2020: ಅತಿ ಹೆಚ್ಚು ಟ್ವೀಟ್ ಆದ ಹತ್ತು ನಟಿಯರಲ್ಲಿ ಒಬ್ಬರೇ ಕನ್ನಡತಿ!

ಇದು ಸೋಷಿಯನ್ ಮೀಡಿಯಾ ಜಮಾನಾ. ನಟ-ನಟಿಯರ ಮಾರುಕಟ್ಟೆ ಮೌಲ್ಯವನ್ನು ಅವರ ಸಾಮಾಜಿಕ ಜಾಲತಾಣ ಹಿಂಬಾಲಕರ ಸಂಖ್ಯೆಯಿಂದಲೂ ಅಳೆಯಲಾಗುತ್ತಿದೆ.

ಸಿನಿಮಾಗಳ, ಬ್ರ್ಯಾಂಡ್‌ಗಳ ಪ್ರಚಾರದಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ಹೆಚ್ಚು ಅವಲಂಬಿಸಲಾಗಿದೆ. ಅನೇಕ ಜಾಹೀರಾತು ಸಂಸ್ಥೆಗಳು, ಕಾರ್ಪೊರೇಟ್ ನಿರ್ಮಾಣ ಸಂಸ್ಥೆಗಳು, ನಟ-ನಟಿಯರ ಸೋಷಿಯಲ್ ಮೀಡಿಯಾ ಹಿಂಬಾಲಕರ ಸಂಖ್ಯೆ ನೋಡಿ ಆಯ್ಕೆ ಮಾಡುವ ಪರಿಪಾಠ ಬೆಳೆಸಿಕೊಂಡಿವೆ.

ನಟ-ನಟಿಯರು ಚೆನ್ನಾಗಿ ನಟಿಸುವ ಜೊತೆ-ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವುದು ಸಹ ಅಷ್ಟೇ ಅವಶ್ಯಕವಾಗಿರುವ ಕಾಲಘಟ್ಟವಿದು. ಈ ವರ್ಷ ಟ್ವಿಟ್ಟರ್‌ನಲ್ಲಿ ಅತಿ ಹೆಚ್ಚು ಟ್ವೀಟ್‌ ಆದ ದಕ್ಷಿಣ ಭಾರತ ನಟ-ನಟಿಯರ ಪಟ್ಟಿಯನ್ನು ಟ್ವಿಟ್ಟರ್ ಇಂಡಿಯಾ ಬಿಡುಗಡೆ ಮಾಡಿದೆ. ಅತಿ ಹೆಚ್ಚು ಟ್ವೀಟ್ ಆದ ನಾಯಕಿಯರ ಪಟ್ಟಿಯಲ್ಲಿ ಒಬ್ಬರು ಮಾತ್ರವೇ ಕನ್ನಡತಿ ಇದ್ದಾರೆ ಅವರೇ ರಶ್ಮಿಕಾ ಮಂದಣ್ಣ. ಇಲ್ಲಿದೆ ನೋಡಿ ಟಾಪ್ ಹತ್ತು ನಟಿಯರ ಪಟ್ಟಿ.

10) ನಟಿ ತ್ರಿಶಾ ಗೆ ಹತ್ತನೇ ಸ್ಥಾನ

10) ನಟಿ ತ್ರಿಶಾ ಗೆ ಹತ್ತನೇ ಸ್ಥಾನ

ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ನಟಿ ತ್ರಿಷಾ ಬಗ್ಗೆ ಹಲವಾರು ಮಂದಿ ಈ ವರ್ಷ ಟ್ವೀಟ್ ಮಾಡಿದ್ದಾರೆ. ಟಾಪ್ ಹತ್ತರ ಪಟ್ಟಿಯಲ್ಲಿ ತ್ರಿಶಾ ಕೊನೆಯ ಸ್ಥಾನದಲ್ಲಿದ್ದಾರೆ.

