50 Years of Mayura; ಅಣ್ಣಾವ್ರ ಎವರ್‌ಗ್ರೀನ್ 'ಮಯೂರ' ಚಿತ್ರದ ಬಜೆಟ್, ಕಲೆಕ್ಷನ್ ಎಷ್ಟಾಗಿತ್ತು?

ವರನಟ ಡಾ. ರಾಜ್‌ಕುಮಾರ್ ನಟಿಸಿದ ಸಿನಿಮಾಗಳು ಒಂದಕ್ಕಿಂತ ಒಂದು ಅದ್ಭುತ. ಒಂದಕ್ಕಿಂತ ಒಂದು ಅದ್ಭುತ ಪ್ರದರ್ಶನ ಕಂಡು ದಾಖಲೆ ಬರೆದಿತ್ತು. ಅಣ್ಣಾವ್ರ ಸಿನಿಬದುಕಿನಲ್ಲಿ ಬಂದ 'ಮಯೂರ' ಚಿತ್ರವನ್ನು ಮರೆಯೋಕೆ ಸಾಧ್ಯವಿಲ್ಲ. ಆ ಅಪರೂಪದ ಸಿನಿಮಾ ಈಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.

ಸೆಪ್ಟೆಂಬರ್ 12, 1975ರಂದು ಐತಿಹಾಸಿಕ ಕಥಾಹಂದರದ 'ಮಯೂರ' ಸಿನಿಮಾ ತೆರೆಗಪ್ಪಳಿಸಿತ್ತು. ಸತತ 25 ವಾರಗಳ ಕಾಲ ಸಿನಿಮಾ ಪ್ರದರ್ಶನ ಕಂಡು ಸಂಚಲನ ಸೃಷ್ಟಿಸಿತ್ತು. ಈ ಸಿನಿಮಾ ಸುತ್ತಾ ಸಾಕಷ್ಟು ಇಂಟ್ರೆಸ್ಟಿಂಗ್ ಕಥೆಗಳಿವೆ. ಕನ್ನಡ ಅಸ್ಮಿತೆಯ ಕಿಡಿ ಹೊತ್ತಿಸಿದ ಕದಂಬ ದೊರೆ ಮಯೂರ ವರ್ಮನ ಕಥೆಯನ್ನು ಈ ಚಿತ್ರದಲ್ಲಿ ಕಟ್ಟಿಕೊಡಲಾಗಿತ್ತು. ಮಯೂರ ವರ್ಮನಾಗಿ ಡಾ. ರಾಜ್ ನಟನೆಯನ್ನು ಮರೆಯೋದುಂಟೆ.

50 Years of Mayura Dr Rajkumar s Record-Breaking film Budget and box office collection details

70ರ ದಶಕದಲ್ಲಿ ಕನ್ನಡ ಚಿತ್ರರಂಗದ ಕಲಾವಿದರು, ತಂತ್ರಜ್ಞರು ಮದ್ರಾಸಿನಲ್ಲಿ ನೆಲೆಸಿದ್ದರು. ಒಮ್ಮೆ ಅಣ್ಣಾವ್ರ ಮನೆಯಲ್ಲಿದ್ದ ರದ್ದಿ ಪೇಪರ್ ತೆಗೆದುಕೊಂಡು ಹೋಗಲು ಬಂದಿದ್ದ ವ್ಯಕ್ತಿ ಬಳಿ ದೇವುಡು ನರಸಿಂಹಶಾಸ್ತ್ರಿ ಬರೆದ 'ಮಯೂರ' ಕಾದಂಬರಿ ಪುಸ್ತಕ ತೆಗೆದುಕೊಂಡು ಪಾರ್ವತಮ್ಮ ರಾಜ್‌ಕುಮಾರ್ ಓದಿದ್ದರು. ಯಾಕೆ ಈ ಕಥೆಯನ್ನು ನಿರ್ಮಾಣ ಮಾಡಬಾರದು ಎಂದು ಮನಸ್ಸು ಮಾಡಿ ಮುಂದೆ ಸಿನಿಮಾ ತಯಾರಾಗಿ ದಾಖಲೆ ಬರೀತು.

