಿಜಿಟಲ್ ಹಕ್ಕು, ಸ್ಯಾಟ್‌ಲೈಕ್ ಹಕ್ಕು ಭಾರಿ ಬೆಲೆಗೆ ಸೇಲ್ ಆಗಿದೆ. ಈ ಸಿನಿಮಾ ಇನ್ನು ಶೂಟಿಂಗ್ ಸಹ ಆರಂಭಿಸಿಲ್ಲ. ಆದರೂ 2020ರಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ಆರ್ ಆರ್ ಆರ್ ನಾಲ್ಕನೇ ಸ್ಥಾನದಲ್ಲಿದೆ.

3 ವಲಿಮೈ

3 ವಲಿಮೈ

ನೇರ್ಕೊಂಡ ಪಾರ್ವೆ ಸಿನಿಮಾ ಬಳಿಕ ಅಜಿತ್ ನಟಿಸುತ್ತಿರುವ ಸಿನಿಮಾ ವಲಿಮೈ. ಮುಂದಿನ ವರ್ಷ ಈ ಚಿತ್ರ ಬಿಡುಯಾಗಲಿದೆ. 2020ರಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ವಲಿಮೈ ಮೂರನೇ ಸ್ಥಾನದಲ್ಲಿದೆ.

2 ವಕೀಲ್ ಸಾಬ್

2 ವಕೀಲ್ ಸಾಬ್

ಪವನ್ ಕಲ್ಯಾಣ್ ಕಂಬ್ಯಾಕ್ ಚಿತ್ರ ಎಂಬ ಕಾರಣಕ್ಕೆ 'ವಕೀಲ್ ಸಾಬ್' ಸಿನಿಮಾ ಭಾರಿ ಚರ್ಚೆಯಲ್ಲಿದೆ. ಮುಂದಿನ ವರ್ಷದ ಆರಂಭದಲ್ಲಿ ತೆರೆಕಾಣಲಿದೆ. 2020ರಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ವಕೀಲ್ ಸಾಬ್ ಎರಡನೇ ಸ್ಥಾನದಲ್ಲಿದೆ.

1 ಮಾಸ್ಟರ್

1 ಮಾಸ್ಟರ್

2020ರಲ್ಲಿ ಹೆಚ್ಚು ಟ್ವೀಟ್ ಆದ ಸಿನಿಮಾಗಳ ಪಟ್ಟಿಯಲ್ಲಿ ವಿಜಯ್ ನಟನೆಯ ಮಾಸ್ಟರ್ ಮೂರನೇ ಸ್ಥಾನದಲ್ಲಿದೆ. ಲೋಕೇಶ್ ಕನಕರಾಜ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಮಾಸ್ಟರ್ ಶೂಟಿಂಗ್ ಕಂಪ್ಲೀಟ್ ಮಾಡಿದೆ. ಈ ಚಿತ್ರದಲ್ಲಿ ವಿಜಯ್ ಮತ್ತು ವಿಜಯ್ ಸೇತುಪತಿ ಒಟ್ಟಿಗೆ ನಟಿಸುತ್ತಿದ್ದಾರೆ.

More from Filmibeat

English summary
Year End Special: 2020 Most Tweeted About Movies.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X