9) ಶ್ರುತಿ ಹಾಸನ್ ಗೆ ಒಂಬತ್ತನೇ ಸ್ಥಾನ

9) ಶ್ರುತಿ ಹಾಸನ್ ಗೆ ಒಂಬತ್ತನೇ ಸ್ಥಾನ

ಶ್ರುತಿ ಹಾಸನ್ ಕೊರೊನಾ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ತಾವು ಮದ್ಯ ವ್ಯಸನದಿಂದ ಪಾರಾದ ಬಗ್ಗೆ, ಪ್ಲಾಸ್ಟಿಕ್ ಸರ್ಜರಿಗೆ ಒಳಗಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಹಂಚಿಕೊಂಡಿದ್ದರು. ಕೊರೊನಾದಿಂದ ಹಾಸನ್ ಕುಟುಂಬ ಕೆಲ ತಿಂಗಳುಗಳು ಬೇರೆ-ಬೇರೆಯಾಗಿ ಬದುಕಬೇಕಾಯಿತು ಎಂಬ ಬಗ್ಗೆ ಬರೆದುಕೊಂಡಿದ್ದರು. ಇತ್ತೀಚೆಗೆ ಕೊರೊನಾ ನಿಯಮ ಪಾಲಿಸದ್ದಕ್ಕೆ ಚಿತ್ರೀಕರಣ ಸೆಟ್‌ನಿಂದ ಹೊರಬಂದ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು ಶ್ರುತಿ ಹಾಸನ್.

8) ರಾಕುಲ್ ಪ್ರೀತ್ ಸಿಂಗ್

8) ರಾಕುಲ್ ಪ್ರೀತ್ ಸಿಂಗ್

ತೆಲುಗು ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿರುವ ರಾಕುಲ್ ಪ್ರೀತ್ ಸಿಂಗ್, ಡ್ರಗ್ಸ್ ಪ್ರಕರಣದಿಂದಾಗಿ ಈ ವರ್ಷ ಸುದ್ದಿಯಲ್ಲಿದ್ದರು. ರಾಕುಲ್ ಪ್ರೀತ್ ಸಿಂಗ್, 'ಲಾಕ್‌ ಡೌನ್ ಸಮಯದಲ್ಲಿ ಮದ್ಯ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ' ಎಂದು ಹೇಳಲ್ಪಟ್ಟ ವಿಡಿಯೋ ಒಂದನ್ನು ಹರಿಬಿಡಲಾಗಿತ್ತು, ಈ ವಿಡಿಯೋ ಸಹ ಸಖತ್ ವೈರಲ್ ಆಗಿತ್ತು. ನಂತರ ಡ್ರಗ್ಸ್ ಪ್ರಕರಣದಲ್ಲಿ ರಾಕುಲ್ ಹೆಸರು ಕೇಳಿಬಂದಿತ್ತು, ಎನ್‌ಸಿಬಿ ವಿಚಾರಣೆಗೆ ಸಹ ರಾಕುಲ್ ಹಾಜರಾಗಿದ್ದರು.

7) ತಮನ್ನಾ ಭಾಟಿಯಾಗೆ ಏಳನೇ ಸ್ಥಾನ

7) ತಮನ್ನಾ ಭಾಟಿಯಾಗೆ ಏಳನೇ ಸ್ಥಾನ

ನಟಿ ತಮನ್ನಾ ಭಾಟಿಯಾ ಕೊರೊನಾ ಸಮಯದಲ್ಲಿ ತಮ್ಮ ಯೋಗಸಾನದ ಕಲೆಯನ್ನು ಟ್ವಿಟ್ಟರ್‌ನಲ್ಲಿ ಪ್ರದರ್ಶಿಸಿದ್ದರು. ಅಷ್ಟೇ ಅಲ್ಲದೆ, ತಮನ್ನಾಗೆ ಕೊರೊನಾ ಪಾಸಿಟಿವ್ ಆಗಿತ್ತು, ಆಗ ತಮನ್ನಾ ಗೆ ಶುಭ ಹಾರೈಕೆಗಳು ಬಂದಿದ್ದವು, ಇವೆಲ್ಲವೂ ತಮನ್ನಾ ರನ್ನು ಹೆಚ್ಚು ಟ್ವೀಟ್ ಆದ ನಟಿಯರ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರಿಸಿದೆ.

