ಈ ನಿರ್ದೇಶಕರ ಬದುಕನ್ನು ಬದಲಿಸಿದ್ದು ಈ 5 ಸಿನಿಮಾಗಳು

ಕನ್ನಡದ ಟ್ರೆಂಡಿಂಗ್ ನಿರ್ದೇಶಕರ ಸಾಲಿಗೆ ಸೇರುವವರಲ್ಲಿ ಯೋಗರಾಜ್ ಭಟ್, ಪವನ್ ಒಡೆಯರ್, ರಿಷಭ್ ಶೆಟ್ಟಿ, ಪವನ್ ಕುಮಾರ್, ಶಶಾಂಕ್ ಪ್ರಮುಖವಾಗಿರು.

ಈ ಐದು ನಿರ್ದೇಶಕರ ಸಿನಿ ಜರ್ನಿ ಗಮನಿಸಿದರೆ, ಅನೇಕರಿಗೆ ಮೊದಲು ಸಿಕ್ಕಿದ್ದು ಸೋಲು. ಯೋಗರಾಜ್ ಭಟ್, ಶಶಾಂಕ್ ಮೊದಲ ಪ್ರಯತ್ನಗಳು ಫೇಲ್ ಆದವು. ರಿಷಬ್ ಶೆಟ್ಟಿ, ಪವನ್ ಕುಮಾರ್, ಪವನ್ ಒಡೆಯರ್ ಕೂಡ ದೊಡ್ಡ ಮಟ್ಟದ ಗೆಲುವು ಕಾಣಲು ಆಗಲಿಲ್ಲ. ಆದರೆ, ಇಂತಹ ನಿರ್ದೇಶಕರು ಒಂದು ಒಳ್ಳೆಯ ಗೆಲುವು ಕಂಡಿದ್ದು, ನಂತರದ ಸಿನಿಮಾಗಳಲ್ಲಿ.

ಸ್ಯಾಂಡಲ್ ವುಡ್ ನಲ್ಲಿ ಮೊದಲ ಸಿನಿಮಾದಲ್ಲಿಯೇ ದೊಡ್ಡ ಯಶಸ್ಸು ಪಡೆದ ಅನೇಕ ನಿರ್ದೇಶಕರು ಸಿಗುತ್ತಾರೆ. ಆದರೆ, ಈ ನಿರ್ದೇಶಕರು ತಮ್ಮ ಶಕ್ತಿ ತೋರಿಸಿದ್ದೇ ಎರಡನೇ, ಮೂರನೇ ಪ್ರಯತ್ನದಲ್ಲಿ. ಮರಳಿ ಯತ್ನ ಮಾಡಿದ ಈ ನಿರ್ದೇಶಕರು ಮರೆಯಲಾಗದ ಸಿನಿಮಾವನ್ನು ನೀಡಿದರು.

ಯೋಗರಾಜ್ ಭಟ್ 'ಮುಂಗಾರು ಮಳೆ'ಯನ್ನು ಮರೆಯೋಲ್ಲ

ಯೋಗರಾಜ್ ಭಟ್ 'ಮುಂಗಾರು ಮಳೆ'ಯನ್ನು ಮರೆಯೋಲ್ಲ

ಇಂದಿಗೂ ಅನೇಕರಿಗೆ ಯೋಗರಾಜ್ ಭಟ್ ಮೊದಲ ಸಿನಿಮಾ ಯಾವುದು ಅಂದರೆ, 'ಮುಂಗಾರು ಮಳೆ' ಅಂತ್ತಾರೆ. ಆದರೆ, ಯೋಗರಾಜ್ ಭಟ್ ಮೊದಲು ನಿರ್ದೇಶನ ಮಾಡಿದ್ದ ಚಿತ್ರ 'ಮಣಿ'. ಆ ಸಿನಿಮಾಗೆ ಒಳ್ಳೆಯ ಮಾತುಗಳು ಕೇಳಿ ಬಂದರೂ, ಚಿತ್ರ ಗೆಲ್ಲಲಿಲ್ಲ. ಆ ಸಿನಿಮಾದ ನಂತರ 'ರಂಗ ಎಸ್ ಎಸ್ ಎಲ್ ಸಿ' ಮಾಡಿದರು. ಆದ್ರೆ, ಅದು ಕೂಡ ಫೇಲ್ ಆಯ್ತು. ನಂತರ ಮೂರನೇ ಪ್ರಯತ್ನವಾಗಿ ಬಂದ ಚಿತ್ರ 'ಮುಂಗಾರು ಮಳೆ'. ಆ ಸಿನಿಮಾ ದೊಡ್ಡ ಇತಿಹಾಸ ಸೃಷ್ಟಿ ಮಾಡಿತು.