'ಮಯೂರ' ಚಿತ್ರವನ್ನು 5 ಬಾರಿ, 10 ಬಾರಿ, 50 ಬಾರಿ ನೋಡಿದ ಅಭಿಮಾನಿಗಳಿದ್ದಾರೆ. ವಿಜಯ್ ನಿರ್ದೇಶನ, ಅಣ್ಣಾವ್ರ ಅಭಿನಯ, ಜಿ. ಕೆ ವೆಂಕಟೇಶ್ ಸಂಗೀತ ಮರೆಯೋಕೆ ಸಾಧ್ಯವಿಲ್ಲ. ಶ್ರೀನಾಥ್, ವಜ್ರಮುನಿ, ಬಾಲಕೃಷ್ಣ, ಮಂಜುಳ, ಎಂ. ಪಿ ಶಂಕರ್, ತೂಗುದೀಪ ಶ್ರೀನಿವಾಸ್ ಸೇರಿ ಘಟಾನುಘಟಿ ಕಲಾವಿದರು ಚಿತ್ರದಲ್ಲಿ ನಟಿಸಿದ್ದರು. ಟಿ. ಪಿ ವೇಣುಗೋಪಾಲ್ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದರು.

'ಮಯೂರ' ಕಾದಂಬರಿ ಆಧರಿಸಿ ಚಿ. ಉದಯಶಂಕರ್ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದರು. ಚಿತ್ರದ 4 ಹಾಡುಗಳಿಗೆ ಸಾಹಿತ್ಯ ರಚಿಸಿದ್ದರು. ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿತ್ತು. ಅಣ್ಣಾವ್ರ ಗಾಯನದಲ್ಲಿ 'ನಾನಿರುವುದೇ ನಿಮಗಾಗಿ' ಹಾಡನ್ನು ಮರೆಯೋಕೆ ಸಾಧ್ಯವಿಲ್ಲ. ಇನ್ನು ಈ ಸಿನಿಮಾ ಬರೆದ ದಾಖಲೆಗಳು ಒಂದೆರಡಲ್ಲ. ಸಿನಿಮಾ ಮರುಬಿಡುಗಡೆ ಆಗಿದ್ದಾಗಲೂ ಯಶಸ್ವಿ ಪ್ರದರ್ಶನ ಕಂಡಿತ್ತು. ಅವತ್ತಿನ ಕಾಲಕ್ಕೆ ಸಿನಿಮಾ ಬಜೆಟ್, ಕಲೆಕ್ಷನ್ ಎಷ್ಟು ಆಗಿತ್ತು? ಮಯೂರ ಕ್ರೇಜ್ ಹೇಗಿತ್ತು? ಚಿತ್ರದ ಬಗೆಗಿನ ಸ್ವಾರಸ್ಯಕರ ಸಂಗತಿಗಳೇನು? ಮುಂದೆ ಓದಿ.

50 Years of Mayura Dr Rajkumar s Record-Breaking film Budget and box office collection details

ಚಿತ್ರದ ಬಜೆಟ್, ಕಲೆಕ್ಷನ್

1975ರಲ್ಲಿ ಅಂದರೆ ಸರಿಯಾಗಿ 50 ವರ್ಷಗಳ ಹಿಂದೆ ಅಂದಾಜು 45 ಲಕ್ಷ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗಿತ್ತು. 3 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. 'ಮಯೂರ' ಸಿನಿಮಾ ಬಿಡುಗಡೆಗೂ 3 ವಾರದ ಮುನ್ನ ಬಾಲಿವುಡ್ 'ಶೋಲೆ' ಸಿನಿಮಾ ತೆರೆಗಪ್ಪಳಿಸಿತ್ತು. ಆಗ ಕರ್ನಾಟಕದಲ್ಲಿ ಹಿಂದಿ ಸಿನಿಮಾಗಳ ಆರ್ಭಟ ಜೋರಾಗಿತ್ತು. 3 ಕೋಟಿ ರೂ. ಬಜೆಟ್ಟಿನ ಆಕ್ಷನ್ ಥ್ರಿಲ್ಲರ್ 'ಶೋಲೆ' ಕನ್ನಡದ 'ಮಯೂರ' ಸಿನಿಮಾ ಗೆದ್ದು ಬೀಗಿತ್ತು.

25 ವಾರ ಪ್ರದರ್ಶನ

ರಾಜ್ಯಾದ್ಯಂತ 34 ಚಿತ್ರಮಂದಿರಗಳಲ್ಲಿ 'ಮಯೂರ' ಸಿನಿಮಾ ಬಿಡುಗಡೆ ಆಗಿತ್ತು. ಬೆಂಗಳೂರಿನ 10 ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬಂದಿತ್ತು. ಕೆಜಿ ರಸ್ತೆಯ ಅಕ್ಕ ಪಕ್ಕ ಸಾಗರ್ ಹಾಗೂ ಸ್ಟೇಟ್ಸ್ ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನವಾಗಿತ್ತು. ಸ್ಟೇಟ್ಸ್ ಚಿತ್ರಮಂದಿರದಲ್ಲಿ ಸತತ 25 ವಾರಗಳ ಕಾಲ ಸಿನಿಮಾ ಪ್ರೇಕ್ಷಕರನ್ನು ರಂಜಿಸಿ ದಾಖಲೆ ಬರೆದಿತ್ತು.