6) ಹೆಚ್ಚು ಚರ್ಚೆಯಲ್ಲಿದ್ದ ತಾಪ್ಸಿ ಪನ್ನು

6) ಹೆಚ್ಚು ಚರ್ಚೆಯಲ್ಲಿದ್ದ ತಾಪ್ಸಿ ಪನ್ನು

ಮೊದಲಿಗೆ ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದ, ಪ್ರಸ್ತುತ ಬಾಲಿವುಡ್‌ನಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ವರ್ಗ ಹೊಂದಿರುವ ತಾಪ್ಸಿ ಪನ್ನು ಆರನೇ ಸ್ಥಾನದಲ್ಲಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಸಕ್ರಿಯರಾಗಿರುತ್ತಾರೆ ತಾಪ್ನಿ ಪನ್ನು. ಕಂಗನಾ ಜೊತೆಗೆ ಟ್ವಿಟ್ಟರ್ ಜಗಳದಲ್ಲಿ ತೊಡಗಿಕೊಂಡಿದ್ದ ತಾಪ್ಸಿ ಪನ್ನು, ಆಗ ಹೆಚ್ಚು ಸುದ್ದಿಗೆ ಬಂದಿದ್ದರು. ಜೊತೆಗೆ ತಾಪ್ಸಿ ಪನ್ನು, ಸುಶಾಂತ್ ಪ್ರೇಯಸಿ ರಿಯಾ ಗೆ ಟ್ವಿಟ್ಟರ್‌ನಲ್ಲಿ ಬೆಂಬಲವನ್ನು ಸಹ ವ್ಯಕ್ತಪಡಿಸಿದ್ದರು. ಇದರಿಂದಲೂ ತಾಪ್ಸಿ ಬಗ್ಗೆ ಹೆಚ್ಚು ಚರ್ಚೆಗಳಾಗಿದ್ದವು.

5) ಸ್ಟಾರ್ ನಟರೊಂದಿಗೆ ಪೂಜಾ ಹೆಗ್ಡೆ

5) ಸ್ಟಾರ್ ನಟರೊಂದಿಗೆ ಪೂಜಾ ಹೆಗ್ಡೆ

ದಕ್ಷಿಣ ಭಾರತದ ದುಬಾರಿ ನಟಿ ಪೂಜಾ ಹೆಗ್ಡೆ ಐದನೇ ಸ್ಥಾನದಲ್ಲಿದ್ದಾರೆ. ಹಿಟ್ ಸಿನಿಮಾ ಅಲಾ ವೈಕುಂಟಪುರಂಲೊ ಬಳಿಕ, ಪ್ರಭಾಸ್, ಅಖಿಲ್ ಅಕ್ಕಿನೇನಿ, ಅಕ್ಷಯ್ ಕುಮಾರ್, ಸಲ್ಮಾನ್ ಖಾನ್ ಅಂಥಹಾ ಸ್ಟಾರ್‌ ಗಳ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹಾಗಾಗಿ ಅವರ ಬಗ್ಗೆ ಸಹಜವಾಗಿಯೇ ಹೆಚ್ಚು ಮಂದಿ ಟ್ವೀಟ್ ಮಾಡಿದ್ದಾರೆ. ಅಂದಹಾಗೆ ಪೂಜಾ ಹೆಗ್ಡೆ ಸಹ ಕರ್ನಾಟಕ ಮೂಲದವರು, ಆದರೆ ಕನ್ನಡದಲ್ಲಿ ಈವರೆಗೆ ನಟಿಸಿಲ್ಲ.

4) ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ

4) ಕರ್ನಾಟಕ ಕ್ರಶ್ ರಶ್ಮಿಕಾ ಮಂದಣ್ಣ

ಕನ್ನಡತಿ ನಟಿ ರಶ್ಮಿಕಾ ಮಂದಣ್ಣ ನಾಲ್ಕನೇ ಸ್ಥಾನದಲ್ಲಿದ್ದಾರೆ. ರಶ್ಮಿಕಾ ಮಂದಣ್ಣ ಟ್ವಿಟ್ಟರ್‌ನಲ್ಲಿ ಸಾಕಷ್ಟು ಸಕ್ರಿಯರಾಗಿರುತ್ತಾರೆ. ಹಲವು ವಿಡಿಯೋಗಳು, ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ, ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿರುತ್ತಾರೆ. ರಶ್ಮಿಕಾ ಅವರಿಗೆ ಟ್ರೋಲ್ ಹಾವಳಿಯೂ ತುಸು ಹೆಚ್ಚೇ ಇದೆ. ಒಟ್ಟಿನಲ್ಲಿ ರಶ್ಮಿಕಾ ಮಂದಣ್ಣ ಹೆಚ್ಚು ಟ್ವೀಟ್‌ ಮಾಡಲ್ಪಟ್ಟ ನಟಿಯರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ.