ಪವನ್ ಒಡೆಯರ್ ಗೆ ಲೈಫ್ ಕೊಟ್ಟ 'ಗೂಗ್ಲಿ'

ಪವನ್ ಒಡೆಯರ್ ಗೆ ಲೈಫ್ ಕೊಟ್ಟ 'ಗೂಗ್ಲಿ'

ನಿರ್ದೇಶಕ ಪವನ್ ಒಡೆಯರ್ ನಿರ್ದೇಶಕರಾಗಿದ್ದು 'ಗೋವಿಂದಾಯ ನಮಃ' ಸಿನಿಮಾದ ಮೂಲಕ. ಆದರೆ, ಪವನ್ ಒಡೆಯರ್ ಲೈಫ್ ನಲ್ಲಿ ದೊಡ್ಡ ಗೆಲುವು ನೀಡಿದ್ದ ಸಿನಿಮಾ ಗೂಗ್ಲಿ. ಈ ಸಿನಿಮಾದ ನಂತರ ಪವನ್ ಒಡೆಯರ್ ಅನೇಕ ಅಭಿಮಾನಿಗಳನ್ನು ಪಡೆದರು. ಯಶ್ ಕೆರಿಯರ್ ಗೂ ಇದು ದೊಡ್ಡ ಸಿನಿಮಾ ಆಯ್ತು. ಈ ಸಿನಿಮಾ ಪವನ್ ಸಿನಿ ಜರ್ನಿ ಬದಲು ಮಾಡಿದೆ.

'ಕಿರಿಕ್ ಪಾರ್ಟಿ' ಮೂಲಕ ಗೆದ್ದ ರಿಷಬ್ ಶೆಟ್ಟಿ

'ಕಿರಿಕ್ ಪಾರ್ಟಿ' ಮೂಲಕ ಗೆದ್ದ ರಿಷಬ್ ಶೆಟ್ಟಿ

ನಿರ್ದೇಶಕ ರಿಷಬ್ ಶೆಟ್ಟಿ ವಿಭಿನ್ನ ಶೈಲಿಯ ಸಿನಿಮಾಗಳನ್ನು ನೀಡುತ್ತಿದ್ದಾರೆ. ನಟ ಆಗಬೇಕು ಎಂದು ಚಿತ್ರರಂಗಕ್ಕೆ ಬಂದ ರಿ‍ಷಭ್ ನಿರ್ದೇಶಕರಾಗಿ ದೊಡ್ಡ ಹೆಸರು ಮಾಡಿದ್ದಾರೆ. ರಿಷಭ್ ಶೆಟ್ಟಿ ಕೆರಿಯರ್ ನಲ್ಲಿ ದೊಡ್ಡ ಹಿಟ್ ನೀಡಿದ್ದು, 'ಕಿರಿಕ್ ಪಾರ್ಟಿ' ಸಿನಿಮಾ. ಆ ಸಿನಿಮಾದ ನಂತರ ಅವರ ಗ್ರಾಫ್ ಮೇಲಕ್ಕೆ ಹೋಯ್ತು. ಆದರೆ, ರಿಭಷ್ ಮೊದಲ ನಿರ್ದೇಶನ ಮಾಡಿದ್ದ ಸಿನಿಮಾ 'ರಿಕ್ಕಿ'.

ಪವನ್ ಕುಮಾರ್ ಗೆ ಹೆಸರು ನೀಡಿದ 'ಲೂಸಿಯಾ'

ಪವನ್ ಕುಮಾರ್ ಗೆ ಹೆಸರು ನೀಡಿದ 'ಲೂಸಿಯಾ'

ಯೋಗರಾಜ್ ಭಟ್ ಟೀಮ್ ನಲ್ಲಿ ಗುರುತಿಸಿಕೊಂಡಿದ್ದ ಪವನ್ ಕುಮಾರ್ 'ಲೈಫು ಇಷ್ಟೇನೆ' ಸಿನಿಮಾದ ಮೂಲಕ ಡೈರೆಕ್ಟರ್ ಆದರು. ದಿಗಂತ್ ನಾಯಕನಾಗಿ ನಟಿಸಿದ್ದ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿಲ್ಲ. ನಂತರ 'ಲೂಸಿಯಾ' ರೀತಿಯ ಪ್ರಯೋಗಾತ್ಮಕ ಸಿನಿಮಾ ಮಾಡಿದ ಪವನ್ ಡಿಫರೆಂಟ್ ಡೈರೆಕ್ಟರ್ ಆಗಿ ಗುರುತಿಸಿಕೊಂಡರು.

Recommended Video

ಹಳೆ ವೃತ್ತಿ ಗಾರೆ ಕೆಲಸಕ್ಕೆ ಮರಳಿದ ನಟ ಚಿಕ್ಕಣ್ಣ | Filmibeat Kannada
'ಮೊಗ್ಗಿನ ಮನಸ್ಸು'ದಿಂದ ಹಿಟ್ ಆದ ಶಶಾಂಕ್

'ಮೊಗ್ಗಿನ ಮನಸ್ಸು'ದಿಂದ ಹಿಟ್ ಆದ ಶಶಾಂಕ್

ಶಶಾಂಕ್ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 'ಮೊಗ್ಗಿನ ಮನಸ್ಸು' ಅವರಿಗೆ ದೊಡ್ಡ ಗೆಲುವು ನೀಡಿದ ಸಿನಿಮಾ. ಆದರೆ, ಅದಕ್ಕೂ ಮೊದಲು ಅವರು 'ಸಿಕ್ಸರ್' ಸಿನಿಮಾ ಮಾಡಿದ್ದರು. ಪ್ರಜ್ವಲ್ ದೇವರಾಜ್ ಈ ಸಿನಿಮಾ ಮೂಲಕ ಲಾಂಚ್ ಆದರು. ಆ ಈ ಸಿನಿಮಾ ಸೋಲು ಅನುಭವಿಸಿತು.

More from Filmibeat

English summary
5 movies which changed these directors career.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X