ಈ 4 ಸ್ಟಾರ್ ಗಳು ನ್ಯಾಷನಲ್ ಲೆವೆಲ್ ಗೆ ಹೋಗಲು ಈ 4 ಸಿನಿಮಾಗಳೆ ಕಾರಣ

ಒಂದು ಸಿನಿಮಾದ ಪವರ್ ಯಾವ ಮಟ್ಟಿಗೆ ಇರುತ್ತದೆ ಎಂದು ತೋರಿಸಲು ಈ ನಾಲ್ಕು ಸಿನಿಮಾಗಳೆ ತಾಜಾ ಉದಾಹರಣೆ. ಆ ಸಿನಿಮಾಗಳೆ 'ಕೆಜಿಎಫ್', 'ಬಾಹುಬಲಿ' 'ಮಹಾನಟಿ' 'ಅರ್ಜುನ್ ರೆಡ್ಡಿ'.

ಈ ಸೌತ್ ಸಿನಿಮಾಗಳಲ್ಲಿ ಆಯಾ ಭಾಷೆಯ ಸ್ಟಾರ್ ಗಳು ನಟಿಸಿದ್ದರು. ಆದರೆ, ಈ ಸಿನಿಮಾಗಳು ಬಿಡುಗಡೆಯಾದ ಮೇಲೆ ಆ ಸ್ಟಾರ್ ಗಳು ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡರು. ಕನ್ನಡ ನಟ ಯಶ್, ತೆಲುಗು ನಟ ಪ್ರಭಾಸ್, ನಟ ವಿಜಯ್ ದೇವರಕೊಂಡ ಹಾಗೂ ನಟಿ ಕೀರ್ತಿ ಸುರೇಶ್ ಒಂದೇ ಸಿನಿಮಾದಿಂದ ದೇಶ ಮಟ್ಟದಲ್ಲಿ ಗುರುತಿಸಿಕೊಂಡರು.

ಈ ನಾಲ್ಕು ಸಿನಿಮಾಗಳು ಈ ನಾಲ್ಕು ಸೌತ್ ಸ್ಟಾರ್ ಕೆರಿಯರ್ ನಲ್ಲಿ ಎಂದೂ ಮರೆಯದ ಸಿನಿಮಾಗಳಾಗಿ ಉಳಿದುಕೊಂಡಿದೆ. ಈ ಸಿನಿಮಾಗಳು ಬಂದ ಮೇಲೆ ಅವರ ಸ್ಟಾರ್ ಡಮ್ ಎತ್ತರಕ್ಕೆ ಹೋಗಿದೆ.

'ಕೆಜಿಎಫ್' ನಿಂದ ಡಾನ್ ಆದ ರಾಕಿ

'ಕೆಜಿಎಫ್' ನಿಂದ ಡಾನ್ ಆದ ರಾಕಿ

'ಕೆಜಿಎಫ್' ಎಂಬ ಒಂದು ಸಿನಿಮಾ ರಾಕಿಂಗ್ ಸ್ಟಾರ್ ಕೆರಿಯರ್ ಅನ್ನು ಬದಲು ಮಾಡಿತು. ಕನ್ನಡ ನಟನಾಗಿದ್ದ ಯಶ್ ನ್ಯಾಷನಲ್ ಸ್ಟಾರ್ ಆದರು. ಹಿಂದಿ, ತೆಲುಗು, ತಮಿಳು, ಮಲೆಯಾಳಂ ಎಲ್ಲ ಭಾಷೆಗಳಲ್ಲಿಯೂ ಈಗ ಯಶ್ ಗೆ ಅಭಿಮಾನಿಗಳು ಇದ್ದಾರೆ. 'ಕೆಜಿಎಫ್' ಎಂಬ ಪವರ್ ಫುಲ್ ಸಿನಿಮಾ ಯಶ್ ಗೆ ದೊಡ್ಡ ಗೌರವ ತಂದುಕೊಟ್ಟಿದೆ.

