2023 Roundup: ಈ ವರ್ಷ ಐಷಾರಾಮಿ ಕಾರುಗಳನ್ನು ಖರೀದಿಸಿದ ನಟಿ ಮಣಿಯರು

ಇನ್ನು ಕೆಲವೇ ದಿನಗಳಲ್ಲಿ 2023 ಮುಗಿದು 2024ನೇ ವರ್ಷಕ್ಕೆ ಕಾಲಿಡಲಿದ್ದೆವೆ. ಈ ವರ್ಷದಲ್ಲಿ ಅನೇಕ ಸಿಹಿ ಮತ್ತು ಕಹಿ ಘಟನೆಗಳಿಗೆ ಸಾಕ್ಷಿಯಾಗಿದೆ. ಜೊತೆಗೆ ಅನೇಕ ನಟಿಮಣಿಯರು ತಮ್ಮ ಮನೆಗೆ ಹೊಸ ಐಷಾರಾಮಿ ಕಾರುಗಳನ್ನು ತಂದಿದ್ದಾರೆ. ದಸರಾ, ದೀಪಾವಳಿ ಹಬ್ಬಗಳನ್ನು ಐಷಾರಾಮಿ ಕಾರುಗಳೊಂದಿಗೆ ಆಚರಿಸಿದ್ದಾರೆ. ನಟಿ ಆಲಿಯಾ ಭಟ್‌, ಪೂಜಾ ಭಟ್, ಶ್ರದ್ಧಾ ಕಪೂರ್‌ ಸೇರಿದಂತೆ ಹಲವರು ಈ ಸಾಲಿನಲ್ಲಿ ಸೇರಿದ್ದಾರೆ.

2023 ರಲ್ಲಿ ಐಷಾರಾಮಿ ಕಾರುಗಳನ್ನು ಖರೀದಿಸಿದ ಬಾಲಿವುಡ್ ನಟಿಯರ ಪಟ್ಟಿ ಇಲ್ಲಿದೆ

ಆಲಿಯಾ ಭಟ್

ನಟಿ ಆಲಿಯಾ ಭಟ್‌ಗೆ ಈ ವರ್ಷ ಸಾಕಷ್ಟು ಖುಷಿ ನೀಡಿದೆ. ಸಂಜಯ್ ಲೀಲಾ ಬನ್ಸಾಲಿಯವರ 'ಗಂಗೂಬಾಯಿ ಕಥಿಯಾವಾಡಿ' ಚಿತ್ರಕ್ಕಾಗಿ ಚೊಚ್ಚಲ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಜೊತೆಗೆ ಹೊಸ ರೇಂಜ್ ರೋವರ್ ಆಟೋಬಯೋಗ್ರಫಿ LWB ಐಷಾರಾಮಿ ಎಸ್‌ಯುವಿಯನ್ನು ಖರೀದಿಸಿದ್ದಾರೆ. ಈ ಕಾರು 3 ಕೋಟಿಗೂ ಹೆಚ್ಚು ಮೌಲ್ಯ ಹೊಂದಿದೆ. ರೇಂಜ್ ರೋವರ್ ಕಾರ್ಪಾಥಿಯನ್ ಗ್ರೇ ಮಾಡೆಲ್ ಆಲಿಯಾ ಭಟ್‌ ಗ್ಯಾರೇಜ್ ಸೇರಿದೆ.

 2023 Roundup: Bollywood Actresses Who Bought Luxurious Cars in Year 2023

ಶ್ರದ್ಧಾ ಕಪೂರ್

ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರು ಈ ಬಾರಿಯ ದಸರಾ ಹಬ್ಬದ ಶುಭ ಸಂದರ್ಭದಲ್ಲಿ ಕೆಂಪು ಲಂಬೋರ್ಗಿನಿ ಹುರಾಕನ್ ಟೆಕ್ನಿಕಾವನ್ನು ಖರೀದಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಕತ್ ಫಾಲೋವರ್ಸ್ ಇರುವ ಅವರು ಹೊಸ ಕಾರಿಗೆ ಪೂಜೆ ಮಾಡಿ ಫೋಸ್ ಕೊಟ್ಟ ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದವು. ಇದರ ಜೊತೆಗೆ ಶಿಲ್ಪಾ ಶೆಟ್ಟಿ ನೀಡಿದ್ದ ದೀಪಾವಳಿ ಪಾರ್ಟಿಗೂ ತಮ್ಮ ಲಂಬೋರ್ಗಿನಿಯಲ್ಲಿ ಗ್ರ್ಯಾಂಡ್ ಎಂಟ್ರಿ ನೀಡಿದರು. ಈ ಕಾರಿನ ಮೌಲ್ಯ 4.04 ಕೋಟಿ ರೂಪಾಯಿಯಾಗಿದೆ.

