40 ಸಿನಿಮಾ ಫ್ಲಾಪ್, ಬಿಡುಗಡೆಯಾಗಲೇ ಇಲ್ಲ 33 ಸಿನಿಮಾಗಳು, ಆದರೂ ಸೂಪರ್ ಸ್ಟಾರ್ ; ಯಾರಿವರು ?

ಚಿತ್ರರಂಗ ಬಹುತೇಕರ ಆಕರ್ಷಣೆಯ ಕ್ಷೇತ್ರ. ಬದುಕಿಗಾಗಿ ಯಾವ್ಯಾವುದೋ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದ ಅನೇಕರು ಇಲ್ಲಿ ಬಂದು ಹೆಸರು ಮಾಡಿದ್ದಾರೆ. ಗೆದ್ದಿದ್ದಾರೆ. ಸೋತಿದ್ದಾರೆ. ಆ ಪೈಕಿ ಸೋತ ಕೆಲವರು ಮತ್ತೆ ತಮ್ಮ ಹಳೆಯ ಬದುಕಿಗೆ ಮರಳಿದರೆ, ಇನ್ನು ಕೆಲವರು ಸೋತರು ಕೂಡ ಚಿತ್ರರಂಗದಲ್ಲಿ ಮುಂದುವರೆದಿದ್ದಾರೆ. ವಿಶೇಷ ಅಂದರೆ ಹೀಗೆ ಸೋತರು ಪ್ರಯತ್ನವನ್ನು ಬಿಡದ ಇವರಿಗೆ ಅಭಿಮಾನಿಗಳ ಆಶೀರ್ವಾದವೂ ಸಿಕ್ಕಿದೆ. ಪ್ರೀತಿಯೂ ಸಿಕ್ಕಿದೆ.

ಹೀಗಾಗಿಯೇ ಸೋಲು ಕಂಢರೂ ಕೂಡ ಅವಕಾಶಗಳ ಬರ ಇವರಿಗೆ ಎದುರಾಗುವುದಿಲ್ಲ. ಗೆಲ್ಲುವ ಭರವಸೆ ಕೂಡ ಇವರಲ್ಲಿ ಕಡಿಮೆಯಾಗಲ್ಲ. ನಿರಂತರ ಪ್ರಯತ್ನಗಳನ್ನು ಮಾಡಿಕೊಂಡೇ ಮುನ್ನುಗ್ಗುವ ಇವರಿಗೆ ಹೆಸರು-ಕೀರ್ತಿ ಜೊತೆ ಅಪಾರವಾದ ಹಣ ಹರಿದು ಬರುತ್ತೆ. ಇದಕ್ಕೆ ಸುನಿಲ್ ಶೆಟ್ಟಿ ಅತ್ಯುತ್ತಮ ಉದಾಹರಣೆ.

40 flops 33 unreleased films Yet he lives like a king do you know this actor

ಹೌದು, ಸುನಿಲ್ ಶೆಟ್ಟಿ .. ಬಾಲಿವುಡ್‌ನ ಸ್ಟಾರ್. 1992ರಲ್ಲಿ ಬಲ್ವಾನ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದ ಸುನಿಲ್ ಶೆಟ್ಟಿ ಇಂದು ಕೋಟ್ಯಂತರ ಆಸ್ತಿಯ ಒಡೆಯ. ಒಂದು ವರದಿಯ ಪ್ರಕಾರ ಇವರ ತಿಂಗಳ ಸಂಪಾದನೆಯೇ 50 ಲಕ್ಷದ ಮೇಲಿದೆ.

ಮುಂಬೈನಲ್ಲಿ 20 ಕೋಟಿಯ ಭವ್ಯವಾದ ಬಂಗಲೆಯಲ್ಲಿ ವಾಸ ಮಾಡುವ ಸುನಿಲ್ ಶೆಟ್ಟಿ ಖಂಡಾಲಾದಲ್ಲಿ ಜಹಾನ್ ಎಂಬ ಹೆಸರಿನ ಫಾರ್ಮೌಸ್‌ನ ಕೂಡ ಹೊಂದಿದ್ದಾರೆ. ಇನ್ನು ಕೇವಲ ಸಿನಿಮಾ ಮಾತ್ರವಲ್ಲದೇ ರಿಯಲ್ ಎಸ್ಟೇಟ್‌ ಉದ್ಯಮದಲ್ಲಿ ಕೂಡ ಹಣ ಹೂಡಿರುವ ಸುನಿಲ್ ಶೆಟ್ಟಿ ಎಸ್‌2 ರಿಯಲ್ಟಿ & ಡೆವಲಪರ್ಸ್ ಎಂಬ ಸಂಸ್ಥೆಯ ನಿರ್ದೇಶಕ ಕೂಡ ಹೌದು. ಇಷ್ಟೇ ಅಲ್ಲ ಮುಂಬೈನ ಹಲವಾರು ಕಡೆ ಇವರ ಒಡೆತನದ ಬಟ್ಟೆ ಅಂಗಡಿಗಳಿವೆ. ರೆಸ್ಟೋರೆಂಟ್‌ಗಳಿವೆ.

