4 ಸಂಕ್ರಾಂತಿ ಸಿನಿಮಾಗಳು ಅರ್ಧ ಶತಕ: ಯಾವ ಸಿನಿಮಾ ಆ ಎಷ್ಟು ಥಿಯೇಟರ್‌ನಲ್ಲಿ 50 ದಿನ ಪೂರೈಸಿದೆ?
ಈ ವರ್ಷ ಸುಗ್ಗಿ ಸಂಭ್ರಮದಲ್ಲಿ ದಕ್ಷಣ ಭಾರತದ 4 ದೊಡ್ಡ ಸಿನಿಮಾಗಳು ತೆರೆಗಪ್ಪಳಿಸಿದ್ದವು. ತೆಲುಗಿನ 2, ತಮಿಳಿನ 2 ಸಿನಿಮಾಗಳು ತೆರೆಗಪ್ಪಳಿಸಿದ್ದವು. ತೆಲುಗಿನ 'ವಾಲ್ತೇರು ವೀರಯ್ಯ', 'ವೀರಸಿಂಹ ರೆಡ್ಡಿ' ಜೊತೆಗೆ ತಮಿಳಿನ 'ವಾರಿಸು' ಹಾಗೂ 'ಥುನಿವು' ಸಿನಿಮಾ ಸಂಕ್ರಾಂತಿ ವಿಶೇಷವಾಗಿ ರಿಲೀಸ್ ಆಗಿತ್ತು. 4 ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್ ಮಾಡಿದ್ದವು. ಈಗ 50 ದಿನ ಪೂರೈಸಿವೆ.
ಹೌದು ಸಂಕ್ರಾಂತಿ ಸಡಗರದಲ್ಲಿ ಬಿಡುಗಡೆಯಾದ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ಹಾಗೂ ಬಾಲಕೃಷ್ಣ ನಟನೆಯ 'ವೀರಸಿಂಹ ರೆಡ್ಡಿ' ತೆಲುಗು ಪ್ರೇಕ್ಷಕರ ಮನಗೆದ್ದಿವೆ. ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ ಈ 2 ಚಿತ್ರವನ್ನು ನಿರ್ಮಾಣ ಮಾಡಿತ್ತು. ಒಂದು ದಿನದ ಅಂತರದಲ್ಲಿ ತೆರೆಗಪ್ಪಳಿಸಿದ್ದ ಸಿನಿಮಾಗಳು ಭರ್ಜರಿ ಮನರಂಜನೆ ಉಣಬಡಿಸಿದ್ದವು. ಆದರೆ ಎರಡು ಸಿನಿಮಾಗಳ ಬಾಕ್ಸಾಫೀಸ್ ಫೈಟ್‌ನಲ್ಲಿ ಚಿರು ನಟನೆಯ 'ವಾಲ್ತೇರು ವೀರಯ್ಯ' ಸಿನಿಮಾ ಗೆದ್ದಿತ್ತು. ಈಗಾಗಲೇ 2 ಸಿನಿಮಾ ಓಟಿಟಿಗೂ ಬಂದು ಸದ್ದು ಮಾಡ್ತಿದೆ.

ಇನ್ನು ತಮಿಳಿನಲ್ಲಿ ದಳಪತಿ ವಿಜಯ್ ನಟನೆಯ 'ವಾರಿಸು' ಹಾಗೂ ಅಜಿತ್ ಅಭಿನಯದ 'ಥುನಿವು' ಸಿನಿಮಾಗಳು ಸುಗ್ಗಿ ಸಂಭ್ರಮ ಡಬಲ್ ಮಾಡಿದ್ದವು. 2 ಸಿನಿಮಾಗಳಿಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಎರಡೂ ಸಿನಿಮಾಗಳು ಬಾಕ್ಸಾಫೀಸ್ ದೋಚಿದ್ದವು. 200 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿದ್ದವು. ಫ್ಯಾಮಿಲಿ ಎಂಟರ್‌ಟೈನರ್ 'ವಾರಿಸು' ಚಿತ್ರಕ್ಕೆ ವಂಶಿ ಆಕ್ಷನ್ ಕಟ್ ಹೇಳಿದ್ದಾರೆ. ಆಕ್ಷನ್ ಸಿನಿಮಾ 'ಥುನಿವು' ಚಿತ್ರಕ್ಕೆ ವಿನೋದ್ ನಿರ್ದೇಶನವಿದೆ. ಈ ಎರಡು ಸಿನಿಮಾಗಳು ಸಹ ಓಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.

ಸಂಕ್ರಾಂತಿಗೆ ಬಂದ 4 ಸಿನಿಮಾ ಓಟಿಟಿಗೆ ಬಂದಿದ್ದರೂ ಕೂಡ ಥಿಯೇಟರ್‌ಗಳಲ್ಲಿ ಓಟ ಮುಂದುವೆರೆಸಿವೆ. ಇದೀಗ 50 ದಿನ ಕಂಪ್ಲೀಟ್ ಮಾಡಿ ಸುದ್ದಿಯಲ್ಲಿವೆ. 'ವಾಲ್ತೇರು ವೀರಯ್ಯ' 125 ಥಿಯೇಟರ್‌ಗಳಲ್ಲಿ ಈ ಸಾಧನೆ ಮಾಡಿದ್ದರೆ 'ವೀರಸಿಂಹ ರೆಡ್ಡಿ' 54, 'ವಾರಿಸು' 26 ಹಾಗೂ 'ಥುನಿವು' ಸಿನಿಮಾ 13 ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿವೆ. 50 ದಿನ ಪೂರೈಸಿ ಪ್ರದರ್ಶನ ಸದ್ದು ಮಾಡ್ತಿವೆ. ಈ ಲಿಸ್ಟ್‌ನಲ್ಲಿ ಚಿರಂಜೀವಿ ನಟನೆಯ 'ವಾಲ್ತೇರು ವೀರಯ್ಯ' ದಾಖಲೆ ಬರೆದಿದೆ.

4 ಸಿನಿಮಾಗಳಿಗೆ ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಹಬ್ಬದ ಸಂಭ್ರಮದಲ್ಲಿ ಸಿನಿರಸಿಕರು ಸಿನಿಮಾ ನೋಡಲು ಮುಗಿಬಿದ್ದ ಪರಿಣಾಮ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದವು. ಸೀನಿಯರ್ ಸ್ಟಾರ್ಸ್ ಬಾಕ್ಸಾಫೀಸ್‌ನಲ್ಲಿ ತಮ್ಮ ಸ್ಟಾಮಿನಾ ಕಮ್ಮಿ ಆಗಿಲ್ಲ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ. ಬಾಕ್ಸಾಫೀಸ್ ಕ್ಲ್ಯಾಶ್‌ಗೆ ಹೆದರದೇ 4 ಸಿನಿಮಾಗಳು ಒಟ್ಟೊಟ್ಟಿಗೆ ರಿಲೀಸ್ ಆಗಿದ್ದವು. ನಿರ್ಮಾಪಕರ ಲೆಕ್ಕಾಚಾರ ಸರಿಯಾಗಿತ್ತು. ಹಬ್ಬದ ಸಂಭ್ರಮದಲ್ಲಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡ ಸಿನಿಮಾಗಳು ಗೆದ್ದಿವೆ.


Click it and Unblock the Notifications











