Year Ender 2023: ಈ ವರ್ಷ ತೆರೆ ಮೇಲೆ ಖಳನಟರಾಗಿ ಮೆರೆದು ಹೊಸ ಇಮೇಜ್ ಸೃಷ್ಟಿಸಿಕೊಂಡ ನಾಯಕ ನಟರು
ಪ್ರತಿ ವರ್ಷದಂತೆ ಈ ವರ್ಷದ ಸಿನಿಮಾರಂಗದಲ್ಲಿ ಅನೇಕ ಬದಲಾವಣೆಗಳಾಗಿವೆ. ಕೆಲವು ನಟ ನಟಿಯರು ತಮ್ಮ ಕಂಫರ್ಟ್ ಝೋನ್ ಬಿಟ್ಟು ಹೊರ ಬಂದಿದ್ದಾರೆ. ಬರೀ ನಾಯಕನ ಪಾತ್ರ ಮಾಡುತ್ತಿದ್ದವರು, ವಿಲನ್‌ಗಳಾಗಿ ಅಬ್ಬರಿಸಿದ್ದಾರೆ. ಅದರಲ್ಲಿ ಮುಖ್ಯವಾಗಿ ವಿಜಯ್ ಸೇತುಪತಿ, ಅರ್ಜುನ್ ರಾಂಪಾಲ್, ಬಾಬಿ ಡಿಯೋಲ್, ಇಮ್ರಾನ್ ಹಶ್ಮಿ, ಜಾನ್ ಅಬ್ರಹಾಂ ಕೂಡ ಸೇರಿದ್ದಾರೆ.
ಜವಾನ್‌ನಲ್ಲಿ ವಿಜಯ್ ಸೇತುಪತಿ ಖಳನಟನಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ನಟ ಶಾರುಖ್ ಖಾನ್ ಎದುರು ಅಬ್ಬರಿಸಿದ್ದರು. ಇವರ ಜೊತೆಗೆ ಅನೇಕ ನಾಯಕ ನಟರು ಈ ವರ್ಷ ಖಳನಟರಾಗಿ ತೆರೆ ಮೇಲೆ ಕಾಣಿಸಿಕೊಂಡಿದ್ದು, ಸಕತ್ ಇಂಪ್ಯಾಕ್ಟ್ ಮಾಡಿದ್ದಾರೆ. ಅವರ ಪಟ್ಟಿ ಇಲ್ಲಿದೆ.

'ಜವಾನ್' ಚಿತ್ರದಲ್ಲಿ ವಿಜಯ್ ಸೇತುಪತಿ
ತಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ, ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ನ್ಯಾಯ ಸಲ್ಲಿಸುವ ನಟ ವಿಜಯ್ ಸೇತುಪತಿ, ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖಡಕ್ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ನಟ ಶಾರುಖ್ ಖಾನ್ ನಟನೆಯ, ಅಟ್ಲಿ ನಿರ್ದೇಶನ ಆಕ್ಷನ್ ಥ್ರಿಲ್ಲರ್ 'ಜವಾನ್' ಸಿನಿಮಾದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ.
'ಅನಿಮಲ್' ನಲ್ಲಿ ಬಾಬಿ ಡಿಯೋಲ್
ಬಾಬಿ ಡಿಯೋಲ್ ಈ ವರ್ಷ ರಣಬೀರ್ ಕಪೂರ್ ಅಭಿನಯದ' ಅನಿಮಲ್' ಸಿನಿಮಾ ಮೂಲಕ ಮತ್ತೆ ವಿಲನ್ ಆಗಿ ಬಾಲಿವುಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಅವರ ಆಟಿಟ್ಯೂಡ್ ಮತ್ತು ಭಯಾನಕ ಸ್ಕ್ರೀನ್ ಪ್ರೆಸೆನ್ಸ್ ಜನರ ಗಮನ ಸೆಳೆದಿದೆ. ಅಬ್ರಾರ್ ಹಕ್ ಪಾತ್ರದಲ್ಲಿ ಸನ್ನಿ ಡಿಯೋಲ್ ಅವರ ಅಭಿನಯ ಉತ್ತಮ ವಿಮರ್ಶೆ ಪಡೆದಿದೆ.