ಜಾಕ್ವೆಲಿನ್ ಫರ್ನಾಂಡಿಸ್

ನಟಿ ಜಾಕ್ವೆಲಿನ್ ಫರ್ನಾಂಡಿಸ್ ಬಳಿ ಹಲವು ಕಾರುಗಳಿವೆ. ಈ ವರ್ಷವೂ ಹೊಸ ಗಾಡಿಯೊಂದು ಅವರ ಮನೆಯಂಗಳ ಸೇರಿದೆ. ಈ ವರ್ಷ ಅವರು ಹೊಸ BMW i7 ಎಲೆಕ್ಟ್ರಿಕ್ ಐಷಾರಾಮಿ ಸೆಡಾನ್ ಅನ್ನು ಖರೀದಿಸಿದ್ದಾರೆ. ಈ ಕಾರಿನ ಬೆಲೆ 2 ಕೋಟಿ ರೂಪಾಯಿಯಾಗಿದ್ದು, ಐಷಾರಾಮಿ ಕಾರಾಗಿದೆ.

ರಾಕುಲ್ ಪ್ರೀತ್ ಸಿಂಗ್

ಬಹುಭಾಷಾ ನಟಿ ರಾಕುಲ್ ಪ್ರೀತ್ ಸಿಂಗ್ ಅವರು ಕಪ್ಪು ಬಣ್ಣದ ಮರ್ಸಿಡಿಸ್ ಮೇಬ್ಯಾಕ್ GLS600 SUV ಅನ್ನು ತಮಗೆ ತಾವೆ ಉಡುಗೊರೆಯಾಗಿ ನೀಡಿದ್ದಾರೆ. ದೀಪಿಕಾ ಪಡುಕೋಣೆ, ಕೃತಿ ಸನೋನ್, ಅಜಯ್ ದೇವಗನ್ ಮತ್ತು ಅರ್ಜುನ್ ಕಪೂರ್ ಅವರಂತಹ ಸೆಲೆಬ್ರಿಟಿಗಳು ವಿಭಿನ್ನ ಮಾದರಿಯಲ್ಲಿ ಇದೇ ಬ್ರಾಂಡ್ ಕಾರ್ ಕೂಡ ಹೊಂದಿದ್ದಾರೆ.

 2023 Roundup: Bollywood Actresses Who Bought Luxurious Cars in Year 2023

ಪೂಜಾ ಹೆಗ್ಡೆ

ಕರಾವಳಿ ಬೆಡಗಿ ಪೂಜಾ ಹೆಗ್ಡೆ ಈ ವರ್ಷ 4 ಕೋಟಿ ರೂಪಾಯಿ ಮೌಲ್ಯದ ರೇಂಜ್ ರೋವರ್ ಐಷಾರಾಮಿ ಎಸ್‌ಯುವಿಯನ್ನು ತಮ್ಮ ಮನೆಗೆ ತಂದಿದ್ದಾರೆ. ಕಾಎಉ ಖರೀದಿಸುವಾಗ ನೀಲಿ ಬಣ್ಣದ ಸೂಟ್ ಧರಿಸಿ ಕ್ಯಾಮರಗಳಿಗೆ ಸಕತ್ ಖುಷಿಯಿಂದ ಅವರು ಫೋಸ್ ನೀಡಿದ್ದರು. ಇದೇ ಬ್ರಾಂಡ್‌ನ ಕಾರನ್ನು ಬಾಲಿವುಡ್ ಸೆಲೆಬ್ರಿಟಿಗಳಾದ ರಣಬೀರ್ ಕಪೂರ್, ಆದಿತ್ಯ ರಾಯ್ ಕಪೂರ್ ಮತ್ತು ಸೋನಮ್ ಕಪೂರ್ ಕೂಡ ಹೊಂದಿದ್ದಾರೆ.

ಚಾಹತ್ ಖನ್ನಾ

ನಟಿ ಚಾಹತ್ ಖನ್ನಾ ಈ ವರ್ಷ ಹೊದ ಬ್ಲಾಕ್ ಆಡಿಯನ್ನು ಮನೆಗೆ ಸ್ವಾಗತಿಸಿದ್ದಾರೆ. ಐಷಾರಾಮಿ ಕಪ್ಪು ಕಾರಿನ ಮಾಲೀಕರಾಗಿ ಈ ವರ್ಷವನ್ನು ನೆನಪಿನಲ್ಲಿರಿಸಿಕೊಂಡಿದ್ದಾರೆ. ನಟಿ Audi A6 ಕಾರನ್ನು ಖರೀದಿಸಿದ್ದಾರೆ. ಈ ಸಂದರ್ಭದ ವಿಡೀಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿ ಸಂಭ್ರಮ ಹಂಚಿಕೊಂಡಿದ್ದರು. ಇದರಲ್ಲಿ ಕಾರಿಗೆ ಪೂಜೆ ಮಾಡುತ್ತಿರುವುದು ಮತ್ತು ತಮ್ಮ ಮಗಳೊಂದಿಗೆ ಕೇಕ್ ಕತ್ತರಿಸಿರುವ ಕ್ಷಣಗಳಿವೆ.

More from Filmibeat

English summary
Actresses who bought luxury cars in 2023.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X