ಅರಮನೆಯಲ್ಲಿ ಚಿತ್ರೀಕರಣ

ಮೈಸೂರಿನ ಅರಮನೆಯಲ್ಲಿ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅವಕಾಶ ಸಿಗುವುದಿಲ್ಲ. ಅವತ್ತಿನ ಕಾಲಕ್ಕೂ ಅನುಮತಿ ಪಡೆಯುವುದು ಸುಲಭವಾಗಿರಲಿಲ್ಲ. ಜಯಚಾಮರಾಜೇಂದ್ರ ಒಡೆಯರ್ ಒಂದು ಷರತ್ತಿನ ಮೇಲೆ 'ಮಯೂರ' ಚಿತ್ರೀಕರಣಕ್ಕೆ ಒಪ್ಪಿದ್ದರು. ಸಿನಿಮಾ ಮೊದಲು ತಮಗೆ ತೋರಿಸಬೇಕು ಎಂದು ಹೇಳಿದ್ದರು. ಆದರೆ ಸಿನಿಮಾ ತಯಾರಾಗುವ ವೇಳೆಗೆ ಅವರು ವಿಧಿವಶರಾಗಿದ್ದರು. ಆ ಬಳಿಕ ಅಂಬಾ ವಿಲಾಸ ಅರಮನೆ ಒಳಗೆ ಯಾವುದೇ ಸಿನಿಮಾ ಚಿತ್ರೀಕರಣಕ್ಕೆ ಅನುಮತಿ ಸಿಗಲೇಯಿಲ್ಲ.

ಎಂಜಿಆರ್ ನಟಿಸಬೇಕಿತ್ತು

ನಿರ್ಮಾಪಕ ಟಿ. ಪಿ ವೇಣುಗೋಪಾಲ್ ಮತ್ತಷ್ಟು ಅದ್ಧೂರಿಯಾಗಿ 'ಮಯೂರ' ಸಿನಿಮಾ ಮಾಡಲು ಬಯಸಿದ್ದರು. ಪಲ್ಲವ ರಾಜನ ಪಾತ್ರದಲ್ಲಿ ತಮಿಳು ನಟ ಎಂಜಿಆರ್ ಹಾಗೂ ರಾಜನರ್ತಕಿ ಪಾತ್ರದಲ್ಲಿ ಹೇಮಾಮಾಲಿನಿ ನಟಿಸಬೇಕು ಎನ್ನುವುದು ಅವರ ಆಸೆ ಆಗಿತ್ತು.

ಮಾ. ಲೋಹಿತ್ ಜನನ

ಇಂಟ್ರೆಸ್ಟಿಗ್ ಅಂದರೆ 'ಮಯೂರ' ಚಿತ್ರದ ಚಿತ್ರೀಕರಣದ ಸಮಯದಲ್ಲೇ ಮಾ. ಲೋಹಿತ್ ಅರ್ಥಾತ್ ಪುನೀತ್ ರಾಜ್‌ಕುಮಾರ್ ಜನನವಾಗಿತ್ತು. ಚಿತ್ರದ ಆರಂಭದಲ್ಲೇ ಟೈಗರ್ ಪ್ರಭಾಕರ್ ಜೊತೆ ಅಣ್ಣಾವ್ರು ಕುಸ್ತಿ ಮಾಡುವ ಸನ್ನಿವೇಶ ಬರುತ್ತದೆ. ಅದನ್ನು ಕೊನೆ ಕೊನೆಗೆ ಚಿತ್ರೀಕರಣ ಮಾಡಲಾಗುತಿತ್ತು. ಮಾರ್ಚ್ 18, 1975ರಂದು ಮದ್ರಾಸಿನಲ್ಲಿ ಅಣ್ಣಾವ್ರ 3ನೇ ಮಗ ಹುಟ್ಟಿದ್ದರು. ಇನ್ನು 'ಮಯೂರ' ಹಾಗೂ ರಾಜಮೌಳಿ ನಿರ್ದೇಶನದ 'ಬಾಹುಬಲಿ' ಚಿತ್ರದ ಕಥೆಗಳಿಗೆ ಹೋಲಿಕೆಯಿದೆ.

More from Filmibeat

English summary
Celebrating 50 Years of Mayura: The Rajkumar Starrer That Redefined Records in Kannada Cinema
Read more about: dr rajkumar sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X