3) ಸಮಂತಾ ಬಗ್ಗೆ ಸಖತ್ ಚರ್ಚೆ

3) ಸಮಂತಾ ಬಗ್ಗೆ ಸಖತ್ ಚರ್ಚೆ

ದಕ್ಷಿಣ ಭಾರತದ ನಾಯಕನಟಿಯರಲ್ಲಿ ಹೆಚ್ಚು ಸಕ್ರಿಯರಾಗಿದ್ದ ನಟಿ ಸಮಂತಾ. ಬಿಗ್‌ ಬಾಸ್ ನಿರೂಪಿಸಿ ಸುದ್ದಿಯಾಗಿದ್ದ ಸಮಂತಾ, ಆಹಾ ಒಟಿಟಿಯಲ್ಲಿ ತಮ್ಮದೇ ಟಾಕ್-ಶೋ ನಡೆಸಿದರು. ಚಿರಂಜೀವಿ ಸೊಸೆಯೊಂದಿಗೆ ಸೇರಿ ಯೂಟ್ಯೂಬ್‌ನಲ್ಲಿ ಫಿಟ್‌ನೆಸ್ ತರಗತಿ ನಡೆಸಿದರು. ಪತಿಯೊಂದಿಗೆ ಮಾಲ್ಡೀವ್ಸ್‌ಗೆ ತೆರಳಿ ರಜೆಯ ಮಜೆ ಕಳೆದು ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇವೆಲ್ಲಾ ಕಾರಣಗಳಿಂದ ಸಮಂತಾ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚೆಯಲ್ಲಿದ್ದರು.

2) ನಟಿ ಕಾಜಲ್ ಅಗರ್ವಾಲ್

2) ನಟಿ ಕಾಜಲ್ ಅಗರ್ವಾಲ್

ಅಕ್ಟೋಬರ್ 30 ರಂದು ಗೌತಮ್ ಕಿಚಲು ಜೊತೆ ವಿವಾಹವಾದರು ನಟಿ ಕಾಜಲ್ ಅಗರ್ವಾಲ್. ಮದುವೆ ಕಾರಣದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದರು, ಮದುವೆ ಚಿತ್ರಗಳು, ಹನಿಮೂನ್ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು, ಚಿತ್ರಗಳು ಸಖತ್ ವೈರಲ್ ಸಹ ಆಗಿದ್ದವು.

1) ಮೊದಲ ಸ್ಥಾನದಲ್ಲಿ ನಟಿ ಕೀರ್ತಿ ಸುರೇಶ್

1) ಮೊದಲ ಸ್ಥಾನದಲ್ಲಿ ನಟಿ ಕೀರ್ತಿ ಸುರೇಶ್

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಹೆಚ್ಚು ಟ್ವೀಟ್ ಆದ ನಟಿಯರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಈ ವರ್ಷ ಕೀರ್ತಿ ನಟಿಸಿರುವ ಎರಡು ಸಿನಿಮಾಗಳು ಒಟಿಟಿಯಲ್ಲಿ ಬಿಡುಗಡೆ ಆಗಿದ್ದು, ಕೀರ್ತಿ ನಟನೆಗೆ ಮಾರುಹೋಗಿದ್ದಾರೆ ಸಿನಿ ಪ್ರೇಕ್ಷಕರು, ಹಾಗಾಗಿಯೇ ಸಾಮಾಜಿಕ ಜಾಲತಾಣಲ್ಲಿ ಅವರ ಬಗ್ಗೆ ಚರ್ಚೆ ಹೆಚ್ಚಾಗಿ ನಡೆದಿದೆ. ತಮ್ಮ ಸಿನಿಮಾಗಳ ಪೋಸ್ಟರ್‌ಗಳು ಹಂಚಿಕೊಳ್ಳುವುದು, ಗೆಳೆಯ-ಗೆಳತಿಯರಿಗೆ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡುವುದು ಇಂಥಹಾ ಪೋಸ್ಟ್‌ಗಳನ್ನೇ ಕೀರ್ತಿ ಸುರೇಶ್ ಹೆಚ್ಚಿಗೆ ಮಾಡುತ್ತಾರೆ. ಆದರೆ ಅವರ ಅಭಿಮಾನಿಗಳು ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಲ್ಲಿದ್ದಾರೆ, ಹಾಗಾಗಿ ಕೀರ್ತಿ ಸುರೇಶ್ ಈ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ.

More from Filmibeat

English summary
Here is the most tweeted about South Indian heroines list. Trisha is in last position, Keerty Suresh tops the list.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X