'ಟೈಗರ್ 3' ಯಲ್ಲಿ ಇಮ್ರಾನ್ ಹಶ್ಮಿ
ಈ ವರ್ಷದ ಮತ್ತೊಂದು ಬ್ಲಾಕ್‌ಬಸ್ಟರ್ 'ಟೈಗರ್ 3' ಸಿನಿಮಾದಲ್ಲಿ ಸಲ್ಮಾನ್ ಖಾನ್‌ಗೆ ಪ್ರತಿಸ್ಪರ್ಧಿಯಾಗಿ ಇಮ್ರಾನ್ ಹಶ್ಮಿ ಕಾಣಿಸಿಕೊಂಡಿದ್ದಾರೆ. ಆತಿಶ್ ರೆಹಮಾನ್ ಅವರ ಈ ಅಕ್ಷನ್ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಮೊದಲ ಬಾರಿಗೆ ಖಳನಾಯಕನಾಗಿ ಅಬ್ಬರಿಸಿದ್ದಾರೆ.
'ಭಗವಂತ ಕೇಸರಿ' ಚಿತ್ರದಲ್ಲಿ ಅರ್ಜುನ್ ರಾಂಪಾಲ್
ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಅವರು 'ಭಗವಂತ್ ಕೇಸರಿ' ಸಿನಿಮಾ ಮೂಲಕ ಮೊದಲ ಬಾರಿಗೆ ತೆಲುಗು ಚಿತ್ರರಂಗಕ್ಕೆ ಖಳನಟನಾಗಿ ಎಂಟ್ರಿ ನೀಡಿದ್ದಾರೆ. ಭಗವಂತ್ ಕೇಸರಿ ಸಿನಿಮಾದಲ್ಲಿ ಖಳನಾಯಕ ರಾಹುಲ್ ಸಾಂಘ್ವಿಯ ಪಾತ್ರದಲ್ಲಿ ನಂದಮೂರಿ ಬಾಲಕೃಷ್ಣ ಎದುರು ನಟಿಸಿದ್ದಾರೆ. ಅರ್ಜುನ್ ರಾಂಪಾಲ್ ಸ್ಕ್ರೀನ್ ಪ್ರೆಸೆನ್ಸ್ ಮತ್ತು ಅಭಿನಯ ಅವರನ್ನು ಬುಹುಭಾಷಾ ತಾರೆ ಎಂಬುದನ್ನು ಸಾಬೀತುಪಡಿಸಿದೆ.
'ಪಠಾಣ್' ಚಿತ್ರದಲ್ಲಿ ಜಾನ್ ಅಬ್ರಹಾಂ
ಈ ವರ್ಷದ ಮೊದಲ ಬಾಲಿವುಡ್ ಬಿಡುಗಡೆ 'ಪಠಾಣ್' ಸಿನಿಮಾದಲ್ಲಿ ಜಾನ್ ಅಬ್ರಹಾಂ ಖಳನಾಯಕನಾಗಿ ಅಬ್ಬರಿಸಿದ್ದಾರೆ. ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಜೊತೆಗೆ ಪೈಪೋಟಿ ನೀಡಿದ್ದು ನಟ ಜಾನ್ ಅಬ್ರಹಾಂ. ಅವರ ಲುಕ್ ಮತ್ತು ಬಾಡಿ ಯುವ ಜನರನ್ನು ಸಕತ್ ಆಕರ್ಷಿಸಿತ್ತು. ತಾನು ನಾಯಕ ಮತ್ತು ಖಳ ನಾಯಕ ಎರಡು ಪಾತ್ರಗಳನ್ನು ಲೀಲಾಜಾಲವಾಗಿ ನಿಭಾಯಿಸಬಲ್ಲೆ ಎಂಬುದನ್ನು ಸಾರಿ ಹೇಳಿದ್ದರು.
'ಗದರ್ 2' ನಲ್ಲಿ ಮನೀಶ್ ವಾಧ್ವಾ
ಸೂಪರ್ ಹಿಟ್ 'ಗದರ್' ಸಿನಿಮಾದ ಸೀಕ್ವೆಲ್ 'ಗದರ್ 2' ಈ ವರ್ಷದ ಬ್ಲಾಕ್‌ಬ್ಲಸ್ಟರ್ ಹಿಟ್. ಈ ಸಿನಿಮಾದಲ್ಲಿ ಮನೀಶ್ ವಾಧ್ವಾ, ಸನ್ನಿ ಡಿಯೋಲ್‌ಗೆ ಪ್ರತಿಸ್ಪರ್ಧಿಯಾಗಿ ನಟಿಸಿದ್ದರು.


Click it and Unblock the Notifications