'ಬಾಹುಬಲಿ'ಯಿಂದ ಹೆಚ್ಚಾಯ್ತು ಪ್ರಭಾಸ್ ಪವರ್

'ಬಾಹುಬಲಿ'ಯಿಂದ ಹೆಚ್ಚಾಯ್ತು ಪ್ರಭಾಸ್ ಪವರ್

'ಬಾಹುಬಲಿ' ಸಿನಿಮಾ ತೆಲುಗು ಇಂಡಸ್ಟ್ರಿಯ ಹೆಮ್ಮೆಯ ಸಿನಿಮಾ. ಈ ಸಿನಿಮಾದ ನಾಯಕ ಪ್ರಭಾಸ್. ಪ್ರಭಾಸ್ ಈ ಸಿನಿಮಾಗಾಗಿ ನೀಡಿದ್ದ ಡೆಡಿಕೇಶನ್ ಗೆ ನಿಜಕ್ಕೂ ಫಲ ಸಿಕ್ಕಿತು. ಸಿನಿಮಾ ದೊಡ್ಡ ಯಶಸ್ಸು ಪಡೆಯಿತು. ಈ ಸಿನಿಮಾ ನಂತರ ಪ್ರಭಾಸ್ ಬಾಲಿವುಡ್ ಸ್ಟಾರ್ ಆದರು. ದೊಡ್ಡ ಫ್ಯಾನ್ಸ್ ಫಾಲೋಯಿಂಗ್ ಪಡೆದರು.

'ಮಹಾನಟಿ' ಯಿಂದ ಕೀರ್ತಿಗೆ ರಾಷ್ಟ್ರ ಪ್ರಶಸ್ತಿ

'ಮಹಾನಟಿ' ಯಿಂದ ಕೀರ್ತಿಗೆ ರಾಷ್ಟ್ರ ಪ್ರಶಸ್ತಿ

'ಮಹಾನಟಿ' ಸಿನಿಮಾ ನಟಿ ಕೀರ್ತಿ ಸುರೇಶ್ ಬದುಕಿನಲ್ಲಿ ಬಹಳ ಮುಖ್ಯ ಪಾತ್ರ ವಹಿಸಿದೆ. ತಮಿಳು, ತೆಲುಗು ಸಿನಿಮಾ ಮಾಡಿ, ಅಲ್ಲಿಗೆ ಮಾತ್ರ ಸೀಮಿತವಾಗಿದ್ದ ಅವರು 'ಮಹಾನಟಿ' ಯಿಂದ ದೊಡ್ಡ ಹೆಸರು ಮಾಡಿದರು. ಈ ಸಿನಿಮಾ ಅವರಿಗೆ ರಾಷ್ಟ್ರ ಪ್ರಶಸ್ತಿಯನ್ನು ತಂದು ಕೊಡ್ತು. ಈ ಸಿನಿಮಾದ ನಂತರ ಕೀರ್ತಿಗೆ ದೊಡ್ಡ ಅವಕಾಶಗಳು ಬಂದವು.

'ಅರ್ಜುನ್ ರೆಡ್ಡಿ'ಯಿಂದ ವಿಜಯ ಸಾಧಿಸಿದ ದೇವರಕೊಂಡ

'ಅರ್ಜುನ್ ರೆಡ್ಡಿ'ಯಿಂದ ವಿಜಯ ಸಾಧಿಸಿದ ದೇವರಕೊಂಡ

ವಿಜಯ್ ದೇವರಕೊಂಡ ಸಿನಿ ಜರ್ನಿಯಲ್ಲಿ 'ಅರ್ಜುನ್ ರೆಡ್ಡಿ' ಸಿನಿಮಾ ಬಹಳ ಮುಖ್ಯ ಪಾತ್ರ ವಹಿಸಿದೆ. ಈ ಸಿನಿಮಾದ ನಂತರ ಈ ಸೌತ್ ನಟ ಬಾಲಿವುಡ್ ನಲ್ಲಿಯೂ ಹೆಸರು ಮಾಡಿದರು. ಹಿಂದಿಯ ಸ್ಟಾರ್ ನಟಿಯರು ವಿಜಯ್ ದೇವರಕೊಂಡ ಬಗ್ಗೆ ಮೆಚ್ಚುಗೆ ಸೂಚಿಸಿದರು. 'ಅರ್ಜುನ್ ರೆಡ್ಡಿ' ವಿಜಯ್ ದೇವರಕೊಂಡ ಅದೃಷ್ಟ ಬದಲಿಸಿದ ಸಿನಿಮಾ.

More from Filmibeat

English summary
4 great movie which changed these 4 stars life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X