ಇಂಥಾ ಸುನಿಲ್ ಶೆಟ್ಟಿ ತಮ್ಮ ಮೂರುವರೆ ದಶಕದ ವೃತ್ತಿ ಬದುಕಿನಲ್ಲಿ ಹತ್ತು ಹಲವು ಪಾತ್ರಗಳನ್ನು ಮಾಡಿದ್ದಾರೆ. ಮೊಹರಾ, ದಿಲ್‌ವಾಲೆ, ಗೋಪಿ ಕಿಶನ್, ದಢ್ಕನ್, ಕೃಷ್ಣಾ, ಹೇರಾ ಪೇರಿ, ಬಾರ್ಡರ್ ಹೀಗೆ ಹಲವಾರು ಅವಿಸ್ಮರಣಿಯ ಚಿತ್ರಗಳನ್ನು ನೀಡಿದ್ದಾರೆ. ಆದರೆ. ನಿಮಗೆ ಗೊತ್ತಾ ಹಿಂದಿಯ ಜೊತೆ ಮಲಯಾಳಂ, ತಮಿಳು, ಕನ್ನಡ, ಮರಾಠಿ, ತೆಲುಗು, ಇಂಗ್ಲೀಷ್ ಮತ್ತು ಟರ್ಕಿಶ್ ಭಾಷೆಗಳಲ್ಲಿ ಕೂಡ ಅಭಿನಯಿಸಿರುವ ಸುನಿಲ್ ಶೆಟ್ಟಿ ಇಲ್ಲಿಯವರೆಗೆ 40ಕ್ಕೂ ಅಧಿಕ ಫ್ಲಾಪ್ ಚಿತ್ರಗಳನ್ನು ಕೂಡ ನೀಡಿದ್ದಾರೆ. ಇಷ್ಟೇ ಅಲ್ಲ ಇವರು ಅಭಿನಯಿಸಿರುವ 33 ಚಿತ್ರಗಳಿಗೆ ಇಲ್ಲಿಯವರೆಗೆ ಬಿಡುಗಡೆಯ ಭಾಗ್ಯವೇ ಸಿಗಲಿಲ್ಲ.

ಬಿಡುಗಡೆಯಾಗಲಿಲ್ಲ 33 ಚಿತ್ರಗಳು

ಹೌದು ಖ್ಯಾತಿಯ ತುತ್ತ ತುದಿಯಲ್ಲಿದ್ದಾಗ ಸುನಿಲ್ ಶೆಟ್ಟಿ ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಕಷ್ಟ ಪಟ್ಟು ಅಭಿನಯಿಸಿದ್ದರು.ಆ ಪೈಕಿ 33 ಚಿತ್ರಗಳು ಬಿಡುಗಡೆಯಾಗಲೇ ಇಲ್ಲ. ಹೀಗೆ ಬಿಡುಗಡೆಯಾಗದ 33 ಚಿತ್ರಗಳ ಪಟ್ಟಿ ಈ ಕೆಳಗಿನಂತೆ ಇದೆ.

ಚಿತ್ರದ ಹೆಸರು ನಾಯಕಿಯ ಹೆಸರು

ಏಕ್ ಔರ್ ಫೌಲಾದ್ - ದಿವ್ಯಾ ಭಾರತಿ

ಜಾಹಿಲ್ - ರವೀನಾ ಟಂಡನ್

ಹಮ್ ಹೇ ಆಗ್ - ಸೋಮಿ ಅಲಿ

ಆಯುಧ್ - ಸೋನಾಲಿ ಬೇಂದ್ರೆ

ದಿ ಬಾಡಿಗಾರ್ಡ್ - ಶ್ರೀದೇವಿ

ಕೌರವ್ -

ಆಗೇ - ದಿವ್ಯಾ ಭಾರತಿ

ಚೋರಿ ಮೇರಾ ಕಾಮ್ - ಶಿಲ್ಪಾ ಶೆಟ್ಟಿ

ಕರಮ್‌ವೀರ್ -

ಕ್ಯಾಪ್ಟನ್ ಅರ್ಜುನ್ - ಮಮತಾ ಕುಲಕರ್ಣಿ

ಕಾಲಾ ಪಾನಿ - ಕರಿಷ್ಮಾ ಕಪೂರ್

ಕಮಿಷನರ್ - ಶಿಲ್ಪಾ ಶೆಟ್ಟಿ

ಜುವಾ - ಮನೀಶಾ ಕೊಯಿರಾಲಾ

ರಾಧೆ ಶ್ಯಾಮ್ ಸೀತಾ ರಾಮ್ - ಐಶ್ವರ್ಯ ರೈ

ಪುರಬ್ ಕಿ ಲೈಲಾ ಪಶ್ಚಿಮ್ ಕಾ ಛೈಲಾ- ನಮ್ರತಾ ಪಣೀಶ್ಕರ್

ಏಕ್ ಹಿಂದೂಸ್ತಾನಿ - ರವೀನಾ ಟಂಡನ್

ವಂದೇ ಮಾತರಂ -

ದೀಪಾ - ರವೀನಾ ಟಂಡನ್

ಕೇವಲ ಈ ಚಿತ್ರಗಳು ಮಾತ್ರವಲ್ಲ ಈ ಸಾಲಿನಲ್ಲಿ ಅಖಂಡ್, ಚೋರ್ ಸಿಪಾಹಿ, ಜಜ್ಬಾ, ಮುಕ್ತಿ, ಯಶ್, ಗುಡ್ ನೈಟ್, ಫನ್ಸಿ: ದಿ ಕ್ಯಾಪಿಟಲ್ ಪನಿಶ್ಮೆಂಟ್, ಮುಂಬೈ ಟ್ಯಾಕ್ಸಿ ಸರ್ವಿಸ್, ಶೋಮ್ಯಾನ್, ಚಾಯ್ ಗರಂ, ಮತ್ತು ಶೂಟ್ ಚಿತ್ರಗಳು ಕೂಡ ಇವೆ.

ಸುನಿಲ್ ಶೆಟ್ಟಿ ಜೊತೆ ಈ ಚಿತ್ರಗಳಲ್ಲಿದ್ದರು ಬೇರೆ ಸೂಪರ್ ಸ್ಟಾರ್ಸ್

ಹೀಗೆ ಅರ್ಧಕ್ಕೆ ನಿಂತು ಹೋದ, ನಾನಾ ಕಾರಣಗಳಿಂದ ಬಿಡುಗಡೆಯಾಗದ ಈ ಚಿತ್ರಗಳಲ್ಲಿ ಸುನಿಲ್ ಶೆಟ್ಟಿ ಅವರ ಜೊತೆ ಬೇರೆ ಸೂಪರ್ ಸ್ಟಾರ್‌ಗಳು ಕೂಡ ಇದ್ದರು. ಆ ಪೈಕಿ ಕೌರವ್ ಚಿತ್ರದಲ್ಲಿ ಅಕ್ಷಯ್ ಕುಮಾರ್ ಇದ್ದರೆ, ಚೋರಿ ಮೇರಾ ಕಾಮ್ ಚಿತ್ರದಲ್ಲಿ ಸಲ್ಮಾನ್ ಖಾನ್ ಇದ್ದರು. ಕರಮ್‌ವೀರ್ ಚಿತ್ರದಲ್ಲಿ ವಿನೋದ್ ಖನ್ನಾ ಜೊತೆ ಸುನಿಲ್ ಶೆಟ್ಟಿ ತೆರೆಯನ್ನು ಹಂಚಿಕೊಂಡಿದ್ದರು.

ಕಾಲಾ ಪಾನಿಯಲ್ಲಿ ಅಜಯ್ ದೇವಗನ್ ಮತ್ತು ವಂದೇ ಮಾತರಂ ಚಿತ್ರದಲ್ಲಿ ಸಂಜಯ್ ದತ್ ಜೊತೆ ಸುನಿಲ್ ಶೆಟ್ಟಿ ಅಭಿನಯಿಸಿದ್ದರು. ಆದರೆ ದುರಾದೃಷ್ಟವಶಾತ್ ಈ ಕಾಂಬಿನೇಷನ್‌ನ ಈ ಚಿತ್ರಗಳು ನೋಡುವ ಸೌಭಾಗ್ಯ ಸುನಿಲ್ ಶೆಟ್ಟಿ ಅವರ ಅಭಿಮಾನಿಗಳಿಗೆ ಮತ್ತು ಚಿತ್ರ ಪ್ರೇಮಿಗಳಿಗೆ ಸಿಗಲಿಲ್ಲ.

33 ಚಿತ್ರಗಳಲ್ಲಿ 3 ಚಿತ್ರ ರವೀನಾ ಟಂಡನ್ ಜೊತೆ

ಇನ್ನು ಈ 33 ಚಿತ್ರಗಳಲ್ಲಿ ರವೀನಾ ಟಂಡನ್ ಮೂರು ಚಿತ್ರಗಳಲ್ಲಿ ಸುನಿಲ್ ಶೆಟ್ಟಿಗೆ ನಾಯಕಿಯಾಗಿದ್ದರು. ಏಕ್‌ ಔರ್ ಫೌಲಾದ್ ಮತ್ತು ಆಗೇ ಚಿತ್ರಗಳಲ್ಲಿ ದಿವ್ಯಾ ಭಾರತಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು. ಶಿಲ್ಪಾ ಶೆಟ್ಟಿ ಜೊತೆ ಎರಡು ಬಾರಿ, ಮನಿಶಾ ಕೊಯಿರಾಲಾ, ಐಶ್ವರ್ಯ ರೈ, ಸೋನಾಲಿ ಬೇಂದ್ರೆ, ಕರೀಶ್ಮಾ ಕಪೂರ್, ಸಲ್ಮಾನ್ ಖಾನ್ ಮಾಜಿ ಪ್ರೇಯಸಿ ಸೋಮಿ ಅಲಿ, ಮಮತಾ ಕುಲಕರ್ಣಿಯ ಜೊತೆ ಒಂದು ಬಾರಿ ಸುನೀಲ್ ಶೆಟ್ಟಿ ತೆರೆಯನ್ನು ಹಂಚಿಕೊಂಡಿದ್ದರು.

ಇನ್ನುಳಿದಂತೆ ಸದ್ಯ ಸುನಿಲ್ ಶೆಟ್ಟಿ ಹಲವು ಚಿತ್ರಗಳನ್ನು ಮಾಡುತ್ತಿದ್ದಾರೆ. ಕೇವಲ ಹಿಂದಿಯಲ್ಲಿ ಮಾತ್ರವಲ್ಲದೇ ಬೇರೆ ಬೇರೆ ಭಾಷೆಗಳಲ್ಲಿ ಕೂಡ ಸುನಿಲ್ ಶೆಟ್ಟಿ ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಇನ್ನು ಸುನಿಲ್ ಶೆಟ್ಟಿ ಚಿತ್ರರಂಗಕ್ಕೆ ಬಂದು ಇಷ್ಟು ವರ್ಷಗಳಾದರೂ ಕೂಡ ಇಲ್ಲಿಯವರೆಗೆ ತುಳು ಚಿತ್ರದಲ್ಲಿ ನಟಿಸಿರಲಿಲ್ಲ. ಆದರೆ ಈಗ ರೂಪೇಶ್ ಶೆಟ್ಟಿ ಅಭಿನಯದ ಜೈ ಎಂಬ ಚಿತ್ರದಲ್ಲಿ ಸುನಿಲ್ ಶೆಟ್ಟಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕೋಸ್ಟಲ್‌ವುಡ್‌ಗೆ ಕೂಡ ಸುನೀಲ್ ಶೆಟ್ಟಿ ಕಾಲಿಡುತ್ತಿದ್ದಾರೆ.

More from Filmibeat

English summary
40 flops. 33 unreleased films. Still a star! Yes, we're talking about Sunil Shetty — the man who ruled the 90s with action-packed roles and never let failure dim his shine. From Bollywood sets to luxury living on Altamount Road, he’s built a life many dream of.
Read more about: sunil shetty bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X